ಜನುಮದಿನ ಎಂಬುದು ನಮಗೆ ಅತ್ಯಂತ ಪ್ರಿಯವಾದದ್ದು. ನಾವು ಹುಟ್ಟಿದ ದಿನವನ್ನು ಹೆಚ್ಚು ಸಂಭ್ರಮದಿಂದ ಆಚರಿಸುತ್ತೇವೆ ಅದರಲ್ಲಿ ಎರಡನೇ ತಾರೀಕಿನಂದು ನೋಡುವುದಾದರೆ. ಒಂದು ಶೂನ್ಯದಿಂದ ಬಂದ ಆಕಾರ. ಇದು ಜಡತ್ವ ಸಂಖ್ಯೆ. ಇದು ನಿದ್ರಾ ಅವಸ್ಥೆ. ಒಂಟಿತನ ಎಲ್ಲರಿಗೂ ಬೇಸರ. ಈ ಕಾರಣದಿಂದಾಗಿ ಒಂದು ಇನ್ನೊಂದುದನ್ನು ಹುಡುಕುತ್ತದೆ. ಒಂದು ಋಣ ಇನ್ನೊಂದು ದನ ಒಂದು ಇನ್ನೊಂದನ್ನು ಸೇರಿ ಎರಡು ಆಯಿತು. ಎರಡು ಜ್ಞಾನ ಸಂಖ್ಯೆಯಾಗಿದೆ. ಜಗತ್ತಿನ ವಿಶಿಷ್ಟ ವ್ಯಾಪಾರ ವ್ಯವಹಾರಗಳು ಈ ಎರಡರಲ್ಲಿದೆ ಜ್ಞಾನ, ಅಜ್ಞಾನ, ಬೆಳಕು, ಕತ್ತಲೆ, ಗಂಡು, ಹೆಣ್ಣು,ಜನ್ಮ ನಾಶ ಇತ್ಯಾದಿ ಜಡಕ್ಕೆ ಚೇತನಾ ಶಕ್ತಿ ಇದಾಗಿದೆ.
ಎರಡನೆಯದು ಪ್ರಪಂಚದ ಆಗುಹೋಗುಗಳು ಎಲ್ಲದಕ್ಕೂ ಈ ಎರಡರ ಜ್ಞಾನ ಅಗತ್ಯ. ಎರಡನ್ನು ತಿಳಿದವನನ್ನು ಸರ್ವಜ್ಞ ಎನ್ನುತ್ತಾರೆ. ಕರ್ಮ ಒಂದು,ಅದರ ಪ್ರತಿಫಲ ಎರಡನೇದು ಜಡತ್ವದಲ್ಲಿ ಚೇತನವನ್ನು ಮೂಡಿಸುವ ಪರಮಾತ್ಮನ ಶಕ್ತಿ ಈ ಎರಡು ಬುದ್ಧಿಕಾರಕ ಬುಧನಾಗಿದ್ದಾನೆ. ಈ ಎರಡನೇ ಶಕ್ತಿ ಬುಧನೇ ಆಗಿರುತ್ತಾನೆ. ಎಲ್ಲದರಲ್ಲೂ ಎರಡನೆಯದಾಗಿ ಇರುವವನು ಬುಧನೇಯಾಗಿರುತ್ತಾನೆ. ಹೃದಯದಲ್ಲಿ ಮೂಡಿ ಬರುವ ವಿಶಿಷ್ಟ ಭಾವನಾ ಲಹರಿಗಳಿಗೂ ಈ ಬುಧನಕಾರಕನು ಕೆಲವು ಕಾರಣದಿಂದಲೇ ಎರಡನೇ ಸಂಖ್ಯೆಗೆ ಬುಧನೇ ಅಧಿಪತಿ, ಬ್ರಹ್ಮ ವಿಷ್ಣು, ಹರ ಇವರಲ್ಲಿ ಎರಡನೆಯವನು ಶ್ರೀ ಹರಿ ಯಾವುದೇ ಒಂದನ್ನು ಎರಡು ಭಾಗ ಮಾಡಿದರೆ ಮಧ್ಯ ಬರುವ ನೆಂಟನು ಎರಡು ಎಲ್ಲಾ ಅಂಕೆಗಳ ಮಧ್ಯದಲ್ಲಿ ಇರುವ ಸಂಖ್ಯೆ ಈ ಬುಧನೇ ಭಾಗಗಳಲ್ಲಿ ಎರಡನೇದು ಬುಧನ ಗುಣ.
