ಭಾಗ್ಯಶಾಲಿ ಸ್ತ್ರೀ ಶರೀರದ ಮೇಲೆ ಈ ಮಚ್ಚೆಗಳು ಇರುತ್ತವೆ. ಸ್ತ್ರೀ ಎಂದರೆ ಲಕ್ಷ್ಮಿ ಸ್ವರೋಪ. ಪುರಾಣ ಕಾಲದಿಂದಲೂ ಹೆಣ್ಣಿಗೆ ವಿಶೇಷವಾದ ಸ್ಥಾನ ಮಾನವಿದೆ. ಅದರಲ್ಲೂ ರೂಪ ಲಕ್ಷಣ ಮಚ್ಚೆ ಕೆಲವು ಚಿಹ್ನೆ ಇವುಗಳನ್ನು ಗಮನಿಸಿ ಹುಡುಗಿ ಭಾಗ್ಯಶಾಲಿ ಮತ್ತು ಅದೃಷ್ಟಶಾಲಿ ಎಂದು ಹೇಳುತ್ತಾರೆ. ಈ ಹುಡುಗಿಯರು ಹುಟ್ಟಿದ ಮನೆಗೆ ಅದೃಷ್ಟ ತಂದರೆ ಮದುವೆ ನಂತರ ಗಂಡನ ಮನೆಗೂ ಕೂಡ ಕೀರ್ತಿ ತರುತ್ತಾರೆ.ಹುಡುಗಿಯರು ಶರೀರದ ಮೇಲೆ ಈ ಒಂದು ಚಿಹ್ನೆ ಹೊಂದಿದ್ದಾರೆ ಭಾಗ್ಯಶಾಲಿಗಳು ಎಂದು ಹೇಳಲಾಗುತ್ತದೆ. ಪತಿಯ ಸಂತೋಷ ಸುಖಗಳಿಗೆ ಹೆಚ್ಚು ಗಮನ ಕೊಡುವುದಲ್ಲದೆ ಮನೆಯವರ ನೆಮ್ಮದಿ ಖುಷಿ ಬಗ್ಗೆ ಕಾಳಜಿ ಅನ್ನು ಹೊಂದಿರುತ್ತಾರೆ.
1, ಮೂಗಿನ ಮೇಲೆ ಇರುವ ಮಚ್ಚೆ ಭಾಗ್ಯದ ಸಂಕೇತ. ಹುಡುಗಿಯರ ಮೂಗಿನ ಸುತ್ತ ಮುತ್ತ ಮಚ್ಚೆ ಇದ್ದರೆ ಅಂತವರು ಎಲ್ಲಾ ಸುಖಗಳನ್ನು ಹೊಂದುತ್ತಾರೆ.ಈ ಮಚ್ಚೆ ಧನಸಂಪತ್ತಿನ ಸಂಕೇತವಾಗಿದೆ.
2, ಅಂಗಲಿನಲ್ಲಿ ಶಂಖ ಅಥವಾ ಚಕ್ರದ ಚಿಹ್ನೆ–ಕೆಲವು ಸ್ತ್ರೀಯರಲ್ಲಿ ಕಮಲ, ಚಕ್ರ ಅಥವಾ ಶಂಖದ ಚಿಹ್ನೆ ಇರುತ್ತದೆ. ಇಂತವರು ಹೆಚ್ಚು ಭಾಗ್ಯಶಾಲಿಗಳು ಆಗಿರುತ್ತಾರೆ. ಅಷ್ಟೇ ಅಲ್ಲದೆ ಕುಟುಂಬಕ್ಕೆ ಹೆಚ್ಚು ಕೀರ್ತಿಯನ್ನು ತರುತ್ತಾರೆ.
3, ಹೊಕ್ಕಳಿನ ಕೆಳಗೆ ಮಚ್ಚೆ ಇದ್ದರೆ ಕುಟುಂಬಕ್ಕೆ ಹೆಚ್ಚು ಭಾಗ್ಯವನ್ನು ತರುತ್ತಾರೆ ಎಂಡು ಹೇಳುತ್ತದೆ ಸಾಮುದ್ರಿಕಾ ಶಾಸ್ತ್ರ.ಈ ಮಚ್ಚೆಯು ಸುಖ ಮತ್ತು ಸಂಪನ್ನತೆಯ ಪ್ರತೀಕವಾಗಿದೆ ಎಂದು ಹೇಳುತ್ತಾರೆ.
4, ಹಣೆಯ ಮೇಲೆ ಇರುವ ಮಚ್ಚೆ–ಹಣೆಯ ಮಧ್ಯ ಭಾಗದಲ್ಲಿ ಮಚ್ಚೆ ಇದ್ದವರು ಅಂತವರು ಸೌಭಾಗ್ಯಶಾಲಿ ಆಗಿರುತ್ತಾರೆ. ಇವರನ್ನು ವಿವಾಹ ಆಗುವವರು ಜೀವನಪೂರ್ತಿ ಸಂತೋಷದಿಂದ ಇರುತ್ತಾರೆ.
