ತಾಮ್ರದ ವಸ್ತುಗಳನ್ನು ನಮ್ಮ ದಿನನಿತ್ಯದ ಉಪಯೋಗಕ್ಕೆ ಬಳಸಿಕೊಂಡರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇದೆ ಎಂದು ಹಿಂದಿನಿಂದಲೂ ಆಯುರ್ವೇದವು ಹೇಳಿದೆ. ಅದರಲ್ಲೂ ಹಿಂದೆ ಕೆಲವು ತಾಮ್ರದ ಕೈಬಳೆ ಹಾಕಿಕೊಂಡಿರುವುದನ್ನು ನಾವು ಕಾಣುತ್ತೇವೆ. ಆದರೆ ಇದು ಯಾಕೆ ಎನ್ನುವ ಪ್ರಶ್ನೆಯು ಬರದೇ ಇರದು. ತಾಮ್ರದ ಕೈಬಳೆ ಧರಿಸುವುದರಿಂದ ಹಲವಾರು ಲಾಭಗಳು ಇದೆ. ತಾಮ್ರದಲ್ಲಿ ಚಿಕಿತ್ಸಕ ಗುಣ ಇದೆ ಎನ್ನುವುದು ನಮಗೆ ಈಗಾಗಲೇ ತಿಳಿದಿರುವ ವಿಚಾರ.
ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ. ಇದರಿಂದಾಗಿ ತಾಮ್ರವು ತುಂಬಾ ಪ್ರಬಲ ಲೋಹವೆಂದು ಪರಿಗಣಿಸಲಾಗಿದೆ. ದಿನನಿತ್ಯದ ಜೀವನದಲ್ಲಿ ಚಿಕಿತ್ಸೆ ಮತ್ತು ಆರೋಗ್ಯಕ್ಕೆ ತಾಮ್ರದ ಬಳಕೆ ಬಗ್ಗೆ ಆಧುನಿಕ ವೈದ್ಯಕೀಯ ವಿಜ್ಞಾನವು ದೃಢಪಡಿಸಿದೆ. ನಾವು ಸೇವಿಸುವಂತಹ ಆಹಾರದಿಂದ ನಮಗೆ ಹೆಚ್ಚಿನ ತಾಮ್ರದ ಅಂಶವು ಸಿಗುವುದು. ಹಸಿರೆಲೆ ತರಕಾರಿಗಳು, ಇಡೀ ಧಾನ್ಯಗಳು, ಬೀನ್ಸ್ ಮತ್ತು ಬಟಾಟೆಯಲ್ಲಿ ಉನ್ನತ ಮಟ್ಟದ ತಾಮ್ರದ ಅಂಶವಿದೆ. ಗೋಡಂಬಿ, ಒಣ ಹಣ್ಣುಗಳು, ಕರಿಮೆಣಸು ಮತ್ತು ಯೀಸ್ಟ್ ನಲ್ಲಿ ಇದು ಅತ್ಯಧಿಕ ಪ್ರಮಾಣದಲ್ಲಿದೆ.
ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ‘ನೀರು ಕುಡಿದರೆ’ ಆರೋಗ್ಯವಾಗಿರುವಿರಿ:–ತಾಮ್ರವು ದೇಹದ ಆರೋಗ್ಯವನ್ನು ಕಾಪಾಡುವುದು ಮತ್ತು ದೇಹದಲ್ಲಿ ಧನಾತ್ಮಕ ಶಕ್ತಿ ಉಂಟು ಮಾಡಲು ಅದು ನೆರವಾಗುವುದು ಎಂದು ಸಾಬೀತಾಗಿದೆ. ಇದು ಮಾನಸಿಕ ಆರೋಗ್ಯವನ್ನು ಸುಧಾರಣೆ ಮಾಡುವುದು. ಶಾಂತಿಯುತ ವಾತಾವರಣಕ್ಕಾಗಿ ಮನೆಯಲ್ಲಿ ಹೆಚ್ಚಾಗಿ ತಾಮ್ರದ ಮೂರ್ತಿಗಳು ಮತ್ತು ಅಲಂಕಾರಿಕ ವಸ್ತುಗಳನ್ನು ಇಡುವರು. ತಾಮ್ರದ ಬಾಟಲಿಗಳು, ಲೋಟಗಳು ಮತ್ತು ಪಾತ್ರೆಗಳನ್ನು ನೋಡಿರಬಹುದು. ಅಷ್ಟು ಮಾತ್ರವಲ್ಲದೆ ನಾಲಗೆ ಸ್ವಚ್ಛ ಮಾಡುವಂತಹ ಸಾಧನವು ತಾಮ್ರದಿಂದ ಮಾಡಲ್ಪಟ್ಟಿ ರುವುದು ಸಿಗುವುದು. ಕೆಲವು ಮಂದಿ ತಾಮ್ರದ ಉಂಗುರು ಅಥವಾ ಕೈಬಳೆ ಹಾಕಿರುವುದನ್ನು ನೋಡಿರುತ್ತೇವೆ. ಇದು ಪ್ರತಿರೋಧಕ ಶಕ್ತಿ ಹೆಚ್ಚಿಸುವುದು ಮತ್ತು ನಕಾರಾತ್ಮಕತೆ ದೂರ ಮಾಡುವುದು.
