ಎಳ್ಳು ಬತ್ತಿ ಮಾಡುವೂ ಹೇಗೆ ಎಂದು ತಿಳಿಸಿಕೊಡುತ್ತೇವೆ. ಮೊದಲು ಕಪ್ಪು ಬಟ್ಟೆಯನ್ನು ತೆಗೆದುಕೊಳ್ಳಬೇಕು. ಮೊದಲು ಒಂದೇ ಅಳತೆ ಇರುವ ಹಾಗೆ ಬಟ್ಟೆಯನ್ನು ಕಟ್ ಮಾಡಿಕೊಳ್ಳಿ. ಇದಕ್ಕೆ ಅರ್ಧ ಚಮಚ ಅಥವಾ ಒಂದು ಚಮಚ ಎಳ್ಳನ್ನು ಹಾಕಬೇಕಾಗುತ್ತದೆ. ಎಳ್ಳು ಹಾಕಿದ ಮೇಲೆ ಕಪ್ಪು ದಾರದಿಂದ ಕಟ್ಟಬೇಕು. ಇದೆ ರೀತಿ 9 ಬತ್ತಿಗಳನ್ನು ತಯಾರು ಮಾಡಬೇಕಾಗುತ್ತದೆ.
ಶನಿ ದೋಷ ನಿವಾರಣೆಗೆ ಶನಿ ದೇವರಿಗೆ ಅಥವಾ ಆಂಜನೇಯನಿಗೆ 9 ಎಳ್ಳು ಬತ್ತಿಯನ್ನು 9 ವಾರ ಹಚ್ಚಬೇಕು. ಈ ದೀಪವನ್ನು ಪ್ರತಿಯೊಬ್ಬರೂ ಹಚ್ಚಬಹುದು. ಅದರ್ ಮನೆಯಲ್ಲಿ ಒಬ್ಬರೇ ಹಚ್ಚಬೇಕು.
ನಂತರ ಒಂದು ಬೌಲ್ ಅಥವಾ ಬಾಕ್ಸ್ ನಲ್ಲಿ ಎಳ್ಳು ಎಣ್ಣೆಯನ್ನು ಹಾಕಬೇಕು. ಇದಕ್ಕೆ ತಯಾರಿಸಿದ ಎಳ್ಳಿನ ಬತ್ತಿಯನ್ನು ಹಾಕಬೇಕು. ದೇವಸ್ಥಾನಕ್ಕೆ ಹೋದಾಗ 9 ಬತ್ತಿ ಅದರ ಮೇಲೆ ಎರಡು ಕರ್ಪೂರ ಇಟ್ಟು ಬತ್ತಿಯನ್ನು ಹಚ್ಚಬೇಕು. ಸಂಜೆ ಸಮಯದಲ್ಲಿ ಎಳ್ಳಿನ ಬತ್ತಿಯನ್ನು ಹಚ್ಚಿದರೆ ತುಂಬಾ ಒಳ್ಳೆಯದು. ಈ ಎಳ್ಳಿನ ಬತ್ತಿಯನ್ನು ಹಚ್ಚುವುದರಿಂದ ನಿಮ್ಮ ಕಷ್ಟಗಳು ಪರಿಹಾರ ಆಗುವುದು. ಇನ್ನು ಶನಿ ದೇವರಿಗೆ ಎಳ್ಳಿನ ಅಭಿಷೇಕ ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವ ಶನಿದೋಷ ನಿವಾರಣೆ ಆಗುತ್ತದೆ.