ದೇವರ ಮನೆಯಲ್ಲಿ ಈ ಮೂರು ವಸ್ತುಗಳನ್ನು ಇಡುವುದರಿಂದ ಧನ ಸಂಪತ್ತಿನ ನಾಶ ಆಗುತ್ತದೆ.ಲಕ್ಷ್ಮಿ ದೇವಿ ಇಂತಹ ಮನೆಯನ್ನು ತ್ಯಾಗ ಮಾಡುತ್ತಾರೆ. ಪ್ರತಿಯೊಬ್ಬರ ಮನೆಯಲ್ಲಿ ದೇವರ ಮನೆ ಇರುತ್ತದೆ ಮತ್ತು ದೇವರ ಮೂರ್ತಿಗಳನ್ನು ಸಹ ಇಟ್ಟಿರುತ್ತಾರೆ. ಜೊತೆಗೆ ಪೂಜೆ ಮಾಡುವ ಸಾಮಗ್ರಿಗಳನ್ನು ಸಹ ಇಟ್ಟಿರುತ್ತಾರೆ. ಅದರೆ ದೇವರ ಕೋಣೆಯಲ್ಲಿ ಕೆಲವು ವಸ್ತುಗಳನ್ನು ಇಟ್ಟರೆ ಎಷ್ಟು ಶುಭ ಆಗಿರುತ್ತದೆಯೋ ಅದೇ ರೀತಿ ಕೆಲವು ವಸ್ತುಗಳನ್ನು ಇಡುವುದು ಅಷ್ಟೇ ಅಶುಭ ಆಗಿದೆ ಎಂದು ತಿಳಿಸಿದ್ದರೆ. ಈ ಕೆಲವು ವಸ್ತುಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚು ಮಾಡುತ್ತವೆ. ಹಾಗಾಗಿ ಈ ಕೆಲವು ವಸ್ತುಗಳನ್ನು ಮರೆಯದೆ ದೇವರ ಕೋಣೆಯಿಂದ ತೆಗೆದುಹಾಕಿರಿ.
ದೇವರ ಕೋಣೆಯಲ್ಲಿ ಯಾವ ವಸ್ತುಗಳನ್ನು ಇಡಬಹುದು
ದೇವರ ಕೋಣೆಯಲ್ಲಿ ಮಣ್ಣಿನ ದೀಪವನ್ನು ಬೆಳಗಬೇಕು. ಮಣ್ಣಿನ ದೀಪ ಇಲ್ಲವಾದರೆ ತಾಮ್ರ ಅಥವಾ ಹಿತ್ತಾಳೆ ದೀಪವನ್ನು ಹಚ್ಚಬೇಕು. ಈ ರೀತಿ ಮಾಡಿದರೆ ಮನೆಯಲ್ಲಿ ಶಾಂತಿ ನೆಲೆಸುತ್ತದೆ.
ಮನೆಯ ದೇವರ ಕೋಣೆಯಲ್ಲಿ ಸ್ವಸ್ತಿಕ್ ಚಿಹ್ನೆ ಇರಬೇಕು. ಸ್ವಸ್ತಿಕ್ ಚಿಹ್ನೆಯನ್ನು ಶುಭದ ಪ್ರತೀಕವಾಗಿದೆ. ಯಾವುದೇ ಶುಭ ಕಾರ್ಯ ಮಾಡುವ ಮುನ್ನ ಸ್ವಸ್ತಿಕ್ ಚಿಹ್ನೆಯನ್ನು ಬರೆಯಲಾಗುತ್ತದೆ.
ಮನೆಯ ದೇವರ ಕೋಣೆಯಲ್ಲಿ ಕಳಸವನ್ನು ಸ್ಥಾಪನೆ ಮಾಡಿದರೆ ಸುಖ ಸಮೃದ್ದಿ ನೆಲೆಸುತ್ತದೆ. ಐಶ್ವರ್ಯದ ಸಿರಿ ಸಂಪತ್ತಿನ ಪ್ರಾಪ್ತಿ ಕೂಡ ಆಗುತ್ತದೆ.
ದೇವರ ಕೋಣೆಯಲ್ಲಿ ಶಂಖ ಇದ್ದರೆ ಅತ್ಯಂತ ಮುಖ್ಯವಾಗಿದೆ. ಮನೆಯಲ್ಲಿ ಶಂಖ ಇದ್ದರೆ ತಾಯಿ ಲಕ್ಷ್ಮಿ ದೇವಿ ನಿಮಗೆ ಒಲಿಯುತ್ತಾರೆ. ಆ ಮನೆಯಲ್ಲಿ ಯಾವತ್ತಿಗೂ ಧನ ಸಂಪತ್ತಿನ ಕೊರತೆ ಆಗುವುದಿಲ್ಲ.
