ತಾಂಬೂಲ ಕೊಟ್ಟ ಪೂರ್ತಿ ಪ್ರತಿಫಲ ಸಿಗಬೇಕೆಂದರೆ?

ಪುರಾತನ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಮನೆಗೆ ಬಂದ ಅತಿಥಿಗಳಿಗೆ ಹೀರಿಯರಿಗೆ ತಾಂಬೂಲ ಕೊಡುವ ಪದ್ಧತಿ ಇದ್ದೆ ಇದೆ. ತಾಂಬೂಲ ಕೊಡುವುದರಿಂದ ನಿಮ್ಮ ಮನೆಯಲ್ಲಿ ಐಶ್ವರ್ಯದ ವೃದ್ಧಿಯಾಗುತ್ತದೆ.ವೀಳ್ಯದೆಲೆ ನಿಮ್ಮ ಐಶ್ವರ್ಯವನ್ನು ತಾಜಾವಾಗಿ ಇಡುತ್ತದೆ. ಆಡಿಕೆಯಲ್ಲಿ ಮಹಾಲಕ್ಷ್ಮಿಯ ವಾಸವಿರುತ್ತದೆ. ವೀಳ್ಯದೆಲೆ ಎಷ್ಟು ಪವಿತ್ರವಾದ ಒಂದು ಎಲೆ ಎಂದರೆ ಅದು ಪುರಾಣ ಪುಣ್ಯ ಕಥೆಗಳಿಂದಲೂ ವೀಳ್ಯದೆಲೆಗೆ ಅದರದೇ ಆದಂತಹ ವಿಶಿಷ್ಟವಾದ ಸ್ಥಾನವಿದೆ.

ವೀಳ್ಯದೆಲೆಯ ಮಹತ್ವ

  • ೧. ವೀಳ್ಯದೆಲೆ ತುದಿಯಲ್ಲಿ – ಲಕ್ಷ್ಮೀವಾಸ..
  • ೨. ವೀಳ್ಯದೆಲೆ ಬಲಭಾಗದಲ್ಲಿ ಬ್ರಹ್ಮ ದೇವರ ವಾಸ..
  • ೩. ವೀಳ್ಯದೆಲೆ ಮಧ್ಯದಲ್ಲಿ ಸರಸ್ವತೀ ದೇವಿ..
  • ೪. ವೀಳ್ಯದೆಲೆ ಎಡಭಾಗದಲ್ಲಿ ಪಾರ್ವತೀ ದೇವಿ..
  • ೫. ವೀಳ್ಯದೆಲೆ ಸಣ್ಣದಂಟಿನಲ್ಲಿ ಮಹಾವಿಷ್ಣುವಿನ ವಾಸ..
  • ೬. ವೀಳ್ಯದೆಲೆ ಹಿಂಭಾಗದಲ್ಲಿ ಚಂದ್ರದೇವತೆ ವಾಸ..
  • ೭. ವೀಳ್ಯದೆಲೆ ಎಲ್ಲಾ ಮೂಲೆಗಳಲ್ಲಿ ಪರಮೇಶ್ವರನ ವಾಸ.
  • ೮. ವೀಳ್ಯದೆಲೆಯ ಬುಡದಲ್ಲಿ ಮೃತ್ಯುದೇವತೆಯ ವಾಸ.. (ಈ ಕಾರಣಕ್ಕೆ ತಾಂಬೂಲ ಹಾಕಿಕೊಳ್ಳುವಾಗ ತುದಿ ಭಾಗ ತೆಗೆದು ಹಾಕಿಕೊಳ್ಳುವುದು)
  • ೯. ವೀಳ್ಯದೆಲೆ ತೊಟ್ಟಿನಲ್ಲಿ ಅಹಂಕಾರ ದೇವತೆ ಹಾಗೂ ದಾರಿದ್ರ್ಯಲಕ್ಷ್ಮೀ ಇರುತ್ತಾರೆ.. (ಆದುದರಿಂದನೇ ವೀಳ್ಯದೆಲೆ ಹಾಕಿಕೊಳ್ಳುವವರು ತೊಟ್ಟನ್ನು ಮುರಿದು ಹಾಕುತ್ತಾರೆ.., ಅಹಂಕಾರ ಹಾಗೂ ದಾರಿದ್ರ್ಯಲಕ್ಷ್ಮೀ ಬರಬಾರದೆಂಬ ಅರ್ಥ..)
  • ೧೦. ವೀಳ್ಯದೆಲೆ ಮಧ್ಯಭಾಗದ ನಂತರ ಮನ್ಮಥನ ವಾಸ.., ಈ ಎಲ್ಲಾ ದೇವರುಗಳು ಇರೋದ್ರಿಂದಾನೆ, ವೀಳ್ಯದೆಲೆ ತಾಂಬೂಲಕ್ಕೆ ಇಷ್ಟು ಮಹತ್ವ..

ಈ ವೀಳ್ಯದೆಲೆಯನ್ನು ಬೇರೆಯವರಿಗೆ ತಾಂಬೂಲಕ್ಕೆ ಕೊಡಬೇಕಾದರೆ ತೊಟ್ಟನ್ನು ಮುರಿದು ಎರಡು ಹಣ್ಣು ಅಕ್ಷತೆ, ಎರಡು ಆಡಿಕೆ, ಒಂದು ನಾಣ್ಯವನ್ನು ಇಟ್ಟು ಬೇರೆಯವರಿಗೆ ತಾಂಬೂಲವನ್ನು ಸಮರ್ಪಿಸಬೇಕು.ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಐಶ್ವರ್ಯ ಹೆಚ್ಚುವುದಲ್ಲದೆ ಮತ್ತು ನೀವು ನಿಮ್ಮ ಹತ್ತಿರ ಇರುವ ಒಂದು ಸಾಕಾರತ್ಮಕ ಶಕ್ತಿಯನ್ನು ಬೆರಯವರಿಗೂ ಮಾಡುತ್ತೀರಿ.

ನೀವು ವೀಳ್ಯದೆಲೆ ತೊಟ್ಟು ಮುರಿಯುವುದರಿಂದ ನಿಮ್ಮ ಮನೆಗೂ ಜೇಷ್ಠ ದೇವಿ ಬರುವುದಿಲ್ಲ ಹಾಗು ನೀವು ಬೇರೆಯವರಿಗೆ ತಾಂಬೂಲ ಕೊಟ್ಟವರಿಗೂ ಸಹ ಜೇಷ್ಠ ದೇವಿ ಅವರ ಮನೆಗೆ ಹೋಗುವುದಿಲ್ಲ. ಅವರಿಗೂ ಒಳ್ಳೆಯದು ಆಗುತ್ತದೆ ಹಾಗು ನಿಮಗೂ ಸಹ ಒಳ್ಳೆಯದು ಆಗುತ್ತದೆ.

Related Post

Leave a Comment