ಪ್ರಸ್ತುತ ದಿನಗಳಲ್ಲಿ ಗಂಟಲು ನೋವು ಕೂಡ ಸಾಮಾನ್ಯ ಸಮಸ್ಯೆಯಾಗಿದೆ. ನಮ್ಮ ಆಹಾರ ಶೈಲಿ ಗಂಟಲು ನೋವಿಗೆ ಕಾರಣವಾಗುತ್ತದೆ. ಅನೇಕರು ಗಂಟಲು ನೋವಿನ ಕಿರಿಕಿರಿಯನ್ನು ಅನುಭವಿಸಿರುತ್ತಾರೆ. ಈ ಗಂಟಲು ನೋವು ಉಲ್ಬಣಗೊಂಡಾಗ ಅದನ್ನು ನಿಲ್ಲಿಸಲು ಔಷಧಿಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಈ ಸಮಸ್ಯೆಯನ್ನು ಆರಂಭದಲ್ಲಿಯೇ ಪರಿಹರಿಸಲು ಕೆಲವು ಮನೆಮದ್ದುಗಳಿವೆ. ಅವು ಏನೆಂದು ನಾವೀಗ ತಿಳಿದುಕೊಳ್ಳೋಣ.
ಅರಿಶಿನಿ ಮಿಶ್ರಿತ ಹಾಲು: ಅರಿಶಿನ ಮಿಶ್ರಿತ ಹಾಲು ಹಲವಾರು ಆರೋಗ್ಯಕರ ಲಾಭಗಳನ್ನು ಹೊಂದಿದೆ. ಒಂದು ಚಿಟಿಕೆ ಅರಿಶಿನವನ್ನು ಬೆರೆಸಿ ಬೆಚ್ಚಗಿನ ಹಾಲನ್ನು ಕುಡಿಯುವುದರಿಂದ ಯಾವುದೇ ಗಂಟಲಿನ ಸಮಸ್ಯೆ ಮಾಯವಾಗಿಬಿಡುತ್ತದೆ.
ತುಳಸಿ ನೀರು: ಗಂಟಲು ನೋವಿಗೆ ತುಳಸಿ ನೀರು ಅತ್ಯದ್ಭುತ ಪರಿಹಾರವಾಗಿದೆ. ತುಳಸಿಯೊಂದಿಗೆ ಕುದಿಸಿದ ನೀರನ್ನು ಬೆಚ್ಚಗೆ ಮಾಡಿ ಸೇವನೆ ಮಾಡಬೇಕು. ತುಳಸಿ ಚಹಾವು ಗಂಟಲು ನೋವಿಗೆ ಉತ್ತಮ ಪರಿಹಾರವಾಗಿದೆ.
ನಿಂಬೇಹಣ್ಣು: ಒಂದು ನಿಂಬೆಹಣ್ಣನ್ನು ಕತ್ತರಿಸಿ, ಅದರ ಮೇಲೆ ಸ್ವಲ್ಪ ಉಪ್ಪು ಮತ್ತು ಕರಿಮೆಣಸು ಸಿಂಪಡಿಸಿ. ಒಂದು ಚಮಚದೊಂದಿಗೆ ನಿಂಬೆಹಣ್ಣಿನ ಒತ್ತಿರಿ. ಬಳಿಕ ಬಾಣಲೆಯಲ್ಲಿ ನಿಂಬೆಹಣ್ಣನ್ನು ಬಿಸಿ ಮಾಡಿ, ನಂತರ ಅದರ ರಸವನ್ನು ಸ್ವಲ್ಪ ಸ್ವಲ್ಪವಾಗಿ ಕುಡಿಯಿರಿ. ಈ ರೀತಿ ಮಾಡಿದರೆ ನಿಮ್ಮ ಗಂಟಲು ನೋವು ಕ್ಷಣಾರ್ಧದಲ್ಲಿ ಕಾಣೆಯಾಗುತ್ತದೆ.
ಜೇನು ತುಪ್ಪ: ಈ ಜೇನುತುಪ್ಪವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಹೀಗಾಗಿ ಇದು ಗಂಟಲಿನ ಸೋಂಕಿನ ವಿರುದ್ಧ ಪರಿಣಾಕಾರಿಯಾಗಿ ಹೋರಾಡುತ್ತದೆ. ಶುಂಠಿ ಮತ್ತು ನಿಂಬೆ ರಸದೊಂದಿಗೆ ಜೇನುತುಪ್ಪವನ್ನು ಸೇವಿಸುವುದು ಗಂಟಲು ನೋವಿಗೆ ಉತ್ತಮ ಫಲಿತಾಂಶವನ್ನು ನೀಡುತ್ತದೆ.
ಶುಂಠಿ: ಈ ಶುಂಠಿಯು ಡಿಕೊಂಜೆಸ್ಟೆಂಟ್ ಗುಣಗಳನ್ನು ಹೊಂದಿದೆ ಮತ್ತು ನೋಯುತ್ತಿರುವ ಗಂಟಲಿಗೆ ಇದು ಅತ್ಯುತ್ತಮ ಪರಿಹಾರವಾಗಿದೆ. ಶುಂಠಿ ನೀರು, ಶುಂಠಿ ರಸ ಮತ್ತು ನಿಂಬೆ ರಸ, ಶುಂಠಿ ಮತ್ತು ಜೇನು ತುಪ್ಪವನ್ನು ಮಿಶ್ರಣ ಮಾಡಿ ಪ್ರಯತ್ನಿಸಿ ನೋಡಿ, ಇದು ನಿಮ್ಮ ಗಂಟಲಿನಲ್ಲಿರುವ ಕಫವನ್ನು ತಡೆಯಲು ಸಹಾಯ ಮಾಡುತ್ತದೆ.
ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಸಂಯುಕ್ತವಿದೆ. ಇದು ಶಕ್ತಿಯುತವಾದ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಬೆಳ್ಳುಳ್ಳಿಯನ್ನು ಜಗಿಯುವುದು ಮತ್ತು ಬೆಳ್ಳುಳ್ಳಿಯೊಂದಿಗೆ ನೀರು ಕುಡಿಯುವುದು ಉತ್ತಮ ಪರಿಹಾರವಾಗಿದೆ.