ಕಲ್ಲು ಸಕ್ಕರೆ ಎಲ್ಲರಿಗೂ ಕೂಡ ಗೊತ್ತು ಇದೊಂದು ಸಿಹಿ ಪದಾರ್ಥ ಹಾಗೂ ಸಕ್ಕರೆಯ ಅಚ್ಚು ಇದನ್ನು ನಾವು ಬಿಳಿ ಹಾಗೂ ಕೇಸರಿ ಬಣ್ಣದಲ್ಲಿ ನೋಡುತ್ತೇವೆ, ಇದರಲ್ಲಿ ಆರೋಗ್ಯದ ಅಂಶಗಳು ಹೆಚ್ಚು ಕೂಡಿದೆ ಎಷ್ಟೋ ಆರೋಗ್ಯದ ಸಮಸ್ಯೆಗಳನ್ನು ಗುಣಪಡಿಸುವ ಶಕ್ತಿಯನ್ನು ಇದು ಹೊಂದಿದೆ. ಅಷ್ಟೇ ಅಲ್ಲದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಲ್ಲು ಸಕ್ಕರೆ ಶುಕ್ರ ಗ್ರಹಕ್ಕೆ ಸಂಬಂಧ ಪಟ್ಟಿದೆ, ಹಾಗಾಗಿ ಕಲ್ಲು ಸಕ್ಕರೆಯನ್ನು ಶುಭ ಕಾರ್ಯಗಳಿಗೆ ಹೆಚ್ಚು ಬಳಕೆ ಮಾಡುತ್ತಾರೆ ಈ ಕಲ್ಲು ಸಕ್ಕರೆಯನ್ನು ಮಿತವಾಗಿ ಬಳಕೆ ಮಾಡುವುದರಿಂದ ಎಷ್ಟೋ ಸಮಸ್ಯೆಗಳಿಂದ ದೂರ ಆಗಬಹುದು ಆಗಿದ್ದರೆ ಅದು ಏನೆಂದು ತಿಳಿಯೋಣ ಬನ್ನಿ.
ಪ್ರತಿ ದಿನ ಊಟ ಆದ ಮೇಲೆ ಸ್ವಲ್ಪ ಕಲ್ಲು ಸಕ್ಕರೆಯನ್ನು ತಿನ್ನುವುದರಿಂದ ಮಾತಿನಲ್ಲಿ ಹಿಡಿತ ಸಾಧಿಸಬಹುದು ನಮ್ಮ ಮಾತಿನಲ್ಲಿ ನಮಗೆ ಗೊತ್ತಿಲ್ಲದ ಹಾಗೆ ಬದಲಾವಣೆ ಕಾಣಿಸುತ್ತದೆ. ಹಾಗೆಯೇ ಲಕ್ಷ್ಮಿ ದೇವಿಗೆ ಪ್ರತಿ ಶುಕ್ರವಾರ ಕಲ್ಲು ಸಕ್ಕರೆಯನ್ನು ನೈವೇದ್ಯ ಮಾಡಿ ಕುಟುಂಬದ ಎಲ್ಲ ಸದಸ್ಯರು ಅದನ್ನು ಸೇವನೆ ಮಾಡಬೇಕು ಹೀಗೆ ಮಾಡಿದರೆ ಲಕ್ಷ್ಮಿ ದೇವಿಯ ಕೃಪೆ ಸಿಗುತ್ತದೆ ಹಾಗೂ ಮನೆಯಲ್ಲಿ ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳು ಇದ್ದರೂ ದೂರ ಆಗುತ್ತದೆ.
ಕಲ್ಲು ಸಕ್ಕರೆ ಅನ್ನು ಪುಡಿ ಮಾಡಿಕೊಂಡು ಅದನ್ನು ಶನಿವಾರದ ದಿನ ಕಪ್ಪು ಇರುವೆ ಇರುವ ಜಾಗದಲ್ಲಿ ಹಾಕಬೇಕು ಹೀಗೆ ಮಾಡಿದರೆ ಯಾವುದೇ ಶನಿ ದೋಷ ಇದ್ದರೂ ನಿವಾರಣೆ ಆಗುತ್ತದೆ, ಸೊಂಪು ಕಾಳುಗಳಿಗೆ ಕಲ್ಲು ಸಕ್ಕರೆ ಅನ್ನು ಬೆರೆಸಿ ತಿನ್ನುವುದರಿಂದ ವೈವಾಹಿಕ ಜೀವನ ಉತ್ತಮವಾಗಿ ಇರುತ್ತದೆ, ಹಾಗೂ ವಿಚ್ಛೇದನವನ್ನು ಬಳಸುತ್ತಿರುವ ಸಂಗಾತಿಗಳು ಅವರ ಸಮಸ್ಯೆಗಳನ್ನು ದೂರ ಮಾಡಿ ಅವನ್ನು ಒಂದು ಮಾಡುತ್ತದೆ. ಹಾಗೂ ರಾಹುವಿನ ಪ್ರತಿಕೂಲ ಪರಿಣಾಮ ಬದಲಾವಣೆ ಆಗುತ್ತದೆ. ನಿತ್ಯ ಮಕ್ಕಳಿಗೆ ಸೊಂಪು ಕಾಳುಗಳ ಜೊತೆಗೆ ಕಲ್ಲು ಸಕ್ಕರೆ ಮಿಶ್ರಣ ಮಾಡಿ ಕೊಟ್ಟರೆ ಅವರ ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೆಚ್ಚಾಗುತ್ತದೆ.
ನೀವು ಅಂದು ಕೊಂಡಿರುವ ಕೆಲಸಗಳು ಯಾವುದೂ ಆಗುತ್ತಿಲ್ಲ ತುಂಬಾ ಅಡಚಣೆ ಆಗುತ್ತಿದೆ ಎಂದರೆ ಸ್ವಲ್ಪ ಕರ್ಪೂರ ಹಾಗೂ ಸ್ವಲ್ಪ ಕಲ್ಲು ಸಕ್ಕರೆಯನ್ನು ದಾನ ಮಾಡಿ ಹಾಗೂ ಕರ್ಪೂರ ಅನ್ನು ಹಚ್ಚಿ ಅದಕ್ಕೆ ಸ್ವಲ್ಪ ಕಲ್ಲು ಸಕ್ಕರೆ ಪುಡಿ ಅನ್ನು ಉದುರಿಸಿ ಹೀಗೆ ಮಾಡಿದರೆ ಸ್ವಲ್ಪ ದಿನಗಳಲ್ಲಿ ಅಂದು ಕೊಂಡಿರುವ ಕೆಲಸಗಳು ತುಂಬಾ ಬೇಗ ಆಗುತ್ತದೆ. ಪಿತೃ ದೋಷ ಏನಾದರೂ ಇದ್ದರೆ ಕಲ್ಲು ಸಕ್ಕರೆಯನ್ನು ಸೇರಿಸಿ ರೊಟ್ಟಿ ಮಾಡಿ ಕಾಗೆಗಳಿಗೆ ನೀಡಬೇಕು ಹೀಗೆ ಮಾಡಿದರೆ ಪಿತೃ ದೋಷ ನಿವಾರಣೆ ಆಗುತ್ತದೆ. ನೋಡಿ ಕಲ್ಲು ಸಕ್ಕರೆ ಮಹತ್ವವನ್ನು ಹಾಗಾಗಿ ನೀವು ಹೀಗೆ ಮಾಡಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ.