ನಿದ್ರಾ ಹೀನತೆ ಸಮಸ್ಸೆ ತುಂಬಾ ಜನರಲ್ಲಿ ಕಂಡು ಬರುತ್ತದೆ. ಇತ್ತೀಚಿನ ಒತ್ತಡದ ಜೀವನದ ಶೈಲಿ, ತುಂಬಾನೇ ಸ್ಟ್ರೆಸ್ ಇದೆಲ್ಲಾದರಿಂದ ನಿಮಗೆ ನಿದ್ರಾ ಹೀನತೆ ಸಮಸ್ಸೆ ಬರುವುದಕ್ಕೆ ಶುರುವಾಗುತ್ತದೆ. ಬೇರೆ ಬೇರೆ ಯೋಚನೆಯಿಂದ ನಿದ್ರೆ ಕೂಡ ಸರಿಯಾಗಿ ಬರುವುದಿಲ್ಲ. ನಿದ್ರೆ ಸಮಸ್ಸೆ ಇರುವವರಿಗೆ ಸಿಂಪಲ್ ಆಗಿರುವ ಮನೆಮದ್ದು ತಿಳಿಸಿಕೊಡುತ್ತೇವೆ.
ಮೊದಲು ಅರ್ಧ ಲೋಟ ಹಾಲು ಹಾಗು ಇದಕ್ಕೆ ಅರ್ಧ ಲೋಟ ನೀರು ಹಾಕಿ ಬಿಸಿ ಮಾಡಬೇಕು. ಇದಕ್ಕೆ 6 ಕಾಳು ಮೇಣಸಿನ ಪುಡಿಯನ್ನು ಹಾಕಬೇಕು ಮತ್ತು ಒಂದು ಚೀಟಿಕೆ ಅರಿಶಿನ ಹಾಕಿ ಚೆನ್ನಾಗಿ ಕುದಿಸಿ ರಾತ್ರಿ ಊಟ ಮಾಡಿದ ತಕ್ಷಣ ಕುಡಿಯಬೇಕು. ಈ ಎರಡು ಪದಾರ್ಥ ನಿದ್ರಾ ಹೀನತೆಗೆ ಬೆಸ್ಟ್ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಹಲವಾರು ಆರೋಗ್ಯದ ಸಮಸ್ಸೆಗೆ ಇದು ಸಹಾಯ ಮಾಡುತ್ತದೆ. ಜೀರ್ಣ ಕ್ರಿಯೆ ಸಮಸ್ಸೆ ಹಾಗು ನೋವು ನಿವಾರಣೆ ಮಾಡುವ ಶಕ್ತಿಯನ್ನು ಇದು ಹೊಂದಿದೆ. ಇನ್ನು ದೇಹದಲ್ಲಿ ಕೆಟ್ಟ ಕೊಲೆಸ್ಟ್ರೇಲ್ ಜಾಸ್ತಿ ಆಗದಂತೆ ಇದು ನೋಡಿಕೊಳ್ಳುತ್ತದೆ.
ಇದನ್ನು ಕುಡಿಯುವುದರಿಂದ ದೇಹದಲ್ಲಿ ಇರುವ ಕಲ್ಮಶವನ್ನು ಹೊರ ಹಾಕುವುದಕ್ಕೆ ಇದು ಸಹಾಯ ಮಾಡುತ್ತದೆ. ದೇಹದ ತೂಕವನ್ನು ಕಡಿಮೆ ಮಾಡುವುದಕ್ಕೂ ಕೂಡ ಇದು ಸಹಾಯ ಮಾಡುತ್ತದೆ.