ಮಕ್ಕಳಲ್ಲಿ ಎರಡನೇ ಗರ್ಭ ಬುಧನು ಗಂಡಸರಲ್ಲಿ ಎರಡನೆಯವನು ಹೆಂಗಸರಲ್ಲಿ ಎರಡನೇ ಅವಳು ಬುಧನ ಗುಣಕ್ಕೆ ಸೇರಿದವರು. ಎರಡು ಎಲ್ಲೇ ಬರಲಿ ಅದು ಬುಧವಾಗಿರುತ್ತದೆ. ಎರಡು ವಿಜ್ಞಾನ ಸಂಖ್ಯೆಯು ಕೂಡ ಆಗಿದೆ.ಬುದ್ಧಿಯ ಉದಯದ ಸಂಖ್ಯೆಯು ಇದೆ. ಈ ಕಾರಣದಿಂದ ಯಾವುದೇ ತಿಂಗಳಲ್ಲಿ ಎರಡನೇ ತಾರೀಖಿನಂದು ಜನಿಸಿದವರಿಗೆ ಹೆಚ್ಚು ಬುದ್ಧಿವಂತರಾಗುತ್ತಾರೆ. ಉದಾಹರಣೆಗೆ ಮಹಾತ್ಮ ಗಾಂಧಿ, ಲಾಲ್ ಬಹುದ್ದೂರ್ ಶಾಸ್ತ್ರಿ ಇವರ ಜನ್ಮ ದಿನಾಂಕ ಅಕ್ಟೋಬರ್ 2 ಆಗಿದೆ.
ಇವರು ಅಧ್ಯಯನ ಶೀಲರಾಗಿರುತ್ತಾರೆ. ಆಶಾ ಪ್ರವೀಣರು, ಉತ್ತಮ ವ್ಯಕ್ತಿಗಳು, ಉತ್ತಮ ಲೇಖಕರು,ಮಾತಿಗಿಂತ ಮಿಗಿಲು ಇವರ ಲೇಖನವಾಗಿರುತ್ತದೆ. ಇವರಿಗೆ ಜೀವನದ ಎರಡನೇ ಭಾಗ ಅತ್ಯಂತ ಯಶಸ್ವಿ ಭಾಗವಾಗಿದೆ. ಎರಡನೆಯವರ ಅಗತ್ಯ ಎಲ್ಲರಿಗೂ ಇದ್ದೇ ಇರುತ್ತದೆ. ಎರಡನೇ ಉನ್ನತ ಸ್ಥಾನವಾದ ಸೆಕ್ರೆಟರಿ,ಮಂತ್ರಿ,ಉಪ ನಿರ್ದೇಶಕರು ,ಉದ್ಯಮ ಈ ಸಂಖ್ಯೆಯ ಕರ್ಮವಾಗಿದೆ. ಈ ಎರಡರ ಕಾರಣ ಜೀವನದ ಉತ್ತರಾದ 40 ವರ್ಷಗಳ ನಂತರ ಇವರಿಗೆ ಅಭಿವೃದ್ಧಿ, ರಾಜಯೋಗ ಲಭಿಸುತ್ತದೆ. ಎರಡನೇ ತಾರೀಖಿನಂದು ಜನಿಸಿದವರಿಗೆ ಜನನ ಕಾಲದಲ್ಲಿ ಬುಧ ಬಲ ಹೀನ ಆಗುತ್ತದೆ. ಬುದ್ಧಿಯ ನ್ಯೂನ್ಯತೆ ಇದ್ದಾಗ ವಿದ್ಯೆಗೆ ಕಂಟಕ,ಇದಕ್ಕೇ ಪರಿಹಾರ ಅಭಿಮಾನಿ ದೇವತೆ ಶ್ರೀ ಹರಿಯ ಉಪಾಸನೆ ಮಾಡಬೇಕು.