ಪ್ರತಿಯೊಬ್ಬರೂ ಹುಣ್ಣಿಮೆ ಅನ್ನು ಈ ರೀತಿ ಪೂಜೆ ಮಾಡಲೇಬೇಕು. ತಮ್ಮ ಇಷ್ಟರ್ಥ ಸಿದ್ದಿ ಆಗಬೇಕು ಮತ್ತು ಮನೆಯಲ್ಲಿರುವ ದರಿದ್ರವನ್ನು ದೂರ ಮಾಡುವುದಕ್ಕೆ, ನಮ್ಮಲ್ಲಿರುವ ಸೋಮಾರಿತನವನ್ನು ದೂರ ಮಾಡುವುದಕ್ಕೋಸ್ಕರ ಯಾವಾಗಲು ಪಾದರಸದ ಹಾಗೆ ಚಟುವಟಿಕೆಯಿಂದ ಇರಬೇಕು ಎಂದರೆ ಈ ಹುಣ್ಣಿಮೆ ದಿನ ಈ ರೀತಿ ಪೂಜೆ ಮಾಡಲೇಬೇಕು.
ಮಾಘ ಮಾಸದಲ್ಲಿ ಹೆಚ್ಚಾಗೂ ಭಾಗವನ್ ವಿಷ್ಣುವಿನ ಆರಾಧನೆಯನ್ನು ಮಾಡುತ್ತೇವೆ. ಸೂರ್ಯೋದಯಕ್ಕೂ ಮುಂಚೆ ಎದ್ದು ಸ್ನಾನ ಮಾಡಿ ಪೂಜೆ ಕಥೆಗಳನ್ನು ಓದುವಂತದ್ದು ದಾನಗಳನ್ನು ಕೊಡುವುದು ತುಂಬಾನೇ ವಿಶೇಷ.ಹುಣ್ಣಿಮೆ ದಿನ ಸಾಧ್ಯವಾದರೆ ನದಿಯಲ್ಲಿ ಸ್ನಾನ ಮಾಡುವುದು ಒಳ್ಳೆಯದು. ಇದೆ 2024 ಫೆಬ್ರವರಿ 23 ಶುಕ್ರವಾರ ಮಧ್ಯಾಹ್ನ 3:30 ನಿಮಿಷಕ್ಕೆ ಹುಣ್ಣಿಮೆ ತಿಥಿ ಪ್ರಾರಂಭವಾಗುತ್ತದೆ. ಮಾರನೇ ದಿನ 24 ಶನಿವಾರ ಸಂಜೆ 6:00 ಗಂಟೆಗೆ ಹುಣ್ಣಿಮೆ ತಿಥಿ ಮುಗಿಯುತ್ತದೆ. ಹಾಗಾಗಿ ಶನಿವಾರದ ದಿನ ಹುಣ್ಣಿಮೆ ಅನ್ನು ಆಚರಣೆ ಮಾಡಬೇಕಾಗುತ್ತದೆ.
ಈ ದಿನ ವಿಶೇಷವಾಗಿ ಲಕ್ಷ್ಮಿ ನಾರಾಯಣರನ್ನು ಪೂಜೆ ಮಾಡಬೇಕು ಹಾಗು ಹುಣ್ಣಿಮೆ ದಿನ ಚಂದ್ರನಿಗೂ ಕೂಡ ಅರ್ಘ್ಯವನ್ನು ಕೊಡಬೇಕು. ಈ ರೀತಿ ಮಾಡಿದರೆ ಚಂದ್ರನ ಆಶೀರ್ವಾದ ಇರುತ್ತದೆ.ಹೀಗೆ ಪ್ರತಿ ಹುಣ್ಣಿಮೆ ದಿನ ಚಂದ್ರನಿಗೆ ಅರ್ಘ್ಯವನ್ನು ಕೊಡುತ್ತ ಬನ್ನಿ ಖಂಡಿತವಾಗಿ ನಿಮ್ಮ ಮನಸ್ಥಿತಿ ಸರಿ ಹೋಗುತ್ತದೆ. ಈ ರೀತಿ ಮಾಡಿದರೆ ಸೋಮಾರಿತನ ಕೂಡ ದೂರವಾಗುತ್ತದೆ.
ಹುಣ್ಣಿಮೆ ಪೂಜೆ ಮಾಡುವವರು ಹಿಂದಿನ ದಿನ ಪೂಜಾ ಸಾಮಗ್ರಿಗಳನ್ನು ರೆಡಿ ಮಾಡಿ ಇಟ್ಟುಕೊಳ್ಳಿ. ಸೂರ್ಯೋದಯಕ್ಕೂ ಮುಂಚೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆಗಳನ್ನು ಧರಿಸಿ ಪೂಜಾ ತಯಾರಿ ಮಾಡಿಕೊಳ್ಳಿ. ವಿಷ್ಣುಗೆ ಸಂಬಂಧಿಸಿದ ಸೂತ್ರ ಪಟನೆ ಮಾಡುವುದು ಒಳ್ಳೆಯದು.