ತಲೆಸ್ನಾನ ಹಾಗೂ ಅಭ್ಯಂಜನ ಸ್ನಾನಕ್ಕೆ ಇರುವ ವ್ಯತ್ಯಾಸವೇನು ಎಂದರೆ ತಲೆ ಸ್ನಾನ ಅದರೆ ತಲೆಗೆ ಶಂಪೋ ಹಾಕದೆ ಸುಮ್ಮನೆ ನೀರು ಹಾಕಿ ಕೊಳ್ಳುವುದು. ಅಭ್ಯಂಜನ ಸ್ನಾನ ಎಂದರೆ ತಲೆಗೆ ಎಣ್ಣೆಯನ್ನು ಹಚ್ಚಿಕೊಂಡು ಶಂಪೋ ಹಾಕಿ ತಲೆ ಸ್ನಾನ ಮಾಡುವುದು.ಇನ್ನು ಮೈಗೆಲ್ಲ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುವುದಕ್ಕೆ ಅಭ್ಯಂಜನ ಸ್ನಾನ ಎಂದು ಹೇಳುತ್ತಾರೆ.ಗಂಡು ಮತ್ತು ಹೆಣ್ಣು ಮಕ್ಕಳು ಯಾವ ದಿನ ತಲೆ ಸ್ನಾನ ಮಾಡಬೇಕು ಎಂದು ನಿಯಮ ಇದೆ.
ಗಂಡು ಮಕ್ಕಳು ಎಲ್ಲಾ ದಿನವೂ ಕೂಡ ತಲೆ ಸ್ನಾನ ಮಾಡಬಹುದು. ಆದರೆ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಎಲ್ಲಾ ದಿನವೂ ಕೂಡ ತಲೆ ಸ್ನಾನವನ್ನು ಮಾಡಬಾರದು ಹಾಗೂ ಗಂಡು ಮಕ್ಕಳು ಎಲ್ಲಾ ದಿನ ಅಭ್ಯಂಜನ ಸ್ನಾನ ಮಾಡುವುದಕ್ಕೆ ಕೂಡ ಸಾಧ್ಯವಿಲ್ಲ.ಇನ್ನು ಸೋಮವಾರ ಬುಧವಾರ ಶನಿವಾರದ ದಿನ ಅಭ್ಯಂಜನ ಸ್ನಾನ ವನ್ನು ಮಾಡಬಹುದಾಗಿದೆ. ಇನ್ನು ಮಂಗಳವಾರ, ಗುರುವಾರ, ಭಾನುವಾರ ಅಭ್ಯಂಜನ ಸ್ನಾನ ವನ್ನು ಮಾಡಬಾರದು.
ಇನ್ನು ಮಹಿಳೆಯರು ಶುಕ್ರವಾರದ ದಿನ ಹೆಣ್ಣುಮಕ್ಕಳು ಅಭ್ಯಂಜನ ಸ್ನಾನವನ್ನು ಮಾಡಬಹುದು. ಏಕೆಂದರೆ ಶುಕ್ರವಾರದ ದಿನ ಪೂಜೆ ಪುನಸ್ಕಾರಗಳು ಇರುವುದರಿಂದ ಶುಕ್ರವಾರದ ದಿನ ಹೆಣ್ಣುಮಕ್ಕಳು ಅಭ್ಯಂಜನ ಸ್ನಾನವನ್ನು ಮಾಡಬಹುದು. ಒಂದು ವೇಳೆ ಭಾನುವಾರ ಅಭ್ಯಂಜನ ಸ್ನಾನವನ್ನು ಮಾಡುವ ಸಂದರ್ಭ ಬಂದರೆ ಮತ್ತು ಅಭ್ಯಂಜನ ಸ್ನಾನದ ಮಾಡಿದರೆ ಹಾಗೆ ಆಯಸ್ಸು ಕಡಿಮೆಯಾಗುತ್ತದೆ.
ಒಂದು ವೇಳೆ ಭಾನುವಾರದ ದಿನ ಅಭ್ಯಂಜನ ಸ್ನಾನವನ್ನು ಮಾಡಲೇಬೇಕು ಎಂದರೆ ಸ್ನಾನ ಮಾಡುವ ನೀರಿಗೆ ಗುಲಾಬಿ ದಳಗಳನ್ನು ಹಾಕಿದರೆ ಎಲ್ಲಾ ರೀತಿಯ ದೋಷಗಳು ನಿವಾರಣೆ ಆಗುತ್ತದೆ ಮತ್ತು ಆಯಸ್ಸು ಕಡಿಮೆಯಾಗುವುದಿಲ್ಲ. ಒಂದು ವೇಳೆ ಮಂಗಳವಾರ ಕೂಡ ಅಭ್ಯಂಜನ ಸ್ನಾನವನ್ನು ಮಾಡಲೇಬೇಕು ಎಂದರೆ ಹುತ್ತದ ಮಣ್ಣನ್ನು ಮೈಗೆ ಹಚ್ಚಿಕೊಂಡು ಸ್ನಾನವನ್ನು ಮಾಡಬಹುದಾಗಿದೆ. ಈ ರೀತಿ ಮಾಡಿದರೆ ಯಾವುದೇ ರೀತಿಯ ದೋಷಗಳು ಉಂಟಾಗುವುದಿಲ್ಲ.
ಒಂದು ವೇಳೆ ಗುರುವಾರದ ದಿನ ಅಭ್ಯಂಜನ ಸ್ನಾನವನ್ನು ಮಾಡಿದರೆ ದರಿದ್ರ ಬರುತ್ತದೆ. ಮನೆಯಲ್ಲಿ ಖರ್ಚು ಹೆಚ್ಚಾಗುತ್ತದೆ. ಆದಾಯ ಮಾರ್ಗಗಳು ಕಡಿಮೆಯಾಗುತ್ತಾ ಹೋಗುತ್ತದೆ. ಒಂದು ವೇಳೆ ಗುರುವಾರದ ದಿನ ಅಭ್ಯಂಜನ ಸ್ನಾನ ಮಾಡಲೇಬೇಕು ಎಂದರೆ ಗರಿಕೆ ಹುಲ್ಲು ಬೆಳೆದಿರುವ ಮಣ್ಣನ್ನು ಮೈಗೆ ಹಚ್ಚಿಕೊಂಡು ಅಭ್ಯಂಜನ ಸ್ನಾನವನ್ನು ಕೂಡ ಮಾಡಬಹುದು. ಇದರಿಂದ ಯಾವುದೇ ರೀತಿಯ ದೋಷಗಳು ಉಂಟಾಗುವುದಿಲ್ಲ.ಯಾವುದೇ ರೀತಿಯ ಆರ್ಥಿಕ ತೊಂದರೆಗಳು ಸಹ ಉಂಟಾಗುವುದಿಲ್ಲ.ಈ ರೀತಿಯಾಗಿ ಪರಿಹಾರವನ್ನು ಮಾಡಿಕೊಳ್ಳಬೇಕಾಗುತ್ತದೆ.