ಶಾಸ್ತ್ರಗಳ ಪ್ರಕಾರ ನಮ್ಮ ಮನೆಯಲ್ಲಿ ಕೆಲವು ಪ್ರಾಣಿಗಳು ಇದ್ದರೆ ಒಳ್ಳೆಯದು ಮತ್ತು ಕೆಲವು ಪ್ರಾಣಿಗಳ ಆಗಮನವನ್ನು ಕೆಟ್ಟದ್ದು ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ, ಮಂಗಗಳು ಮನೆಗೆ ಬಂದರೆ, ಅದನ್ನು ಆಂಜನೇಯ ಸ್ವಾಮಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮತ್ತೊಂದೆಡೆ, ಮನೆಗೆ ಬೆಕ್ಕು ಬಂದರೆ, ಅದನ್ನು ಅಲಕ್ಷ್ಮಿಯ ಸವಾರಿ ಎಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬೆಕ್ಕು ಪದೇ ಪದೇ ಮನೆಗೆ ಬಂದರೆ ಅದರ ಹಿಂದಿರುವ ಕಾರಣಗಳ ಬಗ್ಗೆ ತಿಳಿದುಕೊಳ್ಳಬೇಕು. ಇಂದಿನ ಲೇಖನವು ನಿಮ್ಮ ಮನೆಗೆ ಬೆಕ್ಕು ಪದೇ ಪದೇ ಬರುತ್ತಿದ್ದರೆ ಅದರ ಅರ್ಥವೇನೆಂಬುದನ್ನು ತಿಳಿಸುತ್ತದೆ.
ಮನೆಗೆ ಬೆಕ್ಕು:–ಬೆಕ್ಕನ್ನು ಅಲಕ್ಷ್ಮಿಯ ಸವಾರಿ ಎಂದು ಕರೆಯಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅಲಕ್ಷ್ಮಿ ಮನೆಯಲ್ಲಿ ಬಡತನವನ್ನು ತರುತ್ತಾಳೆ. ಇದರೊಂದಿಗೆ ಹಣದ ನಷ್ಟವೂ ಎದುರಾಗುತ್ತದೆ. ಲಕ್ಷ್ಮಿ ದೇವಿಯ ಸಹೋದರಿಯೇ ಈ ಅಲಕ್ಷ್ಮಿ. ಲಕ್ಷ್ಮಿ ಮನೆಯನ್ನು ಪ್ರವೇಶಿಸಿದರೆ ಆ ಮನೆಯು ಹೇಗೆ ಉದ್ಧಾರವಾಗುತ್ತದೆಯೋ ಹಾಗೇ ಅಲಕ್ಷ್ಮಿ ಮನೆಯನ್ನು ಪ್ರವೇಶಿಸಿದರೆ ಆ ಮನೆಯಲ್ಲಿ ಖಂಡಿತ ಅಭಿವೃದ್ಧಿಯಾಗುವುದಿಲ್ಲ.
ಬೆಕ್ಕು ಹಾಲು ಕುಡಿಯುವುದು:-ಧರ್ಮಗ್ರಂಥಗಳ ಪ್ರಕಾರ, ಬೆಕ್ಕು ಮನೆಯಲ್ಲಿ ಇಟ್ಟಿರುವ ಹಾಲನ್ನು ಕದ್ದು ಕುಡಿದರೆ, ಶೀಘ್ರದಲ್ಲೇ ನೀವು ದೊಡ್ಡ ಮಟ್ಟದ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ನಿಮ್ಮ ಮನೆಯಲ್ಲಿ ನೀವು ಬೆಕ್ಕನ್ನು ನೋಡಿದಾಗ ಅದು ಹಾಲು ಕುಡಿದಿದೆಯೇ ಅಥವಾ ಇಲ್ಲವೇ ಎಂಬುದನ್ನು ಗಮನಿಸಬೇಕು. ಒಂದು ವೇಳೆ ಬೆಕ್ಕು ನಿಮ್ಮ ಮನೆಯಲ್ಲಿ ಪದೇ ಪದೇ ಹಾಲನ್ನು ಕದ್ದು ಕುಡಿಯುತ್ತಿದ್ದರೆ ನಿಮ್ಮ ಆರ್ಥಿಕ ಸ್ಥಿತಿಯ ಬಗ್ಗೆ ಎಚ್ಚರಿಕೆಯಿಂದಿರಬೇಕು.