ತಾಮ್ರದ ಉಂಗುರು ಧರಿಸಿದರೆ ಸಿಗುವ ಆರೋಗ್ಯ ಲಾಭಗಳು:–ತಾಮ್ರದ ಉಂಗುರ ಧರಿಸಿದರೆ ದೇಹದಲ್ಲಿ ಇರುವಂತಹ ತಾಮ್ರದ ಕೊರತೆ ಸಮಸ್ಯೆ ನಿವಾರನೆ ಮಾಡಬಹುದು. ಇದರಿಂದ ನಿದ್ರೆಯ ಸಮಸ್ಯೆ, ದೃಷ್ಟಿ ಸುಧಾರಣೆ ಮತ್ತು ಚಯಾಪಚಯವನ್ನು ಇದು ವೃದ್ಧಿಸುವುದು. ಇದು ವ್ಯಕ್ತಿಯ ಆಧ್ಯಾತ್ಮಿಕ ಶಕ್ತಿ ಹೆಚ್ಚಿಸುವುದು. ಪರಿಶುದ್ಧ ತಾಮ್ರದ ಉಂಗುರ / ಕೈಬಳೆಯ ಲಾಭಗಳನ್ನು ಇಲ್ಲಿ ನೀಡಲಾಗಿದೆ.
ಪ್ರತಿರೋಧಕ ವ್ಯವಸ್ಥೆ ಆರೋಗ್ಯವಾಗಿಡುವುದು;–ತಾಮ್ರವು ಮಾನಸಿಕ ಸಮತೋಲನವು ಸುಧಾರಣೆ ಮಾಡುವುದು ಮತ್ತು ದೇಹವನ್ನು ಬಲ ಗೊಳಿಸುವುದು. ಇದು ರಕ್ತವನ್ನು ಶುದ್ಧೀಕರಿಸುವುದು ಮತ್ತು ಹಿಮೋಗ್ಲೋಬಿನ್ ಜಮೆಯಾಗಲು ನೆರವಾಗುವುದು ಮತ್ತು ದೇಹದಲ್ಲಿ ರಕ್ತಸಂಚಾರ ಸರಾಗವಾಗಿ ಆಗುವಂತೆ ಮಾಡುವುದು. ದೇಹಕ್ಕೆ ಬೇರೆ ಯಾವುದೇ ರೀತಿಯ ಲೋಹದಿಂದ ಆಗುವಂತಹ ಹಾನಿಯನ್ನು ತಡೆಯಲು ಇದು ತಡೆಯುವುದು.
ರಕ್ತದೊತ್ತಡ ಕಾಪಾಡುವುದು:–ತಾಮ್ರದ ಉಂಗುರವು ರಕ್ತದೊತ್ತಡವನ್ನು ಸಮತೋಲನದಲ್ಲಿ ಇಡುತ್ತದೆ. ಇದರಿಂದ ಅಧಿಕ ರಕ್ತದೊತ್ತಡ ಮತ್ತು ರಕ್ತದೊತ್ತಡ ಕಡಿಮೆ ಆಗುವ ಸಮಸ್ಯೆಯು ನಿವಾರಣೆ ಆಗುವುದು. ತಾಮ್ರದ ಉಂಗುರು ಧರಿಸಿರುವ ವ್ಯಕ್ತಿಯು ಬೇರೆಲ್ಲಾ ವ್ಯಕ್ತಿಗಿಂತಲೂ ಉತ್ತಮ ರಕ್ತದೊತ್ತಡ ಹೊಂದಿರುವರು.