-ಇನ್ನು ಗಂಟೆಯ ಧ್ವನಿ ಇದ್ದರೆ ಅಲ್ಲಿ ಶುಭದ ವಾತಾವರಣ ಶುದ್ಧ ಮತ್ತು ಪವಿತ್ರಗೊಳ್ಳುತ್ತಾದೆ. ಪೂಜೆ ಮಾಡುವಾಗ ಗಂಟೆ ಬಾರಿಸಿದರೆ ಆ ಮನೆಯಲ್ಲಿ ಇರುವ ದುಷ್ಟ ಶಕ್ತಿಗಳು ನಾಶ ಆಗುತ್ತವೆ. ಜೋತೆಗೆ ಸುಖ ಸಮೃದ್ಧಿ ದ್ವಾರ ತೆರೆಯುತ್ತದೆ.ಈ ವಸ್ತುಗಳನ್ನು ನಿಮ್ಮ ದೇವರ ಮನೆಯಲ್ಲಿ ಇಡಬಹುದು.
ದೇವರ ಕೋಣೆಯಲ್ಲಿ ಯಾವ ವಸ್ತುಗಳನ್ನು ಇಡಬಾರದು
ಗಣಪತಿ ಫೋಟೋವನ್ನು 1,3,5 ರೀತಿಯಲ್ಲಿ ಇಡಬಾರದು. 2 ಗಣಪತಿ ಫೋಟೋ ಇಡುವುದು ಒಳ್ಳೆಯದು. ಮನೆಯ ಮುಖ್ಯ ದ್ವಾರದ ಮೇಲೆ ಗಣಪತಿ ಫೋಟೋವನ್ನು ಇಡಬಹುದು.ಒಡೆದು ಹೋದ ಅಕ್ಷತೆಗಳನ್ನು ಮನೆಯಲ್ಲಿ ಇಡಬಾರದು.ಇವುಗಳ ಜೊತೆಗೆ ತುಂಬಾ ಹಳೆಯದಾಗಿರುವ ಅಕ್ಕಿ ಕಾಳುಗಳನ್ನು ಸಹ ದೇವರ ಕೋಣೆಯಲ್ಲಿ ಇಡಬಾರದು. ಇವು ನಕಾರಾತ್ಮಕ ಶಕ್ತಿಯನ್ನು ಹರಡಿಸುತ್ತವೆ. ದೇವರ ಮನೆಯಲ್ಲಿ ಇಡುವ ಅಕ್ಕಿ ಕಾಳುಗಳನ್ನು ಅರಿಶಿನದಿಂದ ಮಿಕ್ಸ್ ಮಾಡಿ ಇಡಬೇಕು. ಇದರಿಂದ ಅಧಿಕ ಶುಭ ಪರಿಣಾಮಗಳು ಸಿಗುತ್ತವೆ.
ಪೂರ್ವಜರ ಚಿತ್ರಗಳನ್ನು ದೇವರ ಮನೆಯಲ್ಲಿ ಇಡಬಾರದು. ಒಂದು ವೇಳೆ ಇಟ್ಟರೆ ವಾತಾವರಣ ನಕಾರಾತ್ಮಕತೆಯಿಂದ ಕೂಡಿರುತ್ತದೆ.ದೇವರ ಮನೆಯಲ್ಲಿ ಭೈರವ ಮತ್ತು ಶನಿದೇವರ ಮೂರ್ತಿಯನ್ನು ಇಡಬಾರದು. ಇನ್ನು ನಿಂತುಕೊಂಡಿರುವ ಲಕ್ಷ್ಮಿ ದೇವಿ ಫೋಟೋವನ್ನು ಸಹ ಇಡಲಾಗುವುದಿಲ್ಲ. ತಾಯಿ ಲಕ್ಷ್ಮಿ ಕುಳಿತುಕೊಂಡಿರುವ ಸ್ಥಿತಿ ಇರಬೇಕು.
ಇನ್ನು ಈ ಮೂರು ವಸ್ತುಗಳು ದೇವರ ಕೋಣೆಯಲ್ಲಿ ಇದ್ದರೆ ಧನ ಸಂಪತ್ತು ಮಳೆಯಂತೆ ಸುರಿಯುತ್ತದೆ.ದೇವರ ಮನೆಯಲ್ಲಿ ಗಂಗಾಜಲವನ್ನು ಇಟ್ಟರೆ ಇದರಿಂದ ದೇವರ ಕೊನೆಯ ಶುಭ ಹೆಚ್ಚಾಗುತ್ತದೆ ಮತ್ತು ಪೂಜೆಯ ಸಂಪೂರ್ಣ ಫಲ ನಿಮಗೆ ಸಿಗುತ್ತದೆ.
ಕಳಸವನ್ನು ದೇವರ ಮನೆಯಲ್ಲಿ ಇಟ್ಟರೆ ತುಂಬಾ ಒಳ್ಳೆಯದು.ದೇವರಿಗೆ ದಕ್ಷಿಣೆ ಇಡುವುದು ತುಂಬಾ ಒಳ್ಳೆಯದು ಮತ್ತು ಕಮಲದ ಹೂವನ್ನು ದೇವರ ಮನೆಯಲ್ಲಿ ಇಟ್ಟರೆ ತುಂಬಾ ಒಳ್ಳೆಯದು. ಇನ್ನು ಯಾವುದೇ ಕಾರಣಕ್ಕೂ ದೀಪದಿಂದ ದೀಪವನ್ನು ಹಚ್ಚಬಾರದು.