ಈ ಒಂದು ದೀಪರಾಧನೆಯನ್ನು ಮನೆ ಅಥವಾ ದೇವಸ್ಥಾನದಲ್ಲಿ ಎಲ್ಲಿ ಬೇಕಾದರೂ ಹಚ್ಚಬಹುದು. ಮೊದಲು ಒಂದು ಪ್ಲೇಟ್ ನಲ್ಲಿ ಅಕ್ಕಿಯನ್ನು ತೆಗೆದುಕೊಳ್ಳಬೇಕು. ನೀವು ದೇವಸ್ಥಾನದಲ್ಲಿ ಮಾಡುವುದಾದರೆ ಆಡಿಕೆ ತಟ್ಟೆಯನ್ನು ತೆಗೆದುಕೊಂಡು ಹೋಗೀ. ಮನೆಯಲ್ಲಿ ಮಾಡುವುದಾದರೆ ಮನೆಯಲ್ಲಿ ಇರುವ ತಟ್ಟೆಯನ್ನು ಬಳಸಿಕೊಳ್ಳಿ. ನವದುರ್ಗಿ ಪೂಜೆ ಮಾಡುವುದರಿಂದ ನಾವು ಅಕ್ಕಿಯ ಮೇಲೆ ಬೇವಿನ ಸೊಪ್ಪನ್ನು ಇಡಬೇಕು.
ನಂತರ ಒಂದು ಪ್ಲೇಟ್ ನಲ್ಲಿ ಎರಡು ಬೋಟ್ಟಲು ಅಕ್ಕಿ ಹಿಟ್ಟಿನ ದೀಪರಾಧನೆ ತೆಗೆದುಕೊಳ್ಳಿ. ಇದಕ್ಕೆ ಬೆಲ್ಲದ ಪುಡಿಯನ್ನು ಹಾಕಿಕೊಳ್ಳಿ ಮತ್ತು ಸ್ವಲ್ಪ ಏಲಕ್ಕಿ ಪೌಡರ್ ಅನ್ನು ಹಾಕಿ ತುಪ್ಪವನ್ನು ಹಾಕಿ ಸರಿಯಾಗಿ ಗಟ್ಟಿಯಾಗಿ ಇದನ್ನು ಮಿಕ್ಸ್ ಮಾಡಬೇಕು. ಇದಕ್ಕೆ ಸ್ವಲ್ಪ ಅರಿಶಿನದ ಪುಡಿಯನ್ನು ಹಾಕಬೇಕು. ನಂತರ ಎರಡು ದೀಪವನ್ನು ಮಾಡಬೇಕು.
ಈ ದೀಪವನ್ನು ಹಣಕಾಸಿನ ಸಮಸ್ಸೆ ಸಾಲದ ಸಮಸ್ಸೆ ಅಥವಾ ಮಾನಸಿಕ ಒತ್ತಡ ಮನೆಯಲ್ಲಿ ಒಂದು ಶಾಂತಿ ನೆಮ್ಮದಿ ಇದ್ದರೆ ಮತ್ತು ಕಲಹ ಮನಸ್ತಾಪಗಳು ಹೆಚ್ಚಾಗುತ್ತಾ ಇದ್ದರೆ ಎಷ್ಟೇ ಹಣವನ್ನು ಸಂಪಾದನೆ ಮಾಡಿಕೊಂಡರು ಹಣ ಕೈಯಲ್ಲಿ ನಿಲ್ಲುತ್ತಲೇ ಇಲ್ಲಾ ಎನ್ನುವರು ಈ ಒಂದು ದೀಪರಾಧನೆಯನ್ನು ಮಾಡಬಹುದು. ಈ ದೀಪರಾಧನೆ ಮಾಡಿದರೆ ಮನೆಯಲ್ಲಿ ಧನತ್ಮಕ ಶಕ್ತಿ ಅನ್ನೋದು ಹೆಚ್ಚಾಗುತ್ತದೆ. ಲಕ್ಷ್ಮಿ ಅನುಗ್ರಹ ಹೆಚ್ಚಾಗುತ್ತಾ ಹೋಗುತ್ತದೆ. ಈ ದೀಪರಾಧನೆಯನ್ನು ಸಂಜೆ ಸಮಯದಲ್ಲಿ ಮಾಡಬೇಕು.
ಈ ಅಕ್ಕಿ ಹಿಟ್ಟಿನ ದೀಪವನ್ನು ಬೇವಿನ ಸೊಪ್ಪಿನ ಮೇಲೆ ಎರಡು ವೀಳ್ಯದೆಲೆ ಇಟ್ಟು ಇಡಬೇಕು. ಬತ್ತಿಗೆ ಕುಂಕುಮವನ್ನು ಹಚ್ಚಬೇಕು. ಒಂದೊಂದು ದೀಪಕ್ಕೆ ಎರಡು ಎರಡು ಬತ್ತಿಯನ್ನು ಹಾಕಿ ಸಿದ್ಧತೆ ಮಾಡಿಕೊಳ್ಳಬೇಕು. ಎರಡು ಉರಿ ಬರುವ ಹಾಗೆ ಬಟ್ಟೆಯನ್ನು ಒಂದೊಂದು ದೀಪಕ್ಕೆ ಹಾಕಬೇಕು. ದೀಪಕ್ಕೆ ತುಪ್ಪವನ್ನು ಬಿಟ್ಟು ಬೇರೆ ಯಾವುದೇ ಎಣ್ಣೆ ಯನ್ನು ಕೂಡ ಹಾಕಬೇಡಿ. ನಂತರ ದೀಪಕ್ಕೆ ಕುಂಕುಮ ಹಚ್ಚಿ ಅಮ್ಮನವರ ಫೋಟೋ ಮುಂದೆ ಇಟ್ಟು ಪೂಜೆಯನ್ನು ಮಾಡಿ ದೀಪರಾಧನೆ ಮಾಡಬೇಕು.