ನೀವು ಅಂದುಕೊಂಡ ಕೆಲಸ ನೆರವೇರಲು ಅಮ್ಮನವರಿಗೆ ಮಡಿಲಕ್ಕಿ ಕೊಟ್ಟು ಪೂಜೆ ಮಾಡಿಸಿ!

ಅಮ್ಮನವರಿಗೆ ಅಂದರೆ ಸ್ತ್ರೀ ದೇವತೆಗಳಿಗೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸುವಾಗ ಕೆಲವು ವಿಶೇಷವಾದಂತಹ ನಿಯಮಗಳನ್ನು ನಾವು ಅನುಸರಿಸುತ್ತೇವೆ, ಅದರಲ್ಲಿ ಒಂದು ಅಮ್ಮನವರಿಗೆ ಅಂದರೆ ದೇವತೆಗಳಿಗೆ ಮಾಡಲ್ಲಕ್ಕಿ ತುಂಬುವಂತಹ ವಿಧಾನವು ಕೂಡ ಒಂದು, ಹಲವಾರು ಸಂದರ್ಭದಲ್ಲಿ ನಾವು ಅಮ್ಮನವರಿಗೆ ವಿಶೇಷವಾದಂತಹ ದಿನಗಳಲ್ಲಿ ಹಬ್ಬ ಹರಿದಿನಗಳಲ್ಲಿ, ಪೂಜೆಗಳಲ್ಲಿ, ನವರಾತ್ರಿಯ ಪೂಜೆಗಳಲ್ಲಿ, ಆಶಾಡ ಮಾಸದಲ್ಲಿ ನಾವು ಅಮ್ಮನವರಿಗೆ ಮಾಡಲ್ಲಕ್ಕಿಯನ್ನು ತುಂಬುತ್ತೆವೆ, ಇದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು ಎಂಬ ನಂಬಿಕೆಯಿದೆ.

ನಾವು ಯಾವುದಾದರೂ ಕಷ್ಟಗಳು ಇದ್ದಾಗ ದೇವರಿಗೆ ಅಂದರೆ ಮನೆ ದೇವತೆಗೆ ಹರಕೆಯನ್ನು ಕಟ್ಟಿಕೊಳ್ಳುವಾಗ ಮಡಲಕ್ಕಿ ತುಂಬುತ್ತೇನೆ ಎಂದು ಅಥವಾ ಇತರೆ ದೇವರಿಗೆ ಮಡಿಲಕ್ಕಿ ತುಂಬುತ್ತೇನೆ ಎಂದು ಹರಕೆಯನ್ನು ಕಟ್ಟುತ್ತೇವೆ, ಅದೇ ರೀತಿಯಾಗಿ ವರ್ಷಕ್ಕೆ ಒಮ್ಮೆ ಬರುವಂತಹ ದೇವರ ಹಬ್ಬದ ದಿನಗಳಲ್ಲಿ ದೇವರಿಗೆ ಮಡಕೆಯನ್ನು ತುಂಬುವ ಮೂಲಕ ಪೂಜೆಯನ್ನು ಸಲ್ಲಿಸುತ್ತೇವೆ, ಇನ್ನು ಮಡಲಕ್ಕಿ ತುಂಬುವಾಗ ಕೆಲವು ವಸ್ತುಗಳನ್ನು ತಪ್ಪದೇ ಸೇರಿಸಿ ಅಮ್ಮನವರಿಗೆ ಮಾಡಲ್ಲಕ್ಕಿಯನ್ನು ಅರ್ಪಿಸಬೇಕು ಎಂದು ಹೇಳಲಾಗುತ್ತದೆ, ಹಾಗಾದರೆ ಮಡಲಕ್ಕಿ ತುಂಬುವಾಗ ಯಾವ ವಸ್ತುಗಳನ್ನು ಪ್ರಧಾನವಾಗಿ ಮಡಲ್ಲಕ್ಕಿಯಲ್ಲಿ ಸೇರಿಸಬೇಕು ಯಾವ ರೀತಿಯಾಗಿ ಅಮ್ಮನವರಿಗೆ ಮಾಡಲ್ಲಕ್ಕಿಯನ್ನು ತುಂಬಬೇಕು ಎಂದು ನೋಡೋಣ.

