ಈ ಬಾರಿ ಶ್ರಾವಣ ಮಾಸದೊಂದಿಗೆ ಅಧಿಕ ಮಾಸವು ಕೂಡ ಆರಂಭ ಆಗುತ್ತಿದೆ.ಅಧಿಕ ಮಾಸವು ಜೂಲೈ 18ನೇ ತಾರೀಕಿನಿಂದ ಆರಂಭವಾಗಿ ಆಗಸ್ಟ್ 16ನೇ ತಾರೀಕಿನವರೆಗೂ ಇರುತ್ತದೆ. ಅಧಿಕ ಮಾಸದಲ್ಲಿ ಬಹಳ ಮುಖ್ಯವಾಗಿ ವಿಷ್ಣುವಿನ ಪೂಜೆಯನ್ನು ಜೊತೆಗೆ ಶಿವನ ಪೂಜೆಯನ್ನು ಮಾಡಬೇಕಾಗುತ್ತದೆ. ಈ ಅಧಿಕ ಮಾಸದಲ್ಲಿ ವಿಶೇಷವಾಗಿ ಭಗವತ್ ಗೀತೆ ಓದುವುದು ಅಥವಾ ಶ್ರೀ ರಾಮನ ಕಥೆಯನ್ನು ಪಾರಾಯಣ ಮಾಡುವುದು ವಿಷ್ಣು ಸಹಸ್ರನಾಮ ಸೂತ್ರವನ್ನು ಪಾರಾಯಣ ಮಾಡುವುದು ಇದೆಲ್ಲಾದು ಕೂಡ ಬಹಳನೇ ಶ್ರೇಷ್ಠ ಎಂದು ಹೇಳುತ್ತಾರೆ. ಇದೆಲ್ಲಾ ಹೇಳುವುದಕ್ಕೆ ಸಾಧ್ಯ ಆಗದೆ ಇರುವವರು ವಿಷ್ಣುವಿನ ಈ ಒಂದು ಮಂತ್ರವನ್ನು 108 ಬಾರಿ ಜಪ ಮಾಡಿ.
ಓಂ ನಮೋ ಭಗವತೆ ವಾಸುದೇವಯ ನಮಃ!!
ಇನ್ನು ಈ ಒಂದು ಮಂತ್ರವನ್ನು ದಿನಕ್ಕೆ 33ಬಾರಿ ಪಟನೆ ಮಾಡುವುದರಿಂದ ಅಧಿಕ ಮಾಸದ ಪೂರ್ಣ ಫಲವನ್ನು ಪಡೆಯುವುದರ ಜೋತೆಗೆ ಕೋಟಿ ಕೋಟಿ ಪುಣ್ಯವನ್ನು ಸಂಪಾದನೆ ಮಾಡುವ ಹಾಗೆ ಆಗುತ್ತದೆ.
ಗೋವರ್ಧನಧರಂ ವಂದೇ ಮಂತ್ರ
ಗೋಪಾಲಂ ಗೋಪರೂಪಿಣಂ
ಗೋಕುಲೋತ್ಸವಮೀಶನಂ
ಗೋವಿಂದಂ ಗೋಪಿಕಾಪ್ರಿಯಾ !!
ಇನ್ನು ಅಧಿಕ ಮಾಸದಲ್ಲಿ 33 ಜೋಡಿ ದೀಪಗಳನ್ನು ಬೇರೆಯವರಿಗೆ ಧಾನ ಮಾಡುವುದರಿಂದ ಕೂಡ ವಿಶೇಷವಾದ ಫಲಗಳನ್ನು ಪಡೆಯಬಹುದು.ಇನ್ನು ಅಧಿಕ ಮಾಸದಲ್ಲಿ ಸಾಕಷ್ಟು ಜನ ಮಾಂಸಹರವನ್ನು ಸೇವನೆ ಮಾಡಬಾರದು. ವ್ರತ ಮಾಡುವವರು ಈರುಳ್ಳಿ ಬೆಳ್ಳುಳ್ಳಿ ಸೇವನೆ ಕೂಡ ಮಾಡಬಾರದು. ಇನ್ನು ಇಡೀ ತಿಂಗಳಲ್ಲಿ ಒಂದು ಹೊತ್ತು ಉಪವಾಸ ಮಾಡಿದರೆ ಬಹಳ ಶ್ರೇಷ್ಠ. ಉಪವಾಸ ಮಾಡುವವರು ಗೋಧಿ ಅಕ್ಕಿ ಬಾರ್ಲಿ, ಹೆಸರು ಎಳ್ಳು ಬಟಾಣಿ ಸೌತೆಕಾಯಿ ಬಾಳೆಹಣ್ಣು, ನೆಲ್ಲಿಕಾಯಿ, ಆಲೂಗಡ್ಡೆ, ಮೊಸರು ತುಪ್ಪ ಮಾವು ಬೇವು ಜೀರಿಗೆ ಒಣ ಶುಂಠಿ ಕಲ್ಲು ಉಪ್ಪು ಹುಣಸೆಹಣ್ಣು ವೀಳ್ಯದೆಲೆ ಹಲಸು ಹಿಪ್ಪುನೇರಳೆ ಹಾಗು ಮೆಂತ್ಯ ಇತ್ಯಾದಿಗಳನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