7 ಅದ್ಬುತ ಕನಸುಗಳು!ಈ 7 ಎಚ್ಚರಿಕೆಯ ಕನಸುಗಳು ನಂಬಲಾರದ ಅರ್ಥ ಅಡಗಿದೆ!

ಶಾಸ್ತ್ರಗಳಲ್ಲಿ ಸ್ವಪ್ನ ಶಾಸ್ತ್ರವೂ ಕೂಡ ಒಂದು, ಹೆಸರು ಹೇಳುವ ಹಾಗೆ ಸ್ವಪ್ನದ ಬಗ್ಗೆ ಅಂದರೆ ಕನಸುಗಳ ಬಗ್ಗೆ ವಿವರಿಸುವಂತಹ ಶಾಸ್ತ್ರ, ಅವರು ಕೂಡ ನಿದ್ರೆ ಸುಮಂತ ಸಮಯದಲ್ಲಿ ಕನಸುಗಳನ್ನು ಕಾಣುತ್ತಾರೆ ಆದರೆ ಇಂತಹ ಕನಸುಗಳಲ್ಲಿ ಅಸಹಜವಾಗಿ ನೀಡುವಂತಹ ಕನಸುಗಳು ಭವಿಷ್ಯದ ಯಾವುದೋ ಒಂದು ಸೂಚನೆಯನ್ನು ನೀಡುತ್ತದೆ. ಅಸಹಜ ಕನಸು ಎಂದರೆ ನಾವು ಒಂದು ಘಟನೆಯ ಬಗ್ಗೆ ಯೋಚನೆ ಮಾಡದೆ, ಆ ಒಂದು ಕನಸಿನ ಘಟನೆ ನಮ್ಮ ಮನಸ್ಸಿನಲ್ಲಿಯೂ ಇರದೇ ಆಕಸ್ಮಿಕವಾಗಿ ಯಾವುದೋ ಒಂದು ಘಟನೆಗಳು ಕನಸಿನಲ್ಲಿ ಕಾಣುವುದಕ್ಕೆ ಅಸಹಜವಾದ ಕನಸು ಎಂದು ಕರೆಯಲಾಗುತ್ತದೆ, ಇಂತಹ ಘಟನೆಗಳು ಭವಿಷ್ಯದಲ್ಲಿ ಕೆಲವೊಂದು ಘಟನೆಗಳ ಸೂಚನೆಯನ್ನು ನೀಡುತ್ತದೆ.

ಅದೇ ರೀತಿಯಾಗಿ ಸಾಕಷ್ಟು ಜನರಿಗೆ ಇಂತಹ ಅನುಭವ ಆಗಿರುತ್ತದೆ ಕೆಲವೊಮ್ಮೆ ಕನಸಿನಲ್ಲಿ ವಿಚಿತ್ರವಾದ ಅಂತಹ ಕನಸುಗಳು ಬೀಳುತ್ತವೆ, ಇಂತಹ ಕನಸುಗಳು ಭವಿಷ್ಯದಲ್ಲಿ ಕೆಟ್ಟ ಸೂಚನೆಯನ್ನು ನೀಡುತ್ತದೆ, ಎಂದರೆ ಭವಿಷ್ಯದಲ್ಲಿ ಎದುರಾಗಬಹುದಾದ ಅಂತಹ ಅಹಿತಕರ ಘಟನೆಗಳ ಸೂಚನೆಯಾಗಿರುತ್ತದೆ, ಇಂತಹ ಕನಸುಗಳು ಬಿದ್ದಾಗ ಯಾವುದೇ ಕಾರಣಕ್ಕೂ ಕೂಡ ಅದನ್ನು ನಿರ್ಲಕ್ಷಿಸಬಾರದು, ಸರಿಯಾದ ರೀತಿಯಲ್ಲಿ ಪರಿಹಾರಗಳನ್ನು ತೆಗೆದುಕೊಳ್ಳಬೇಕು, ಹಾಗಾದರೆ ಯಾವ ರೀತಿಯಾದ ಕನಸುಗಳು ಬಿದ್ದರೆ ಅದು ಅತ್ಯಂತ ಕೆಟ್ಟ ಕನಸುಗಳು ಬರುತ್ತವೆ ಯಾವ ರೀತಿಯಾದ ಕೆಟ್ಟ ಸೂಚನೆಯನ್ನು ಇದು ನೀಡುತ್ತದೆ ಎಂದು ನೋಡೋಣ.