ಹೃದಯರಕ್ತನಾಳದ ಆರೋಗ್ಯ ಕಾಪಾಡುವುದು:–ತಾಮ್ರವು ದೇಹದಲ್ಲಿ ಕಾಲಜನ್, ಎಲಾಸ್ಟಿನ್ ಮತ್ತು ನಾರುಗಳನ್ನು ಕ್ರಾಸ್ ಲಿಂಕ್ ಮಾಡಲು ನೆರವಾಗುವುದು. ಈ ಎಲಾಸ್ಟಿನ್ ನಾರಿನಾಂಶವು ಮಹಾಪಧಮನಿ ಮತ್ತು ಅದರ ಸುತ್ತಮುತ್ತಲು ಇರುವುದು. ತಾಮ್ರವು ಈ ನಾರುಗಳನ್ನು ಬಲಪಡಿಸುವುದು ಮತ್ತು ಯಾವುದೇ ಸಮಸ್ಯೆಗಳನ್ನು ತಡೆಯುವುದು.
ಮೂಳೆಗಳನ್ನು ಬಲಪಡಿಸುವುದು:-ಮೂಳೆ ಮತ್ತು ಗಂಟು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ತಾಮ್ರದ ನೋವು ನಿವಾರಕ ಕೈಬಳೆ ತುಂಬಾ ನೆರವಾಗುವುದು. ತಾಮ್ರದ ಉಂಗುರ ಮತ್ತು ಕೈಬಳೆಯು ಗಂಟು ನೋವು ಅಥವಾ ಸಂಧಿವಾತ ನಿವಾರಣೆ ಮಾಡುವುದು. ಇದು ಮೂಳೆಗಳಿಗೆ ಶಮನ ನೀಡುವುದು ಮತ್ತು ಬಲಗೊಳಿಸುವುದು. ಮೂಳೆಗೆ ಸಂಬಂಧಿಸಿದ ಅನಾರೋಗ್ಯವನ್ನು ಇದು ದೂರ ಮಾಡುವುದು. ಗಂಟುಗಳಿಗೆ ಇದು ಆರಾಮ ನೀಡುವುದು, ಅಸ್ಥಿರಂಧ್ರತೆ ಮತ್ತು ಸಂಧಿವಾತದ ನೋವು ದೂರ ಮಾಡುವುದು.
ರಾತ್ರಿ ಯಾವತ್ತೂ ಎಡ ಮಗ್ಗುಲಿಗೆ ಹೊರಳಿ ಮಲಗಿ, ಬಲ ಮಗ್ಗುಲಿಗೆ ಅಲ್ಲ!
ಖನಿಜಾಂಶ ಹೀರಿಕೊಳ್ಳುವುದನ್ನು ಉತ್ತೇಜಿಸುವುದು:–ತಾಮ್ರದ ಉಂಗುರ ಅಥವಾ ಕೈಬಳೆಯಲ್ಲಿ ಕೆಲವೊಂದು ಸೂಕ್ಷ್ಮ ಖನಿಜಾಂಶಗಳಾಗಿರುವಂತಹ ಸತು ಮತ್ತು ಕಬ್ಬಿನಾಂಶವು ಇದೆ. ಇದನ್ನು ದೇಹವು ಸುಲಭವಾಗಿ ಹೀರಿಕೊಳ್ಳುವುದು. ಈ ಖನಿಜಾಂಶಗಳು ರಕ್ತನಾಳಗಳಿಗೆ ತಲುಪುವುದು ಮತ್ತು ಖನಿಜಾಂಶದ ಸಪ್ಲಿಮೆಂಟ್ ತೆಗೆದುಕೊಳ್ಳುವುದಕ್ಕಿಂತಲೂ ಇದು ಹೆಚ್ಚು ಪರಿಣಾಮಕಾರಿ. ಕಬ್ಬಿನಾಂಶ ಅಥವಾ ರಕ್ತಹೀನತೆಯಿಂದ ಬಳಲುತ್ತಿರುವ ಜನರಿಗೆ ಇದು ತುಂಬಾ ಲಾಭಕಾರಿ ಆಗಿರಲಿದೆ.
ಹೊಟ್ಟೆಗೆ ಶಮನ ನೀಡುವುದು:–ಹೊಟ್ಟೆಗೆ ಸಂಬಂಧಿಸಿರುವ ಹಲವಾರು ರೀತಿಯ ಸಮಸ್ಯೆಗಳನ್ನು ಇದು ನಿವಾರಣೆ ಮಾಡುವುದು ಎಂದು ಹೇಳಲಾಗಿದೆ. ಇದು ಅಸಿಡಿಟಿ ತಡೆಯುವುದು ಮತ್ತು ಹೊಟ್ಟೆಗೆ ಶಮನ ನೀಡುವುದು.
