ದೇವರ ಪೂಜಾ ಸಾಮಗ್ರಿಗಳನ್ನು ನಾವು ಕ್ಲೀನ್ ಮಾಡುತ್ತಲೇ ಇರುತ್ತೇವೆ. ಅದರೆ ಮಾರನೇ ದಿನ ಅದರ ಶೈನಿಂಗ್ ಅನ್ನು ಅದು ಕಳೆದುಕೊಳ್ಳುತ್ತದೆ. ಇದಕ್ಕೆ ಸ್ವಲ್ಪ ವಿಭೂತಿ ತೆಗೆದುಕೊಂಡು ಚೆನ್ನಾಗಿ ಉಜ್ಜಬೇಕು. ಈ ರೀತಿ ಪಾತ್ರೆ ತೊಳೆದ ನಂತರ ವಿಭೂತಿಯಿಂದ ಉಜ್ಜಿದರೆ ಶೈನಿಂಗ್ ಹಾಗೆ ಇರುತ್ತದೆ.
ಒಂದು ವೇಳೆ ಚಿಕ್ಕ ಫೋಟೋಗಳು ಇದ್ದರೆ ದೇವರಿಗೆ ಹೂವು ಮೂಡಿಸುವುದು ತುಂಬಾ ಕಷ್ಟ. ಇದಕ್ಕೆ ಒಂದು ಹಳೆಯ ಪೆನ್ ಟಾಪ್ ತೆಗೆದುಕೊಂಡು ಫೋಯೋ ಹಿಂದೆ ಅಂಟಿಸಿ. ನಂತರ ಇದರ ಮಧ್ಯ ಹೂವನ್ನು ನಿಲ್ಲಿಸಬಹುದು.
ದೇವರ ಫೋಟೋವನ್ನು ಅವಾಗ್ ಅವಗ ಕ್ಲೀನ್ ಮಾಡುತ್ತಲೇ ಇರುತ್ತೇವೆ. ಕ್ಲೀನ್ ಮಾಡಿದ ನಂತರ ಇದಕ್ಕೆ ಬೊಟ್ಟು ಇಡಬೇಕು ಎಂದರೆ ಚಂದನವನ್ನು ಹಾಲಿನಲ್ಲಿ ಮಿಕ್ಸ್ ಮಾಡಿ ಬೊಟ್ಟು ಇಡುವುದರಿಂದ ಬೊಟ್ಟು ಬ್ರೈಟ್ ಆಗಿ ಬರುತ್ತದೆ ಮತ್ತು ತುಂಬಾ ಚೆನ್ನಾಗಿ ಕಾಣಿಸುತ್ತದೆ.
ಇನ್ನು ದೇವರ ಮನೆಯಲ್ಲಿ ಸಾಂಬ್ರಾಣಿ ಸ್ಟಿಕ್ ಉರಿಸುತ್ತೇವೆ. ಅದರೆ ಸ್ವಲ್ಪ ಹೊತ್ತಿಗೆ ಅದು ಖಾಲಿ ಆಗುತ್ತದೆ. ಇದಕ್ಕಾಗಿ ಸಾಂಬ್ರಾಣಿಯ ಸುತ್ತ ಸ್ವಲ್ಪ ನೀರು ತಾಗಿಸಿ ಹಚ್ಚಿದರೆ ತುಂಬಾ ಹೊತ್ತು ಉರಿಯುತ್ತದೆ. ಇದೆ ರೀತಿ ಗಂಧದ ಕಡ್ಡಿಗೂ ಸಹ ಮಾಡಿದರೆ ತುಂಬಾ ಸಮಯದವರೆಗೆ ಉರಿಯುತ್ತದೆ.
ಮಳೆಗಾಲದಲ್ಲಿ ಮ್ಯಾಚ್ ಸ್ಟಿಕ್ ಚೆನ್ನಾಗಿ ಉರಿಯುವುದಿಲ್ಲ. ಈ ರೀತಿ ಆಗಬಾರದು ಎಂದರೆ ಮ್ಯಾಚ್ ಬಾಕ್ಸ್ ಒಳಗೆ ಅಕ್ಕಿಯನ್ನು ಹಾಕಿದರೆ ಮೊಯ್ಸಚರ್ ಅನ್ನು ಅಕ್ಕಿ ಎಳೆದುಕೊಂಡು ಮ್ಯಾಚ್ ಸ್ಟಿಕ್ ಚೆನ್ನಾಗಿ ಉರಿಯುತ್ತದೆ.