ಜಾತಕ ದೋಷಗಳನ್ನು ನೋಡಿದಾಗ ಕಂಡುಬರುವ ಮಾಂದಿ ದೋಷವನ್ನು ನಿವಾರಣೆ ಮಾಡಬೇಕು ಎಂದು ಕೆಲವು ಜ್ಯೋತಿಷ್ಯರು ಹೇಳುತ್ತಾರೆ. ಜಾತಕ ನೋಡುವಾಗ ಯಾವ ಗ್ರಹ ಯಾವ ದೃಷ್ಟಿ ಇಟ್ಟಿದೆ ಎನ್ನುವುದನ್ನು ನೋಡಲೇಬೇಕು. ಇನ್ನು ಮಾಂದಿ ಎಂದರೆ ಶನೇಶ್ಚರನ ಪುತ್ರ. ಒಂಬತ್ತು ಗ್ರಹ ಕೂಡ ಒಂದೊಂದು ಉಪಗ್ರಹವನ್ನು ಹೊಂದಿದೆ. ಅದರಲ್ಲಿ ಶನೇಶ್ಚರನ್ನು ಉಪಗ್ರಹ ಮಾಂದಿ ಎನ್ನುವುದು. ಮಾಂದಿ ಎನ್ನುವುದು ಗ್ರಹಕ್ಕಿಂತ ಹೆಚ್ಚು ಶನಿ ತನ್ನ ಪುತ್ರನಂತೆ ಕಾಣುತ್ತಾನೆ.
ರಾವಣನು ನವಗ್ರಹಗಳನ್ನು ಬಂಧಿಸಿ ಇಟ್ಟಾಗ. ಆ ಸಮಯದಲ್ಲಿ ಶನಿ ದೇವ ಬೆವತ್ತಿರುತ್ತಾರೆ. ಅದರಿಂದ ಒಂದು ಗ್ರಹ ಮಾಡಿ ಅದಕ್ಕೆ ಜೀವ ತುಂಬಿ ಅದಕ್ಕೆ ಮಾಂದಿ ಎಂದು ಹೆಸರು ಇಡುತ್ತಾನೆ.ಈ ಗ್ರಹ ಯಾರ ಜಾತಕದಲ್ಲಿ ಇರುತ್ತದೆಯೋ ಅವರಿಗೆ ಬಹಳ ಕೆಟ್ಟ ಪ್ರಭಾವವನ್ನು ಬಿರುತ್ತದೆ. ಇದು ಒಂದು ರೀತಿ ಪಿತೃ ದೋಷವನ್ನು ಸಹ ತಂದು ಕೊಡುತ್ತದೆ. ಮಾಂದಿ ದೋಷ ಯಾವ ಸ್ಥಾನದಲ್ಲಿ ಇದೆ ಮತ್ತು ಯಾವ ಗ್ರಹದಲ್ಲಿ ಇದೆ ಎಂದು ತಿಳಿದುಕೊಂಡು ಪರಿಹಾರವನ್ನು ನಿರ್ಣಯ ಮಾಡಬಹುದು. ಮಾಂದಿ ದೋಷ ಇದೆ ಎಂದು ತಿಳಿದ ಕೂಡಲೇ ಉತ್ತಮವಾದ ಜೋತಿಷ್ಯರ ಸಲಹೆ ಪಡೆದು ನಿವಾರಣೆ ಮಾಡಿಕೊಳ್ಳಿ.