ವಯಸ್ಸಾಗುವ ಲಕ್ಷಣಗಳನ್ನು ತಡೆಯುವ ಗುಣ:–ತಾಮ್ರದಲ್ಲಿ ವಯಸ್ಸಾಗುವ ಲಕ್ಷಣ ತಡೆಯುವ ಗುಣವಿದೆ. ಇದರಿಂದಾಗಿ ಇದು ಇನ್ನು ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ತಾಮ್ರದಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ದೇಹದಲ್ಲಿ ವಿಷಕಾರಿ ಅಂಶವು ಹೆಚ್ಚಾಗದಂತೆ ತಡೆಯುವುದು. ತಾಮ್ರವು ಎಲಾಸ್ಟಿಕ್ ನಾರಿನ ಸಾಂದ್ರತೆ ಬಲಪಡಿಸುವುದು ಮತ್ತು ಕಾಲಜನ್ ಉತ್ಪತ್ತಿ ಹೆಚ್ಚಿಸುವುದು. ಇದರಿಂದಾಗಿ ಚರ್ಮ, ಕೂದಲು ಪುನರ್ಶ್ಚೇತನಗೊಳ್ಳುವುದು.
ಸಂಧಿವಾತ:–ತಾಮ್ರದ ಕೈಬಳೆ ಧರಿಸುವ ಮುಖ್ಯ ಉದ್ದೇಶವೆಂದರೆ ದೇಹವು ತಾಮ್ರದ ಅಂಶವನ್ನು ಹೀರಿಕೊಳ್ಳುವ ಮೂಲಕ ಗಂಟುಗಳಲ್ಲಿ ಕಾರ್ಟಿಲೆಜ್ ಮರುಬೆಳೆಯಲು ನೆರವಾಗುವುದು. ಇದು ಸಂಧಿವಾತ ಉರಿಯೂತ ಮತ್ತು ನೋವನ್ನು ಕಡಿಮೆ ಮಾಡುವುದು. ಆದರೆ ಸಂಶೋಧನೆಗಳು ಇದನ್ನು ಇದುವರೆಗೆ ಸಾಬೀತು ಮಾಡಿಲ್ಲ. ಪ್ರಾಣಿಗಳ ಮೇಲೆ ನಡೆಸಿರುವ ಸಂಶೋಧನೆಗಳ ಪ್ರಕಾರ ತಾಮ್ರದ ಬಳಕೆಯಿಂದಾಗಿ ಮೂಳೆಗಳ ಅವನತಿ ತಡೆಯಬಹುದು ಎಂದು ಹೇಳಲಾಗುತ್ತಿದೆ.
ನರ ವ್ಯವಸ್ಥೆ ಮತ್ತು ಮೆದುಳಿನ ಕಾರ್ಯ:-ತಾಮ್ರದ ಅಸಮತೋಲನ ಮತ್ತು ತಾಮ್ರದ ಅಂಶವು ಕಡಿಮೆ ಇದ್ದರೆ ಆಗ ನರ ಅವನತಿ ಪರಿಸ್ಥಿತಿ ಉಂಟಾಗುವುದು. ತಾಮ್ರವು ಸರಿಯಾಗಿ ಚಯಾಪಚಯಗೊಳ್ಳದೆ ಇದ್ದರೆ ಆಗ ಅಲ್ಝೈಮರ್ ಕಾಯಿಲೆ ಉಂಟಾಗುವುದು. ಈ ವೇಳೆ ಮೆದುಳಿನಲ್ಲಿ ಅತಿಯಾಗಿ ತಾಮ್ರದ ಅಂಶವು ಶೇಖರಣೆ ಆಗುವುದು. ಅಲ್ಝೈಮರ್ ನ್ನು ತಡೆಯಲು ತಾಮ್ರದ ಸಪ್ಲಿಮೆಂಟ್ ಗಳು ನೆರವಾಗಬಹುದು ಅಥವಾ ಬೆಳವಣಿಗೆ ಆಗದಂತೆ ಇದು ತಡೆಯುವುದು ಎಂದು ಅಧ್ಯಯನಗಳು ಹೇಳಿವೆ. ಆದರೆ ತಾಮ್ರದ ಕೈಬಳೆ ಬಳಕೆ ಬಗ್ಗೆ ಇನ್ನಷ್ಟು ದೃಢಪಡಿಸಿಕೊಳ್ಳಲು ಮಾನವ ಸಂಶೋಧನೆಗಳು ಅಗತ್ಯವಾಗಿ ಬೇಕು.
