ಗುರುವಾರ ಒಂದು ಚಿಟಿಕೆ ಅರಿಶಿನ ಅದೃಷ್ಟ ರಾಜನ ರೀತಿ ಬದಲಾಯಿಸುತ್ತದೆ!

ಗುರುವಾರದ ದಿನ ಚಿಕ್ಕ ಉಪಾಯಗಳನ್ನು ತಿಳಿಸಲಿದ್ದೇವೆ. ಇವುಗಳ ಮೂಲಕ ನೀವು ಭಗವಂತನಾದ ವಿಷ್ಣು ಬೃಹಸ್ಪತಿ ದೇವರ ಕೃಪೆಯಿಂದ ಧನಸಂಪತ್ತು ಸಿರಿ ಸಂಪತ್ತು ಇತ್ಯಾದಿಗಳನ್ನು ಆರಾಮವಾಗಿ ನೀವು ಪಡೆದುಕೊಳ್ಳಬಹುದು. ಭಗವಂತನಾದ ವಿಷ್ಣು ಮತ್ತು ಬೃಹಸ್ಪತಿ ದೇವರಿಗೆ ಹಳದಿ ಬಣ್ಣ ಅತ್ಯಂತ ಪ್ರಿಯವಾಗಿರುತ್ತದೆ. ಹಾಗಾಗಿ ಮೊದಲು ಅರಿಶಿನದ ಚಿಕ್ಕ ಚಿಕ್ಕ ಬೇರುಗಳನ್ನು ತೆಗೆದುಕೊಂಡು ಅವುಗಳಿಂದ ಒಂದು ಮಾಲೆಯನ್ನು ತಯಾರು ಮಾಡಬೇಕಾಗುತ್ತದೆ. ಇವುಗಳಿಂದ ಚಿಕ್ಕದಾಗಿರುವ ಮಾಲೆಯನ್ನು ರೆಡಿ ಮಾಡಿದ ನಂತರ ಮನೆಯ ಮುಖ್ಯ ದ್ವಾರಕ್ಕೆ ಕಟ್ಟಬೇಕು. ಇದರಿಂದ ತಾಯಿ ಲಕ್ಷ್ಮಿ ದೇವಿಯ ಬಂಧನ ಆಗುತ್ತದೆ.

ನಿಮ್ಮ ಕುಂಡಲಿಯಲ್ಲಿ ಇರುವ ಗುರು ಕೂಡ ಶಕ್ತಿಶಾಲಿ ಆಗುತ್ತದೆ. ನಿಮ್ಮ ಮನೆಯಲ್ಲಿ ತಾಯಿ ಲಕ್ಷ್ಮಿ ದೇವಿಯು ಸ್ಥಾಯಿ ರೂಪದಲ್ಲಿ ವಾಸ ಮಾಡಲು ಶುರು ಮಾಡುತ್ತರೆ. ನಿಮ್ಮ ಇಡೀ ಮನೆಯು ಧನ ಧಾನ್ಯದಿಂದ ತುಂಬುತ್ತದೆ. ಪ್ರತಿದಿನ ನಿಮ್ಮ ಮನೆಯಲ್ಲಿ ಧನ ಸಂಪತ್ತಿನಲ್ಲಿ ವೃದ್ಧಿ ಆಗಲು ಶುರು ಆಗುತ್ತದೆ.

