ಪುಷ್ಯಾ ಮಾಸ ಕೃಷ್ಣ ಪಕ್ಷ ಏಕಾದಶಿ ನಮಗೆ ಷಟ್ತಿಲ ಏಕಾದಶಿ ಎಂದು ಕರೆಯುತ್ತಾರೆ.ಈ ಏಕಾದಶಿ ಫೆಬ್ರವರಿ 5ನೆ ತಾರೀಕು ಸೋಮವಾರ ಸಂಜೆ 5:00ನಿಮಿಷಕ್ಕೆ ಪ್ರಾರಂಭವಾದರೆ 6ನೆ ತಾರೀಕು ಮಂಗಳವಾರ ಸಂಜೆ 4:08 ನಿಮಿಷಕ್ಕೆ ಮುಕ್ತಾಯವಾಗುತ್ತದೆ. ನಾವು 6ನೆ ತಾರೀಕು ಮಂಗಳವಾರದ ದಿನ ಆಚರಣೆ ಮಾಡಬೇಕು.ಈ ಏಕಾದಶಿಯಲ್ಲಿ ಎಳ್ಳಿಗೆ ಹೆಚ್ಚಿನ ಮಹತ್ವವನ್ನು ಕೊಡುತ್ತೇವೆ. ವಿಷ್ಣು ಮತ್ತು ಕೃಷ್ಣನಿಗೆ ಪೂಜೆಯನ್ನು ಮಾಡುವುದು. ಈ ವ್ರತದಲ್ಲಿ ಎಳ್ಳನ್ನು ಹಾಕಿಕೊಂಡು ಸ್ನಾನ ಮಾಡುವುದು ಎಳ್ಳನ್ನು ದಾನ ಮಾಡುವುದು. ಎಳ್ಳನ್ನು ಸೇವನೆ ಮಾಡುವುದು ತುಂಬಾ ಶ್ರೇಯಸ್ಕರ ಎಂದು ಪರಿಗಣಿಸಲಾಗಿದೆ.
ಪೂಜಾ ವಿಧಾನ
ಏಕಾದಶಿ ಹಿಂದಿನ ದಿನ 5ನೆ ತಾರೀಕು ಸೋಮವಾರ ಸಂಜೆನೆ ಉಪವಾಸ ಇರಬೇಕು. ಮಂಗಳವಾರ ಸಂಪೂರ್ಣವಾಗಿ ಉಪವಾಸ ಮಾಡಿಕೊಂಡು ಏಕಾದಶಿ ಆಚರಣೆ ಮಾಡಬೇಕಾಗುತ್ತದೆ. ನಂತರ 7ನೆ ತಾರೀಕು 7:08 ರಿಂದ 9:05 ನಿಮಿಷದ ಒಳಗೆ ಪರಾಣ ಅಂದರೆ ಉಪವಾಸವನ್ನು ಬಿಡಬೇಕು. ಬೆಳಗ್ಗೆ ಸ್ನಾನ ಮಾಡಿ ವಿಷ್ಣುವಿಗೆ ಅನ್ನದಿಂದ ಮಾಡಿದ ನೈವೇದ್ಯವನ್ನು ಇಟ್ಟು ಉಪವಾಸವನ್ನು ಬಿಡಬೇಕು. ಇದಿಷ್ಟು ಏಕಾದಶಿ ನೀವು ಆಚರಣೆ ಮಾಡುವಂತದ್ದು.
ಇನ್ನು ಧೂಪಕ್ಕೆ ಎರಡು ಲವಂಗ ಮತ್ತು ಸ್ವಲ್ಪ ಕಪ್ಪು ಎಳ್ಳು ಹಾಕಿ ಧೂಪ ಹಾಕಿದರೆ ಮನೆಯಲ್ಲಿ ಇರುವ ನೆಗೆಟಿವಿಟಿ ದೂರ ಆಗುತ್ತದೆ.ಹಾಗಾಗಿ ತಪ್ಪದೆ ಈ ಸಮಯದಲ್ಲಿ ಧೂಪ ಹಾಕುವುದನ್ನು ಮರೆಯಬೇಡಿ.
ಈ ಏಕಾದಶಿ ದಿನ ಉಪವಾಸವಿದ್ದು ಧಾರ್ಮಿಕ ಕಾರ್ಯಗಳಲ್ಲಿ ಎಳ್ಳನ್ನು ಬಳಸುವುದರಿಂದ ಬಡತನ ಮತ್ತು ದುಃಖದಿಂದ ಮುಕ್ತಿ ಹೊಂಡುತ್ತೀರಿ. ಜೊತೆಗೆ ಸ್ವರ್ಗವನ್ನು ಪಡೆಯುತ್ತಿರ ಎನ್ನುವ ನಂಬಿಕೆ ಇದೆ. ಈ ಒಂದು ಪೂಜೆಯಲ್ಲಿ ಕಪ್ಪು ಎಳ್ಳನ್ನು ಬಳಸುವ ಮಹತ್ವವಿದೆ. ಈ ಪೂಜೆಯಲ್ಲಿ ಕಪ್ಪು ಬಣ್ಣದ ಹಸುವನ್ನು ಪೂಜೆ ಮಾಡುತ್ತೇವೆ. ವಿಶೇಷವಾಗಿ ಸಾವಿರಾರು ವರ್ಷ ತಪಸ್ಸು ಮತ್ತು ಚಿನ್ನ ದಾನ ಮಾಡಿದಷ್ಟು ಕನ್ಯಾದಾನ ಮಾಡಿದಷ್ಟು ಫಲ ನಿಮಗೆ ಸಿಗುತ್ತದೆ. ಹಾಗಾಗಿ ಎಲ್ಲಾರು ಏಕಾದಶಿ ಆಚರಣೆ ಮಾಡುವಾಗ ಕಪ್ಪು ಹಸು ಪೂಜೆ ಮಾಡಿದರೆ ಒಳ್ಳೆಯದು. ಏಕಾದಶಿ ದಿನ ಯಾವುದೇ ಕಾರಣಕ್ಕೂ ಊಟವನ್ನು ಮಾಡಬಾರದು ಮತ್ತು ಮಾಂಸಹರ ಮಧ್ಯ ಸೇವನೆ ನಿಷಿದ್ದವಾಗಿದೆ. ಏಕಾದಶಿ ದಿನ ತುಳಸಿ ಎಲೆಗಳನ್ನು ಸಹ ಕೀಳಬಾರದು. ಇನ್ನು ಏಕಾದಶಿ ದಿನ ಚಾಪೆ ಮೇಲೆ ಮಲಗುವುದು ತುಂಬಾ ಒಳ್ಳೆಯದು.