ಅಡುಗೆ ಮನೆ ಅಥವಾ ಕಿಚನ್ ಅಲ್ಲಿ ಇರುವ ಟೈಲ್ಸ್ ಅನ್ನು ಕ್ಲೀನ್ ಮಾಡುವುದು ಎಂದರೆ ದೊಡ್ಡನೇ ಕೆಲಸ. ಅಡುಗೆ ಮನೆಯಲ್ಲಿ ಸ್ಟ್ಯಾಂಡ್ ಕೂಡ ಇರುತ್ತೆ. ಇದನ್ನು ಕೂಡ ಕ್ಲೀನ್ ಮಾಡುವುದಕ್ಕೆ ತುಂಬಾ ಕಷ್ಟ ಪಡುತ್ತೀವಿ. ಇದನ್ನು ಸುಲಭವಾಗಿ ಕ್ಲೀನ್ ಮಾಡುವುದು ಹೇಗೆ ಎಂದು ತಿಳಿಸಿಕೊಡುತ್ತೇವೆ.
ಮೊದಲು ನ್ಯೂಸ್ ಪಾಪರೆ ಅನ್ನು ಕಟ್ ಮಾಡಿ ಒಂದು ಬೌಲ್ ಗೆ ಹಾಕಿ. ಇದಕ್ಕೆ 1 ಚಮಚ ಅಡುಗೆ ಸೋಡಾ, ಸ್ವಲ್ಪ ಹಾರ್ಪಿಕ್ ಹಾಕಿ ಹಾಗು ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಈ ನ್ಯೂಸ್ ಪೇಪರ್ ಇಂದ ಟೈಲ್ಸ್ ಅನ್ನು ಉಜ್ಜಿ. ಇದರಿಂದ ಜಿಡ್ಡು ಸುಲಭವಾಗಿ ಬಿಟ್ಟುಕೊಳ್ಳುತ್ತದೆ. ನಂತರ ಒಂದು ಬಟ್ಟೆಯಿಂದ ವರೆಸಿಕೊಂಡರೆ ಸಾಕು.ಈ ರೀತಿ ಮಾಡುವುದರಿಂದ ಕಿಚನ್ ಅನ್ನು ಸುಲಭವಾಗಿ ಇಟ್ಟುಕೊಳ್ಳಬಹುದು.