ಪ್ರತಿರೋಧಕ ವ್ಯವಸ್ಥೆಗೆ ಬಲ ನೀಡುವುದು:–ಬಿಳಿ ರಕ್ತ ಕಣಗಳನ್ನು ಉತ್ಪತ್ತಿ ಮತ್ತು ಪ್ರಸಾರ ಮಾಡುವಲ್ಲಿ ತಾಮ್ರವು ಪ್ರಮುಖ ಪಾತ್ರ ವಹಿಸುವುದು. ತಾಮ್ರದ ಕೊರತೆಯನ್ನು ನ್ಯೂಟ್ರೋಪೆನಿಯಾ ಎಂದು ಕರೆಯಲಾಗುತ್ತದೆ. ದೇಹದಲ್ಲಿ ಬಿಳಿ ರಕ್ತದ ಕಣಗಳು ಕಡಿಮೆ ಆಗುವುದು ಮತ್ತು ಅದು ಸೋಂಕಿನ ವಿರುದ್ಧ ಹೋರಾಡಲು ವಿಫಲವಾಗಿರುವುದು. ಸಣ್ಣ ಶಿಶುಗಳಲ್ಲಿ ಈ ಸಮಸ್ಯೆಯು ಅತಿಯಾಗಿ ಇರುತ್ತದೆ ಎಂದು ಅಧ್ಯಯನಗಳು ಹೇಳಿವೆ. ತಾಮ್ರದ ಕೊರತೆ ಇರುವಂತಹ ಸಣ್ಣ ಶಿಶುಗಳಲ್ಲಿ ನಡೆಸಿದ ಅಧ್ಯಯನದಿಂದಲೂ ಇದನ್ನು ಕಂಡುಕೊಳ್ಳಲಾಗಿದೆ. ದೇಹವು ಕೈಬಳೆಯಿಂದ ಹೀರಿಕೊಳ್ಳುವ ತಾಮ್ರದ ಅಂಶಕ್ಕಿಂತಲೂ ತಾಮ್ರದ ಸಪ್ಲಿಮೆಂಟ್ ನಲ್ಲಿ ಹೆಚ್ಚಿನ ತಾಮ್ರದ ಅಂಶವಿರುವುದು.
ಯಾವ ಬೆರಳಿಗೆ ತಾಮ್ರದ ಉಂಗುರ ಧರಿಸಬೇಕು?:–ಗರಿಷ್ಠ ಲಾಭ ಪಡೆಯಲು ಪರಿಶುದ್ಧವಾದ ತಾಮ್ರದ ಉಂಗುರವನ್ನು ತೋರು ಬೆರಳಿಗೆ ಧರಿಸಬೇಕು. ಪುರುಷರು ಬಲದ ಕೈಗೆ ಮತ್ತು ಮಹಿಳೆಯರು ಎಡದ ಕೈಗೆ ಇದನ್ನು ಧರಿಸಬೇಕು. ಇದನ್ನು ಧರಿಸುವ ಮೊದಲು ನೀವು ಗಂಗಾಜಲದಿಂದ ಶುದ್ಧಗೊಳಿ. ಭಾನುವಾರ ಮಧ್ಯಾಹ್ನ 12 ಗಂಟೆಗೆ ಮೊದಲು ಇದನ್ನು ಧರಿಸಿ.