ಇನ್ನು ಎರಡನೇ ಉಪಾಯ ನಿರಂತರವಾಗಿ ನಿಮ್ಮ ಮನೆಯಲ್ಲಿ ಹಣಕಾಸಿನಲ್ಲಿ ವೃದ್ಧಿ ಆಗಬೇಕು ಎಂದು ಇಷ್ಟ ಪಡುತ್ತಿದ್ದಾರೆ ಧನ ಸಂಪತ್ತಿನ ಆಗಮನ ನಿರಂತರವಾಗಿ ಆಗಲಿ ಎಂದು ಇಷ್ಟ ಪಡುವುದಾದರೆ ಗುರುವಾರದ ದಿನ ಸ್ನಾನ ಮಾಡುವ ಸಮಯದಲ್ಲಿ ನೀವು ಸ್ನಾನ ಮಾಡುವ ನೀರಿಗೆ ಒಂದು ಚಿಟಿಕೆ ಅರಿಶಿನವನ್ನು ಸೇರಿಸಿ ಸ್ನಾನ ಮಾಡಿರಿ. ಅರಿಶಿನ ನೀರಿನಿಂದ ಸ್ನಾನ ಮಾಡುವುದರಿಂದ ವ್ಯಕ್ತಿಯ ಗುರು ಶಕ್ತಿಶಾಲಿ ಆಗುತ್ತದೆ. ಇವರ ಸಂಪತ್ತಿನಲ್ಲಿ ಧನ ಸಂಪತ್ತಿನ ಆಕರ್ಷಣೆ ಆಗಲು ಶುರು ಆಗುತ್ತದೆ.

ಇನ್ನು ಮೂರನೇ ಉಪಾಯ ಒಂದು ಚಿಟಿಕೆ ಅರಿಶಿನವನ್ನು ಗುರುವಾರದ ದಿನ ಬಾಳೆ ಗಿಡದ ಬೇರಿನ ಹತ್ತಿರ ಅಥವಾ ಅರಳಿ ಮರದ ಕೆಳಗೆ ಮುಚ್ಚಿ ಇಡಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಅಪೂರ್ಣವಾದ ಮನಸ್ಸಿಚ್ಚೆಗಳು ಏನಾದರು ಇದ್ದರೆ ಅವು ಈಡೇರುತ್ತವೆ. ಒಂದು ವೇಳೆ ಮೂರು ವಾರ ಈ ಚಿಕ್ಕ ಉಪಾಯ ಮಾಡಿದರೆ ನಿಮ್ಮ ಇಷ್ಟರ್ಥಗಳು ಈಡೇರುತ್ತವೆ.

ಇನ್ನು ನಾಲ್ಕನೇ ಉಪಾಯ ಏನು ಎಂದರೆ ಗುರವಾರದ ದಿನ ಬಡವರಿಗೆ ಅಥವಾ ಹಸಿದವರಿಗೆ ಅವರಿಗೆ ಹೊಟ್ಟೆ ತುಂಬೋ ವಷ್ಟು ಬಾಳೆಹಣ್ಣು ತಿನ್ನಲು ಕೊಡಬೇಕು. ಇದರಿಂದ ಮನುಷ್ಯನಲ್ಲಿ ಇರುವಂತಹ ಬಡತನ ದರಿದ್ರತೆ ದೂರ ಆಗುತ್ತದೆ.ಭಗವಂತನಾದ ವಿಷ್ಣು ಜೊತೆ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಕೂಡ ನಿಮಗೆ ಸಿಗುತ್ತದೆ. ಒಂದು ವೇಳೆ ಗುರವಾರ ನೀವು ಬಾಳೆಹಣ್ಣು ಧಾನ ಮಾಡಲು ಬಯಸಿದರೆ ಆ ದಿನ ನೀವು ಯಾವುದೇ ಕಾರಣಕ್ಕೂ ಬಾಳೆಹಣ್ಣು ಸೇವನೆ ಮಾಡಬಾರದು. ಯಾವುದೇ ಉಪಾಯ ಮಾಡಿದರು ಅವುಗಳನ್ನು ಗುಪ್ತವಾಗಿ ಇಟ್ಟುಕೊಂಡು ಮಾಡಿ. ಯಾರ ಬಳಿ ಕೂಡ ಆ ಉಪಾಯದ ಬಗ್ಗೆ ಯಾರಿಗೂ ಆ ದಿನ ಹೇಳಬಾರದು.

Related Post

Leave a Comment