ಬೆಕ್ಕಿನ ಮೂತ್ರ ವಿಸರ್ಜನೆ;–ನಿಮ್ಮ ಮನೆಯಲ್ಲಿ ಬೆಕ್ಕು ಮೂತ್ರ ವಿಸರ್ಜಿಸಿದರೆ, ಅದನ್ನು ತುಂಬಾ ಅಶುಭಕರ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಇದರ ಬೆನ್ನಲ್ಲೇ ಮನೆಯಲ್ಲಿ ಅಹಿತಕರ ಘಟನೆಗಳು ನಡೆಯಲಿವೆ ಎಂದು ಹೇಳಲಾಗುತ್ತದೆ. ಹಾಗಾಗಿ, ಬೆಕ್ಕು ಮನೆಯೊಳಗೆ ಮೂತ್ರ ವಿಸರ್ಜನೆ ಮಾಡದಂತೆ ಎಚ್ಚರಿಕೆ ವಹಿಸಿ.
ಬೆಕ್ಕಿಗೆ ಸಂಬಂಧಿಸಿದ ನಂಬಿಕೆ:–ಬೆಕ್ಕು ಪದೇ ಪದೇ ಮನೆಗೆ ಬಂದರೆ ಮನೆಯಲ್ಲಿ ಅಶುಭ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ ಎಂದು ಕೆಲವರು ನಂಬಿಕೆಯನ್ನು ಹೊಂದಿದ್ದರೆ, ಇನ್ನೂ ಕೆಲವು ಜನರು ಕೆಟ್ಟ ಶಕ್ತಿಗಳನ್ನು ದೂರವಿಡಲು ಬೆಕ್ಕು ಉಪಯುಕ್ತವಾಗಿದೆ ಎಂದು ನಂಬುತ್ತಾರೆ. ಹಾಗಾಗಿ ಮನೆಯಲ್ಲಿ ಬೆಕ್ಕನ್ನು ಸಾಕಿಕೊಳ್ಳುತ್ತಾರೆ.
ಬಿಳಿ ಬೆಕ್ಕು ಶುಭ
ಫೆಂಗ್ ಶೂಯಿ ಪ್ರಕಾರ, ಮನೆಯಲ್ಲಿ ಬೆಕ್ಕನ್ನು ಇಟ್ಟುಕೊಳ್ಳುವುದು ಅಥವಾ ಸಾಕುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಅದರಲ್ಲೂ ಬಿಳಿ ಬಣ್ಣದ ಬೆಕ್ಕನ್ನು ಮನೆಯಲ್ಲಿ ಸಾಕಿದರೆ ಆರ್ಥಿಕ ಪರಿಸ್ಥಿತಿ ಸಾಕಷ್ಟು ಸುಧಾರಿಸಬಹುದು.
ಬೆಕ್ಕು ದಾರಿಗೆ ಅಡ್ಡ ಹೋಗುವುದು:–ಬೆಕ್ಕಿಗೆ ಸಂಬಂಧಿಸಿದ ನಂಬಿಕೆಗಳಲ್ಲಿ ಬೆಕ್ಕು ನಮ್ಮ ಮಾರ್ಗಕ್ಕೆ ಅಡ್ಡಲಾಗಿ ಹೋಗುವುದು ಹೆಚ್ಚು ಜನಪ್ರಿಯ ಮತ್ತು ಇದರ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ಹೆಚ್ಚಿನವರು ಬೆಕ್ಕು ನಮ್ಮ ದಾರಿಗೆ ಅಡ್ಡವಾಗಿ ಹೋದರೆ ಅದನ್ನು ಅಶುಭವೆಂದು ಪರಿಗಣಿಸುತ್ತಾರೆ. ಆದರೆ, ಇದರಲ್ಲಿ ನಾವು ಗಮನಿಸಬೇಕಾದ ವಿಶೇಷತೆಯೆಂದರೆ ಬೆಕ್ಕು ಎಡದಿಂದ ಬಲಕ್ಕೆ ನಮ್ಮ ಮಾರ್ಗವನ್ನು ಹಾದು ಹೋದರೆ ಅದು ಅತ್ಯಂತ ಶುಭ ಸಂಕೇತವಾಗಿದೆ.