ಕಿರು ಬೆರಳನ್ನು ಬುಧ ಬೆರಳು ಎಂದು ಕರೆಯುವರು. ಮಿಥುನ ಹಾಗೂ ಕನ್ಯಾ ರಾಶಿಯನ್ನು ಆಳುವ ಗ್ರಹ ಬುಧ. ಇದು ವ್ಯಕ್ತಿಯ ಕಿರು ಬೆರಳನ್ನು ಪ್ರತಿನಿಧಿಸುವುದು. ಕಿರು ಬೆರಳು ಸ್ವಲ್ಪ ಉದ್ದವಾಗಿ ಮತ್ತು ಗಟ್ಟಿಯಾಗಿ ಇರುವಂತೆ ಇದ್ದರೆ ಅಂತಹ ವ್ಯಕ್ತಿಗಳು ಸಾಮಾನ್ಯವಾಗಿ ಭಾಷಣಕಾರರು, ಬರಹಗಾರರು, ನರತ್ಯಗಾರರು, ರಾಜಕಾರಣಿಗಳು ಸಹ ಆಗಿರುತ್ತಾರೆ ಎಂದು ಹೇಳಲಾಗುವುದು.
ಹಸ್ತ ಸಾಮುದ್ರಿಕೆಯು ಜೀವನದ ಆಗು ಹೋಗುಗಳನ್ನು ತಿಳಿಸುತ್ತದೆ. ಅಂಗೈಯಲ್ಲಿ ಇರುವ ಗೆರೆಗಳು ವಿವಿಧ ಬಗೆಯ ಭವಿಷ್ಯಗಳನ್ನು ಹಾಗೂ ಶುಭ ಮತ್ತು ಅಶುಭಕರವಾದ ಸಂಗತಿಯನ್ನು ತೆರೆದಿಡುತ್ತದೆ. ಅಂಗೈಗಳಲ್ಲಿ ಗ್ರಹಗಳ ಪರ್ವ ಹಾಗೂ ವಿವಿಧ ರೇಖೆಗಳು ಇರುತ್ತವೆ. ಪ್ರತಿಯೊಂದು ರೇಖೆಯೂ ಸಹ ಭಿನ್ನವಾದ ಸಂಗತಿಯನ್ನೇ ಪ್ರತಿ ಬಿಂಬಿಸುತ್ತವೆ. ಹಸ್ತ ಮುದ್ರಿಕೆಯ ಪ್ರಕಾರ ಕಿರು ಬೆರಳಿನಲ್ಲಿ ಕಾಣಿಸಿಕೊಳ್ಳುವ ರೇಖೆಗಳು ನಮ್ಮ ಭವಿಷ್ಯದ ಬಗ್ಗೆ ತೆರೆದಿಡುತ್ತವೆ. ಹಾಗಾದರೆ ಆ ಕುತೂಹಲ ಸಂಗತಿಗಳೇನು? ಎನ್ನುವುದನ್ನು ನೀವು ಸಹ ತಿಳಿದುಕೊಳ್ಳಲು ಬಯಸುವಿರಾದರೆ ಲೇಖನದ ಮುಂದಿನ ಭಾಗವನ್ನು ಪರಿಶೀಲಿಸಿ.
ಕಿರು ಬೆರಳಿನಲ್ಲಿ ಕಾಣಿಸಿಕೊಳ್ಳುವ ಅನೇಕ ಗೆರೆಗಳು ತಮ್ಮದೇ ಆದ ಸಂಗತಿಯನ್ನು ಹೇಳುತ್ತವೆ. ಕಿರು ಬೆರಳಿನ ಮೊದಲ ಭಾಗದಲ್ಲಿ ಜಾಲರಿಯ ಗುರುತು ಹೊದಿದ್ದರೆ ಅದು ಅತ್ಯಂತ ಅಶುಭಕರವಾದ ಸಂಗತಿ ಎಂದು ಪರಿಗಣಿಸಲಾಗುವುದು. ಅಂತಹವರು ಸದಾ ಕೆಟ್ಟ ವಿಷಯದಲ್ಲಿ ಆಸಕ್ತಿ ಹಾಗೂ ರೂಢಿಯನ್ನು ಹೊಂದಿರುತ್ತಾರೆ. ಜೊತೆಗೆ ಆಗಾಗ ಕೆಟ್ಟ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ.
ಕಿರು ಬೆರಳು ಮುಂದಕ್ಕೆ ಅಥವಾ ಹಿಂದಕ್ಕೆ ಭಾಗಿದ್ದರೆ ಅದನ್ನು ಅಶುಭವಾದ ಸಂಗತಿ ಎಂದು ಪರಿಗಣಿಸಲಾಗುವುದು. ಅಂತಹ ಜನರನ್ನು ನಂಬುವುದು ಕಷ್ಟ. ಅವರು ಯಾವಾಗಲೂ ತಮ್ಮ ಸಂತೋಷ ಹಾಗೂ ಸ್ವಾರ್ಥದ ಬಗ್ಗೆಯೇ ಹೆಚ್ಚು ಯೋಚಿಸುತ್ತಾರೆ. ಅವರು ತಮಗೆ ಬೇಕಾದುದ್ದನ್ನು ಪಡೆಯಲು ಯಾರ ಹೃದಯವನ್ನಾದರೂ ನೋಯಿಸಲು ಸಿದ್ಧರಾಗಿರುತ್ತಾರೆ. ಯಾರು ಕಿರುಬೆರಳಿನ ಕೊನೆಯ ಭಾಗದಲ್ಲಿ ವೃತ್ತಾಕಾರವನ್ನು ಹೊಂದಿರುತ್ತಾರೆ ಅವರಿಗೆ ಪ್ರಾಮಾಣಿಕವಾಗಿ ಬದುಕಲು ಕಷ್ಟವಾಗುವುದು. ಅವರು ಎಂದಿಗೂ ಪ್ರಾಮಾಣಿಕರಾಗಿ ಉಳಿಯಲು ಸಾಧ್ಯವಾಗುವುದಿಲ್ಲ.