ಚಂಪಾ ಷಷ್ಠಿಯನ್ನು ಇನ್ನೊಂದು ಹೆಸರಿನಿಂದ ಕರೆಯಲಾಗುತ್ತದೆ ಅದು ಯಾವುದು ಎಂದರೆ ಸ್ಕಂದ ಷಷ್ಠಿ ಎಂದು ಕರೆಯಲಾಗುತ್ತದೆ.ಸ್ಕಂದ ಎಂದರೆ ಸುಬ್ರಹ್ಮಣ್ಯ ಸ್ವಾಮಿ ಅಥವಾ ಕಾರ್ತಿಕೆಯ ಎನ್ನುವ ಅರ್ಥ ಆಗುತ್ತದೆ. ಹಾಗಾಗಿ ಸ್ಕಂದ ಷಷ್ಠಿ ದಿನ ವಿಶೇಷವಾಗಿ ಸುಬ್ರಹ್ಮಣ್ಯ ಸ್ವಾಮಿಯ ಪೂಜೆಯನ್ನು ಮಾಡಲಾಗುತ್ತದೆ.
ಹುತ್ತ ಅಥವಾ ನಾಗರ ಕಲ್ಲಿನ ಹತ್ತಿರ ತನಿ ಅನ್ನು ಏರಿಯಾಲಾಗುತ್ತದೆ. ಈ ಚಂಪಾ ಷಷ್ಠಿ ದಿನ ತನಿ ಎರೆದು ನಾಗರ ಕಲ್ಲನ್ನು ಅಥವಾ ಸ್ವಾಮಿಯ ಸುಬ್ರಹ್ಮಣ್ಯ ಸ್ವಾಮಿಯ ಪೂಜೆ ಮಾಡುತ್ತಾರೋ ಅಂತವರ ಸಂಕಷ್ಟಗಳು ನಿವಾರಣೆ ಆಗುತ್ತದೆ.
ಸಂತಾನ ಭಾಗ್ಯ ಇಲ್ಲದೆ ಇರುವವರಿಗೆ ಸಂತಾನ ಭಾಗ್ಯ ಲಭಿಸುತ್ತದೆ. ಇನ್ನು ಸರ್ಪ ದೋಷ ಇದ್ದರು ಸಹ ನಿವಾರಣೆ ಆಗುತ್ತದೆ.ಈ ವರ್ಷ ಚಂಪಾ ಷಷ್ಠಿ ಡಿಸೆಂಬರ್ 18ನೇ ತಾರೀಕು ಸೋಮವಾರದ ದಿನ ಬಂದಿದೆ. ಷಷ್ಠಿ ತಿಥಿ ಡಿಸೆಂಬರ್ 17 2023 5:33PM ರಿಂದ ಡಿಸೆಂಬರ್ 18ನೇ ತಾರೀಕು 3:13 ಕ್ಕೆ ಮುಕ್ತಯ ಆಗುತ್ತದೆ.
ಹಾಗಾಗಿ ಡಿಸೆಂಬರ್ 18ನೇ ತಾರೀಕು ಉಪವಾಸ ಇದ್ದು ಬೆಳಗ್ಗೆ ನಾಗರ ಕಲ್ಲನ್ನು ಸರಳವಾಗಿ ಪೂಜೆ ಮಾಡಿ ತನಿ ಎರೆದುಕೊಂಡು ಬಂದರೆ ಯಾವುದೇ ದೋಷ ಇದ್ದರು ನೀವಾರಣೆ ಆಗುತ್ತದೆ.ಈ ದಿನ ನೀವು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗೀ ರಥೋತ್ಸವವನ್ನು ನೋಡಿದರೆ ನೀವು ಗೊತ್ತಿಲ್ಲದೆ ಮಾಡಿದ ಎಷ್ಟೋ ಸಮಸ್ಸೆಗಳು ದೂರ ಆಗುತ್ತವೆ.