5, ತ್ರಿಕೋನದ ಚಿಹ್ನೆ–ಯಾವ ಹುಡುಗಿಯ ಅಂಗಲಿನಲ್ಲಿ ತ್ರಿಕೋನ ಚಿಹ್ನೆ ಇರುತ್ತದೆಯೋ ಅವರು ಹೆಚ್ಚು ಬುದ್ದಿವಂತರು ಆಗಿರುತ್ತಾರೆ ಮತ್ತು ಗ್ರಹಿಸುವ ಶಕ್ತಿ ಇವರಲ್ಲಿ ಹೆಚ್ಚಾಗಿ ಇರುತ್ತದೆ. ಇಂತವರು ಮನೆಯವರ ಖುಷಿ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ ಕಷ್ಟದ ಸಂದರ್ಭದಲ್ಲಿ ಮನೆಯವರ ಸಹಾಯಕ್ಕೆ ನಿಲ್ಲುತ್ತರೆ. ಅದರಿಂದ ಬರುವ ಚಾಣಕ್ಷತೆಯನ್ನು ಹೊಂದಿರುತ್ತಾರೆ. ಬುದ್ದಿವಂತಿಕೆ ಧೈರ್ಯ ಇವರ ಅದೃಷ್ಟದ ಜೊತೆಗೆ ಇರುತ್ತದೆ.
6, ಕೆನ್ನೆಯ ಎಡ ಭಾಗದಲ್ಲಿರುವ ಮಚ್ಚೆ–ಸ್ತ್ರೀಯರ ಕೆನ್ನೆಯ ಎಡ ಭಾಗದಲ್ಲಿ ಮಚ್ಚೆ ಇದ್ದರೆ ರುಚಿ ಪ್ರಿಯರು ಆಗಿರುತ್ತಾರೆ. ಎಲ್ಲಾ ತರಹದ ಅಡುಗೆ ಮಾಡುವವರು ಆಗಿರುತ್ತಾರೆ.
7, ಸ್ತ್ರೀಯರಿಗೆ ಶರೀರದ ಎಡ ಭಾಗದಲ್ಲಿ ಮಚ್ಚೆ ಇದ್ದರೆ ಭಾಗ್ಯಶಾಲಿಗಳು ಆಗಿರುತ್ತಾರೆ. ಇವರು ಕುಟುಂಬಕ್ಕೆ ಅದೃಷ್ಟವನ್ನು ತರುತ್ತಾರೆ. ವೈವಾಹಿಕ ಜೀವನದಲ್ಲಿ ಪತಿಯನ್ನು ಸಂತೋಷವಾಗಿ ಇಡುವುದರಲ್ಲೂ ಯಶಸ್ಸನ್ನು ಹೊಂದುತ್ತಾರೆ.
8, ಉಬ್ಬುಗಳ ಮಧ್ಯೆ ತಲೆಯಲ್ಲಿ ಮಚ್ಚೆ ಇದ್ದರೆ ಸೌಭಾಗ್ಯಶಾಲಿಗಳು ಆಗಿರುತ್ತಾರೆ. ಇನ್ನು ತಲೆಯಲ್ಲಿ ಹೊಂದಿರುವ ಸ್ತ್ರೀಯರು ಇತರರಿಗೆ ಮಾದರಿ ಯಾಗಿರುತ್ತಾರೆ. ಇವರು ಅದೃಷ್ಟವಂತರು ಆಗಿರುತ್ತಾರೆ.
9, ಸ್ತ್ರೀಯರಿಗೆ ಕಿವಿಯ ಮೇಲೆ ಮಚ್ಚೆ ಹೊಂದಿದ್ದಾರೆ ಹೆಚ್ಚು ಅದೃಷ್ಟಶಾಲಿಗಳು, ಬುದ್ದಿವಂತರು ಮತ್ತು ಬೇಗ ನಿರ್ಧಾರ ತೆಗೆದುಕೊಳ್ಳುವ ಸ್ವಭಾವದವರು ಆಗಿರುತ್ತಾರೆ. ಎಡ ಕಿವಿ ಮೇಲೆ ಇರುವ ಮಚ್ಚೆ ಉತ್ತಮ ವೈವಾಹಿಕ ಜೀವನದ ಸಂಕೇತವಾಗಿದೆ.
10, ಉದ್ದನೆಯ ಕೂದಲು ಹೊಂದಿರುವ ಸ್ತ್ರೀಯರು ಅದೃಷ್ಟಶಾಲಿಗಳು ಆಗಿರುತ್ತಾರೆ.
11, ದುಂಡನೇ ಮುಖ ಪ್ರಕಾಶಮಾನ ಕಣ್ಣುಗಳನ್ನು ಹೊಂದಿರುವ ಸ್ತ್ರೀಯರು ಅತ್ಯಂತ ದಯಳು ಮತ್ತು ಕರುಣಾಮಯಿ ಅಂತಾ ಪರಿಗಣಿಸಲಾಗಿದೆ. ಇಂತಹ ಮಹಿಳೆಯರು ಗಂಡನ ಜೊತೆ ನಿಷ್ಠೆಯಿಂದ ಇರುತ್ತಾರೆ.
12, ಸ್ತ್ರೀಯರಿಗೆ ಬಿಳಿ ಬಣ್ಣದ ಹಲ್ಲುಗಳು ಮತ್ತು ಮುಂದೆ ಇರುವ 7 ಹಲ್ಲಿನ ಮಧ್ಯೆ ಗ್ಯಾಪ್ ಇದ್ದರೆ ಅವರು ತುಂಬಾ ಅದೃಷ್ಟವಂತರು ಆಗಿರುತ್ತಾರೆ.
13, ಕೆಂಪು ಬಣ್ಣದ ತುಟಿ ಮತ್ತು ಗುಲಾಬಿ ಬಣ್ಣದ ನಾಲಿಗೆ ಹೊಂದಿರುವವರು ಭಾಗ್ಯಶಾಲಿಗಾಲು ಆಗಿರುತ್ತಾರೆ.