ಸಾಮಾನ್ಯವಾಗಿ ನಾವು ಹೆಣ್ಣುಮಕ್ಕಳಿಗೆ ಅರಿಶಿನ ಕುಂಕುಮವನ್ನು ನೀಡುವಾಗ ಮಡಲ್ಲಕ್ಕಿಯನ್ನು ತುಂಬುತ್ತೇವೆ ಅದೇ ರೀತಿಯಾಗಿ ದೇವರಿಗೂ ಕೂಡ ಅಂದರೆ ಅಮ್ಮನವರಿಗು ಕೂಡ ಮಡಲಕ್ಕಿಯನ್ನು ತುಂಬುತ್ತೇವೆ, ಆದರೆ ವಿಶೇಷವಾಗಿ ಅಮ್ಮನವರಿಗೆ ಮಡಲ್ಲಕ್ಕಿಯನ್ನು ತುಂಬುವಾಗ ನಾವು ಪ್ರಧಾನವಾಗಿ ಕೆಲವು ವಸ್ತುಗಳನ್ನು ಸೇರಿಸಿ ತುಂಬಬೇಕು ಎಂದು ಹೇಳಲಾಗುತ್ತದೆ, ಯಾವ ವಸ್ತುಗಳಿಂದ ಮಡಲಕ್ಕಿಯನ್ನು ತುಂಬಾ ಬೇಕು ಎಂದರೆ, ಮೊದಲನೆಯದಾಗಿ ಒಂದು ತಟ್ಟೆಯನ್ನು ಅಂದರೆ ದೊಡ್ಡದಾದ ತಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಐದು ಸೇರಿನಷ್ಟು ಅಥವಾ 5 ಪಾವಿನಷ್ಟು ಅಥವಾ 5 ಲೋಟದಷ್ಟು ಅಥವಾ 5 ಮುಷ್ಟಿಯಷ್ಟು ಅಕ್ಕಿಯನ್ನು ಹಾಕಬೇಕು.

ನಂತರ ಎರಡು ವೀಳ್ಯದೆಲೆ ಎರಡು ಅಥವಾ ನಾಲ್ಕು ಬಟ್ಟಲಡಿಕೆಯನ್ನು ಇಡಬೇಕು ನಂತರ ಎರಡು ಅರಿಶಿನದ ಕೊಂಬನ್ನು ಇಡಬೇಕು, ಎಲೆ ಅಡಿಕೆಯ ಮೇಲೆ ದೇವರಿಗೆ ಕಾಣಿಕೆ ರೂಪದಲ್ಲಿ 11 ರೂಪಾಯಿ 21 ರೂಪಾಯಿಗೆ ನಿಮಗೆ ಸಾಧ್ಯವಾದಷ್ಟು ಹಣವನ್ನು ಹೇಳಬೇಕು, ಅರಿಶಿಣ ಕುಂಕುಮವನ್ನು ಇಡಬೇಕು, ಒಂದು ಅಥವಾ ಅರ್ಧ ಕೊಬ್ಬರಿ ಮತ್ತು ಒಂದು ತುಂಬಚ್ಚು ಬೆಲ್ಲ, ಕೆಂಪು ಅಥವಾ ಹಸಿರು ಬಣ್ಣದ ಬಳೆ, ಒಂದು ರವಿಕೆ ಪೀಸ್, ಒಣದ್ರಾಕ್ಷಿ ಗಳು, ಒಂದು ಪೂರ್ತಿ ಚಿಪ್ಪು ಬಾಳೆಹಣ್ಣು, ಒಂದು ಮೊಳದಷ್ಟು ಮಲ್ಲಿಗೆ ಹೂವು ಇಟ್ಟರೆ ಒಳ್ಳೆಯದ ಅಥವಾ ಬೇರೆ ಯಾವುದೇ ಹೂವನ್ನು ಇಡಬಹುದು.

ಗಂಧಿಗೆ ಅಂಗಡಿಗಳಲ್ಲಿ ನಿಮಗೆ ಬಾಗಿನದ ಸಾಮಾನುಗಳು ಮಡಲಕ್ಕಿಯ ಸಾಮಾನು ಎಂದು ಸಿಗುತ್ತದೆ ಅದನ್ನು ತಂದು ಇಡಬೇಕು, ಇಷ್ಟು ವಸ್ತುಗಳನ್ನು ಸೇರಿಸಿ ಅಮ್ಮನವರಿಗೆ ಮಡಲಕ್ಕಿ ಯನ್ನು ತುಂಬಬೇಕು, ಇನ್ನು ಅಮ್ಮನವರಿಗೆ ಸೀರೆಯನ್ನು ಕೊಡುತ್ತೇನೆ ಎನ್ನುವವರು ಸಾಧ್ಯವಾದಷ್ಟು 8 ಮೊಳದ ಸೀರೆಯನ್ನು ಕೊಡುವುದು ಒಳ್ಳೆಯದು. 

Related Post

Leave a Comment