ನುಗ್ಗೆ ಕಾಯಿ ತನ್ನಲ್ಲಿ ಸಾಕಷ್ಟು ಆರೋಗ್ಯ ಗುಣಗಳನ್ನು ಹೊಂದಿದೇ. ನುಗ್ಗೆಕಾಯಿ ಮಾತ್ರವಲ್ಲದೆ ಅದರ ಸೊಪ್ಪು ಕೂಡ ಔಷಧಿ ಗುಣವನ್ನು ಹೊಂದಿದೆ. ಇದನ್ನು ಆಹಾರದಲ್ಲಿ ತಪ್ಪದೆ ಬಳಸಿಕೊಂಡರೆ ಆಗ ವಿವಿಧ ರೀತಿಯ ಆರೋಗ್ಯದ ಲಾಭಗಳು ಸಿಗುತ್ತದೆ.ನುಗ್ಗೆ ಸೊಪ್ಪಿನ ಅರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಸಿಕೊಡುತ್ತವೆ.
ನುಗ್ಗೆ ಗಿಡದಿಂದ ಹಲವರು ಅರೋಗ್ಯ ಸಮಸ್ಸೆಯಿಂದ ಅನುಕೂಲ ಇದೆ.ಹಲವರು ಅರೋಗ್ಯ ಪ್ರಯೋಜನಗಳನ್ನು ಒಳಗೊಂಡಿರುವ ಈ ನುಗ್ಗೆ ಸೊಪ್ಪು ಮನುಷ್ಯನ ಮೈ ಕೈ ನೋವಿನ ನಿವಾರಣೆಯಲ್ಲಿಯು ಕೂಡ ಪರಿಣಾಮಕರಿಯಾಗಿ ಕಾರ್ಯ ನಿರ್ವಯಿಸುತ್ತದೆ. ಆಯುರ್ವೇದದಲ್ಲಿ ನುಗ್ಗೆಯ ಸೊಪ್ಪನ್ನು ಉಪಯೋಗಿಸಿ ಔಷಧಿ ತಯಾರು ಮಾಡುತ್ತಾರೆ.
ಕಾಲು ನೋವಿನ ನಿವಾರಣೆಯಲ್ಲೂ ಕೂಡ ನುಗ್ಗೆ ಸೊಪ್ಪಿನ ಪಾತ್ರ ದೊಡ್ಡದು.ನೈಸರ್ಗಿಕವಾಗಿ ಸಿಗುವ ಈ ನುಗ್ಗೆ ಸೊಪ್ಪಿನಲ್ಲಿ ಅಧಿಕ ಪ್ರಮಾಣದಲ್ಲಿ ನೈಸರ್ಗಿಕವಾದ ಔಷಧಿಯಾ ಗುಣಗಳು ಅಡಗಿದೆ.ನುಗ್ಗೆ ಸೊಪ್ಪನ್ನು ಪೇಸ್ಟ್ ರೀತಿ ಮಾಡಿ ನೋವು ಇರುವ ಜಾಗಕ್ಕೆ ಹಚ್ಚಿದರೆ ನೋವು ಕಡಿಮೆ ಆಗುತ್ತದೆ.
ನುಗ್ಗೆ ಸೊಪ್ಪಿನಲ್ಲಿ ಆಂಟಿ ಇನ್ಫ್ಲುಮೆಟರಿ ಸಂಯುಕ್ತಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದರಿಂದ ಇವು ನೋವು ನಿವಾರಣೆ ಮಾಡುವುದರ ಜೊತೆಗೆ ಮಾಂಸಖಂಡಗಳ ಉರಿಯುತದ ಸಮಸ್ಸೆಯನ್ನು ಕೂಡ ನೀವಾರಿಸುತ್ತದೆ.ಒಂದು ವೇಳೆ ಚಳಿಗಾಲದಲ್ಲಿ ಕೈ ಕಾಲು ನೋವು ಕಾಣಿಸಿಕೊಂಡರೆ ಸ್ವಲ್ಪ ನುಗ್ಗೆ ಸೊಪ್ಪಿನ ರಸವನ್ನು ನೋವು ಇರುವ ಜಾಗಕ್ಕೆ ಹಚ್ಚಿದರೆ ನೋವು ಕಡಿಮೆ ಆಗುತ್ತದೆ.ಚರ್ಮದ ಸಮಸ್ಸೆ ಕೂಡ ನುಗ್ಗೆ ಸೊಪ್ಪಿನಿಂದ ವಾಸಿ ಆಗುತ್ತದೆ. ಇನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನುಗ್ಗೆಕಾಯಿ ರಸ ಸೇವಿಸಿದರೆ ಸಕ್ಕರೆ ಕಾಯಿಲೆಗೆ ತುಂಬಾ ಒಳ್ಳೆಯದು.