ಕನಸಿನಲ್ಲಿ ಏನಾದರೂ ಮಾಂಸಹಾರವನ್ನು ಸೇವಿಸುತ್ತಿರುವ ಅಂತಹ ಕನಸುಗಳು ಬಿದ್ದರೆ, ಅಥವಾ ಮಾಂಸವನ್ನು ಮಾಡುತ್ತಿರುವಂತಹ ಕನಸುಗಳು ಬಿದ್ದರೆ ಅದನ್ನು ಕೆಟ್ಟ ಕನಸು ಕೆಟ್ಟ ಸೂಚನೆ ಎಂದು ಹೇಳಲಾಗುತ್ತದೆ, ಇಂತಹ ಕನಸುಗಳು ನಿಮ್ಮ ವ್ಯವಹಾರಗಳಲ್ಲಿ ಸಾಕಷ್ಟು ನಷ್ಟ ಕಷ್ಟಗಳು ಎದುರಾಗುತ್ತವೆ ಎಂಬ ಸೂಚನೆಯನ್ನು ನೀಡುತ್ತದೆ. ಇನ್ನು ಕನಸಿನಲ್ಲಿ ಏಕಕಾಲದಲ್ಲಿ ಮಗು ಮತ್ತು ಮುದುಕನನ್ನು ಕಂಡರೆ ಅದು ಕೂಡ ಜೀವನದಲ್ಲಿ ಕಷ್ಟದ ಸೂಚನೆಯಾಗಿರುತ್ತದೆ ಇಂತಹ ಕನಸುಗಳು ನಿಮಗೆ ಮುಂದಿನ ದಿನಗಳಲ್ಲಿ ಏಕಕಾಲದಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ ಎಂಬ ಸೂಚನೆಯನ್ನು ನೀಡುತ್ತದೆ.

ಇನ್ನು ಸುಂದರವಾದ ಗುಲಾಬಿ ಹೂವುಗಳು ಕನಸಿನಲ್ಲಿ ಕಂಡರೆ ಬಹಳ ಹಿತಕರ ಅನಿಸುತ್ತದೆ, ಆದರೆ ಅದೇ ಗುಲಾಬಿ ಹೂವು ಅರಳುತಿರುವ ಹಾಗೆ ಅಥವಾ ಗುಲಾಬಿ ಹೂವನ್ನು ಬೇರೆಯವರು ಅಥವಾ ನೀವೇ ತಿನ್ನುತ್ತಿರುವ ಹಾಗೆ ಕನಸು ಕಂಡರೆ ಇದು ಅನಾರೋಗ್ಯದ ಸೂಚನೆಯಾಗಿರುತ್ತದೆ ಮುಂದಿನ ದಿನಗಳಲ್ಲಿ ಗಂಭೀರ ವಾದಂತಹ ಅನಾರೋಗ್ಯದ ಸಮಸ್ಯೆಗಳು ಉಂಟಾಗುತ್ತವೆ ಎಂಬ ಸೂಚನೆಯನ್ನು ನೀಡುತ್ತದೆ. ಇನ್ನು ಕನಸಿನಲ್ಲಿ ಏನಾದರೂ ಕೊಳಕಾದ ಅಂತಹ ಸ್ಥಳಗಳಲ್ಲಿ ಅಥವಾ ಜಾಸ್ತಿ ಮುಳ್ಳುಗಳು ಇರುವಂತಹ ಸ್ಥಳಗಳಲ್ಲಿ ನೀವು ಓಡಾಡುವುದು ಮಲಗಿಕೊಳ್ಳುವುದು ಒದ್ದಾಡುವುದು ಇಂತಹ ಕನಸುಗಳು ಬಿದ್ದರೆ ಕೌಟುಂಬಿಕವಾಗಿ ಸಮಸ್ಯೆಗಳು ಗೌರವ ಪ್ರತಿಷ್ಠೆಗಳ ನಷ್ಟ ಎದುರಾಗಬಹುದು.

ಇಂತಹ ಕನಸುಗಳು ಬಿದ್ದಾಗ ಅದನ್ನು ನಿರ್ಲಕ್ಷಿಸದೆ ಸಂಬಂಧಪಟ್ಟವರ ಬಳಿ ಚರ್ಚಿಸಿ ಸರಿಯಾದ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ.

Related Post

Leave a Comment