ಹಾಸಿಗೆಯಿಂದ ಇಳಿದು ನೀವು ನಿಮ್ಮ ಕಾಲುಗಳನ್ನು ನೆಲದ ಮೇಲೆ ಇಟ್ಟ ತಕ್ಷಣ ಕಿರುಚೋಣ ಅನಿಸುವಷ್ಟು ಫೀಲ್ ಆಗಬಹುದು. ಏಕೆಂದರೆ ಹಿಮ್ಮಡಿ ನೋವು ನಿಮ್ಮ ಕಾಲಿನ ಮೇಲೆ ನೀವೇ ನಿಲ್ಲಲು ಮತ್ತು ನಡೆಯಲು ಬಿಡುವುದಿಲ್ಲ . ಇದು ಇಂದಿನ ಕಾಲದಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಈಗ ವೃದ್ಧರು ಮಾತ್ರವಲ್ಲದೆ, ಯುವಕರು, ಹದಿಹರೆಯದವರೂ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಜಾಸ್ತಿ ಹೊತ್ತು ನಿಂತು ಕೆಲಸ ಮಾಡುವುದರಿಂದ ಈ ಸಮಸ್ಸೆ ಬರುತ್ತದೆ. ಇನ್ನು ಜಾಸ್ತಿ ನಿಲ್ಲದೆ ಇದ್ದರು ಸಹ ಹಿಮ್ಮಡಿ ನೋವು ಬಂದರೆ ಅದು ದೇಹದಲ್ಲಿ ತೂಕ ಜಾಸ್ತಿ ಅದರೆ ಬರುತ್ತದೆ. ಇದಕ್ಕೆ ಒಂದು ಬಕೆಟ್ ನಲ್ಲಿ ಬಿಸಿ ನೀರನ್ನು ತೆಗೆದುಕೊಂಡು ಅದಕ್ಕೆ 50ಗ್ರಾಂ ಸಾಲಿಂದ್ರ ಲವಣ ಹಾಕಿ ಕಾಲನ್ನು ಇಟ್ಟುಕೊಂಡು ಆರಾಮವಾಗಿ ಕುಳಿತುಕೊಳ್ಳಿ. ಇದೆ ರೀತಿ 21 ದಿನಾ ಮಾಡಿದರೆ ಸಾಕು ನಿಮ್ಮ ಹಿಮ್ಮಡಿ ನೋವು ಪಾದದ ನೋವು ಸಂಪೂರ್ಣವಾಗಿ ಗುಣ ಆಗುತ್ತದೆ.
ಇನ್ನು 21 ದಿನ ಹಣ್ಣು ತರಕಾರಿ ಸೇವನೆ ಮಾಡಬೇಕು. ಹೀಗೆ ಮಾಡಿದರೆ ದೇಹದಲ್ಲಿ ಇರುವ ತೂಕ ಬೇಗ ಕಡಿಮೆ ಆಗುತ್ತದೆ. ಇನ್ನು ಬಿಸಿ ನೀರಿನಲ್ಲಿ ಇಟ್ಟ ನಂತರ ರಾತ್ರಿ ಸಮಯದಲ್ಲಿ ಈ ಒಂದು ಟಿಪ್ಸ್ ಅನ್ನು ಅನುಸರಿಸಿ. ಹೊಂಗೆ ಮರದ ಬೀಜದ ಪುಡಿಯನ್ನು ಮಾಡಿಕೊಳ್ಳಿ. ಇದಕ್ಕೆ ಪಂಚ್ಚ ಕರ್ಪೂರವನ್ನು ಪುಡಿ ಮಾಡಿ ಸೇರಿಸಿಕೊಳ್ಳಿ. ಇದನ್ನು ಒಂದು ಲೀಟರ್ ನೀಲಗಿರಿ ಎಣ್ಣೆ ಜೊತೆ ಮಿಶ್ರಣ ಮಾಡಿ ಇಟ್ಟುಕೊಳ್ಳಿ. ಇದನ್ನು ರಾತ್ರಿ ಕಾಲಿಗೆ ಹಚ್ಚಿಕೊಂಡು ಮಾಸಜ್ ಮಾಡಬೇಕು. ನಂತರ ತೆಳುವಾದ ಬಟ್ಟೆ ಸುತ್ತಿ ಮಲಗಬೇಕು. ಇದೆ ರೀತಿ ಮಾಡಿದರೆ ಬೇಗನೆ ಹಿಮ್ಮಡಿ ನೋವು ಕಡಿಮೆ ಆಗುತ್ತದೆ.