ತಾಮ್ರದ ಉಂಗುರವು ಬೆರಳಿನಲ್ಲಿ ಹಸಿರು ಬಣ್ಣ ಬಿಡುವುದೇ?:-ದೀರ್ಘಕಾಲ ತನಕ ನೀವು ತಾಮ್ರದ ಉಂಗುರವನ್ನು ಬಳಕೆ ಮಾಡಿದರೆ ಆಗ ಬೆರಳಿನ ಮೇಲೆ ಹಸಿರು ಬಣ್ಣ ಕಂಡುಬರುವುದು. ಕೆಲವು ಜನರು ಈ ಬಣ್ಣ ಬಿಡುವುದನ್ನು ತಾಮ್ರವು ಸರಿಯಾಗಿ ಕೆಲಸ ಮಾಡುತ್ತಿದೆ ಮತ್ತು ದೇಹದಲ್ಲಿರುವ ನಾಕಾರಾತ್ಮಕತೆ ಹೀರಿಕೊಳ್ಳುತ್ತಿದೆ ಎಂದು ತಿಳಿಯುವರು. ತಾಮ್ರವು ಬೆವರು, ಗಾಳಿ ಅಥವಾ ಬೇರೆ ರಾಸಾಯನಿಕಗಳಾಗಿರುವಂತಹ ಲೋಷನ್, ಸೋಪ್ ಇತ್ಯಾದಿಗಳಿಗೆ ಒಗ್ಗಿಕೊಂಡ ವೇಳೆ ಇದು ಹಸಿರು ಆಗುವುದು. ಇದು ಚರ್ಮದಲ್ಲಿ ಕಲೆ ಉಂಟು ಮಾಡಬಹುದು. ಈ ಬಣ್ಣ ಬಿಡುವುದು ಸುರಕ್ಷಿತ ಮತ್ತು ಯಾವುದೇ ಹಾನಿ ಉಂಟು ಮಾಡದು. ಆದರೆ ಸೋಪ್ ಮತ್ತು ನೀರು ಹಾಕಿ ಇದನ್ನು ಸರಿಯಾಗಿ ತೊಳೆಯಿರಿ. ತಾಮ್ರದ ಉಂಗುರ ಅಥವಾ ಕೈಬಳೆಯು ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡುವುದು ಮಾತ್ರವಲ್ಲದೆ ವ್ಯಕ್ತಿಯ ಸಂಪೂರ್ಣ ಬೆಳವಣಿಗೆಗೆ ನೆರವಾಗುವುದು. ಇದು ದೈಹಿಕ ಮಾತ್ರವಲ್ಲದೆ, ಆಧ್ಯಾತ್ಮಿಕವಾಗಿಯು ಬೆಳೆಯುವಂತೆ ಮಾಡುವುದು. ನಿಮಗೆ ಯಾವುದೇ ಗೊಂದಲಗಳು ಇದ್ದರೆ ಆಗ ನೀವು ಜ್ಯೋತಿಷಿಯನ್ನು ಭೇಟಿ ಮಾಡಿ.
ನೆನಪಿಡಿ ಊಟದ ಬಳಿಕ ಅಪ್ಪಿತಪ್ಪಿಯೂ ಇಂತಹ ತಪ್ಪುಗಳನ್ನು ಮಾಡದಿರಿ!
ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕ ಲಾಭಗಳು ತಾಮ್ರದ ಕೈಬಳೆ ಧರಿಸುವ ಲಾಭಗಳನ್ನು ಜ್ಯೋತಿಷ್ಯವು ಈ ರೀತಿಯಾಗಿ ಹೇಳಿದೆ..*ತಾಮ್ರವು ದೇಹಕ್ಕೆ ಶಮನ ನೀಡುವುದು. ಇದು ನಮ್ಮ ಇಂದ್ರೀಯಗಳನ್ನು ನಿಯಂತ್ರಿಸುವುದು.
ಇದರಿಂದ ಕೋಪ ಮತ್ತು ಆತಂಕವನ್ನು ದೂರವಿಡುವುದು.*ಆಧಾತ್ಮಿಕವಾಗಿ ಇದು ಎಚ್ಚರಿಸುವುದು. ಇದು ಮನಸ್ಸು ಮತ್ತು ಆತ್ಮವನ್ನು ರಕ್ಷಿಸುವುದು.*ಜಾತಕದಲ್ಲಿ ಗೃಹಗತಿಗಳ ಸ್ಥಾನಪಲ್ಲಟದಿಂದ ಉಂಟಾಗುವ ಸೂರ್ಯ ಮತ್ತು ಚಂದ್ರನ
ನಕಾರಾತ್ಮಕ ಪ್ರಭಾವ ತಪ್ಪಿಸುವುದು.*ತಾಮ್ರದ ಉಂಗುರವು ಆಧ್ಯಾತ್ಮಿಕವಾಗಿ ನಿಮ್ಮ ವ್ಯಕ್ತಿತ್ವವನ್ನು ಸುಧಾರಣೆ ಮಾಡುವುದು.ಉಳಿದವರಿಗಿಂತ ಇದು ನಿಮ್ಮನ್ನು ತುಂಬಾ ಜನಪ್ರಿಯಗೊಳಿಸುವುದು.