ತುಳಸಿ ಗಿಡ ಪ್ರತಿಯೊಬ್ಬರ ಮನೆಯಲ್ಲೂ ಕೂಡ ನೆಲೆಸಿರುವ ಸಾಕ್ಷಾತ್ ಲಕ್ಷ್ಮಿ ಎಂದು ಹೇಳಬಹುದು. ತುಳಸಿಗಿಡ ಯಾರ ಮನೆಯಲ್ಲಿ ಇರುತ್ತದೆಯೋ ಅವರ ಮನೆಯಲ್ಲಿ ಸದಾ ಸಂತೋಷ ನೆಮ್ಮದಿಯಿಂದ ಕೂಡಿರುತ್ತದೆ. ಜೊತೆಗೆ ಅವರ ಮನೆಯಲ್ಲಿ ಕಾಯಿಲೆಗಳು ತುಂಬಾನೇ ಬೇಗಾ ದೂರ ಆಗುತ್ತದೆ. ಏಕೆಂದರೆ ಈ ಗಿಡದಲ್ಲಿ ಅಷ್ಟೊಂದು ಔಷಧಿಗುಣ ಇದೆ. ಸಾವಿರಾರು ವರ್ಷದಿಂದಲೂ ಕೂಡ ಈ ತುಳಸಿ ಗಿಡವನ್ನು ಆಯುರ್ವೇದ ಔಷಧಿ ಯಲ್ಲಿ ಇದನ್ನು ಉಪಯೋಗ ಮಾಡುತ್ತ ಬಂದಿದ್ದಾರೆ.ಇನ್ನು ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆ ಸೇವನೆ ಮಾಡುವುದರಿಂದ ಈ ರೀತಿಯ ಉಪಯೋಗಗಳು ಆಗುತ್ತದೆ.
ತುಳಸಿ ಗಿಡದಲ್ಲಿ ಕ್ಯಾಲ್ಸಿಯಂ, ಐರಿನ್,ವಿಟಮಿನ್ ಕೆ, ಮೆಗ್ನಿಸಿಯಂ ಇದೆ. ಇದು ಆರೋಗ್ಯಕ್ಕೆ ತುಂಬಾನೇ ಉತ್ತಮವಾದದ್ದು. ಇನ್ನು ಖಾಲಿಹೊಟ್ಟೆಯಲ್ಲಿ ತುಳಸಿ ಎಲೆಯನ್ನು ಸೇವನೆ ಮಾಡುವುದರಿಂದ ಇದು ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ತುಳಸಿ ಎಲೆಯಲ್ಲಿ ಆಂಟಿಆಕ್ಸಿಡೆಂಟ್ ಗಳು ಸಮೃದ್ಧವಾಗಿದ್ದು ಇದು ಸೋಂಕಿನ ವಿರುದ್ಧ ಕೂಡ ಹೋರಾಡುತ್ತದೆ.
ಖಾಲಿಹೊಟ್ಟೆಯಲ್ಲಿ ತುಳಸಿ ನೀರನ್ನು ಕುಡಿಯುವುದರಿಂದ ಸಕ್ಕರೆ ಕಾಯಿಲೆ ನಿವಾರಣೆಯಾಗುತ್ತದೆ. ಇನ್ನು ಖಾಲಿಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವನೆ ಮಾಡುವುದರಿಂದ ಇದು ಜೀರ್ಣ ಕ್ರಿಯೆ ವ್ಯವಸ್ಥೆಯನ್ನು ಕೂಡ ಅರೋಗ್ಯವಾಗಿ ಇಡುತ್ತದೆ ಹಾಗೂ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವನೆ ಮಾಡಿದಾಗ ದೇಹದಲ್ಲಿ ಪಿಎಚ್ ಮಟ್ಟವನ್ನು ಕೂಡ ಕಾಪಾಡುತ್ತದೆ. ಜೊತೆಗೆ ದೇಹದಲ್ಲಿ ಇರುವಂತಹ ಆಮ್ಲೆಯತೆಯನ್ನು ಕೂಡ ನಿಯಂತ್ರಣದಲ್ಲಿ ಇಡುತ್ತದೆ.
ಇನ್ನು ಪ್ರತಿನಿತ್ಯ ತುಳಸಿ ನೀರನ್ನು ಕುಡಿಯುವುದರಿಂದ ದೇಹದಲ್ಲಿ ವಿಷಕಾರಿ ವಸ್ತುಗಳನ್ನು ಕೂಡ ತೆಗೆದು ಹಾಕುತ್ತದೆ ಹಾಗೂ ಖಾಲಿ ಹೊಟ್ಟೆಯಲ್ಲಿ ತುಳಸಿ ನೀರನ್ನು ಕುಡಿಯುವುದರಿಂದ ಶೀತ ಗಂಟಲು ನೋವಿನ ಸಮಸ್ಸೆ ಕೂಡ ಪರಿಹಾರ ಸಿಗುತ್ತದೆ. ಖಾಲಿ ಹೊಟ್ಟೆಯಲ್ಲಿ ತುಳಸಿಯನ್ನು ಸೇವನೆ ಮಾಡುವುದರಿಂದ ಭಾಗಿಯಾದ ದುರ್ವಾಸನೆ ನಿವಾರಣೆಯಾಗುತ್ತದೆ ಮತ್ತು ಇತರ ಸಮಸ್ಸೆಗಳನ್ನು ಸಹ ನಿವಾರಣೆ ಮಾಡಲು ಸಹಾಯ ಮಾಡುತ್ತದೆ.
ಇನ್ನು ಖಾಲಿ ಹೊಟ್ಟೆಯಲ್ಲಿ ತುಳಸಿ ನೀರನ್ನು ಕುಡಿಯುವುದರಿಂದ ಜೀರ್ಣ ಕ್ರಿಯೆಗೆ ಸಂಬಂಧಪಟ್ಟ ಸಮಸ್ಸೆ ಕೂಡ ನಿವಾರಣೆ ಆಗುತ್ತದೆ ಮತ್ತು ಮಲಬದ್ಧತೆ ಸಮಸ್ಸೆ ಕೂಡ ಪರಿಹಾರ ಆಗುತ್ತದೆ.ಇನ್ನು ತುಳಸಿ ಎಲೆಯನ್ನು ತೆಗೆದುಕೊಂಡು ಬಂದು ಚೆನ್ನಾಗಿ ತೊಳೆಯಿರಿ. ನಂತರ ಎರಡು ಮೂರು ಎಲೆಗಳನ್ನು ಚೆನ್ನಾಗಿ ಜಗಿದು ತಿಂದು ಒದೆರಡು ಗ್ಲಾಸ್ ನೀರನ್ನು ಕುಡಿಯಿರಿ. ನಂತರ 30 ನಿಮಿಷಗಳ ಕಾಲ ಏನನ್ನು ಸೇವನೆ ಮಾಡಬಾರದು.ಇದನ್ನು ಟೀ ರೂಪದಲ್ಲಿ ಕೂಡ ಸೇವನೆ ಮಾಡಬಹುದು.ಒಂದು ಗ್ಲಾಸ್ ನೀರನ್ನು ತೆಗೆದುಕೊಂಡು ಅದನ್ನು ಪಾತ್ರೆಗೆ ಹಾಕಿ 3 ರಿಂದ 4 ತುಳಸಿ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ.ನಂತರ ಇದನ್ನು ಟೀ ರೂಪದಲ್ಲಿ ಕೂಡ ನೀವು ಇದನ್ನು ಸೇವನೆ ಮಾಡಬಹುದು.