ಮೌನಿ ಅಮಾವಾಸ್ಯೆ ಮತ್ತು ಗರುಡ ಜಯಂತಿ ಸಂಪೂರ್ಣ ಪೂಜಾ ವಿಧಾನ / ದೇವರ ವಿಗ್ರಹ ಯಾವಾಗ ಸ್ವಚ್ಛಗೊಳಿಸಬೇಕು!

ಮೌನಿ ಅಮಾವಾಸ್ಯೆ ದಿನ ಗರುಡ ಜಯಂತಿ ಕೂಡ ಇದೆ. ಗರುಡ ವಿಷ್ಣುವಿನ ವಾಹನವಾಗಿದೆ. ವಿಷ್ಣು ದೇವಾಲಯದಲ್ಲಿ ದ್ವಾರ ಪಾಲಕ ಮತ್ತು ಉಪದೇವತೆಯ ಪ್ರಮುಖ ಸ್ಥಾನವನ್ನು ಸಹ ಹೊಂದಿದೆ. ಈ ಗರುಡ ಜಯಂತಿ ಅನ್ನು ಯಾವ ಕಾರಣಕ್ಕೆ ಪೂಜೆ ಮಾಡುತ್ತಾರೆ ಎಂದರೆ ವಿವಾಹಿತ ಮಹಿಳೆಯರು ಒಂದು ಸಂತೋಷ ದಾಂಪತ್ಯ ಜೀವನಕ್ಕಾಗಿ ಇದನ್ನು ಆಚರಣೆ ಮಾಡುತ್ತಾರೆ. ಅದರ ಜೊತೆಯಲ್ಲಿ ಈ ಪೂಜೆಯಳ್ಳಿ ಮಕ್ಕಳ ಯೋಗ ಕ್ಷೇಮ ಮತ್ತು ಉತ್ತಮ ಆರೋಗ್ಯಕ್ಕಾಗಿ ಆಚರಣೆ ಮಾಡುತ್ತಾರೆ.

ಮೌನಿ ಅಮಾವಾಸ್ಯೆ ಪೂಜಾ ಸಿದ್ಧತೆ
ನಿಮ್ಮ ಮನೆಯಲ್ಲಿ ಯಾವ ರೀತಿ ಪೂಜೆ ಅಲಂಕಾರ ಮಾಡುತ್ತಿರೋ ಅದೇ ರೀತಿ ಪೀಠ ಅಲಂಕಾರ ಮಾಡಿ ರಂಗೋಲಿ ಹಾಕಿಕೊಂಡು ಪೀಠ ಇಟ್ಟು ತಟ್ಟೆಯಲ್ಲಿ ಅಕ್ಕಿ ಹಾಕಬೇಕು. ಅಕ್ಕಿ ಮೇಲೆ ಸ್ವಸ್ತಿಕ್ ಚಿಂರ್ ಬರೆಯಬೇಕು ಮತ್ತು ಎರಡು ವೀಳ್ಯದೆಲೆ ಇಟ್ಟು ಅದರ ಮೇಲು ಸ್ವಸ್ತಿಕ್ ಚಿಹ್ನೆಯನ್ನು ಹಾಕಬೇಕು. ಇನ್ನು ಕಳಸ ಇಟ್ಟು ಅದರಲ್ಲಿ ಅರಿಶಿಣ ಕುಂಕುಮ ಮತ್ತು ಕಾಯಿನ್, ಬೆಳ್ಳಿ ನಾಣ್ಯ, ಪಚ್ಚ ಕರ್ಪುರ ಹಾಕಬೇಕು. ನಂತರ 5 ವೀಳ್ಯದೆಲೆ ಇಟ್ಟು ಕಾಯಿಯನ್ನು ಇಡಬೇಕು. ಗೆಜ್ಜೆ ವಸ್ತ್ರವನ್ನು ಹಾಕಿ ಮತ್ತು ಮಾಂಗಲ್ಯವನ್ನು ಹಾಕೀ ಹೂವಿನಿಂದ ಅಲಂಕಾರ ಮಾಡಬೇಕು.

ಮನೆಯಲ್ಲಿ ಇರುವ ಎಲ್ಲಾ ವಿಗ್ರಹವನ್ನು ದೇವರ ಮುಂದೆ ಇಟ್ಟು ಪೂಜೆಯನ್ನು ಮಾಡಬಹುದು. ಎರಡು ತುಪ್ಪದ ದೀಪವನ್ನು ಸಹ ಹಚ್ಚಬೇಕು ಮತ್ತು ನೈವೇದ್ಯಕ್ಕೆ ಸಿಹಿ ಪೊಂಗಲ್ ಅನ್ನು ಮಾಡಬೇಕು. ನಂತರ ಎರಡು ನಿಂಬೆ ಹಣ್ಣನ್ನು ದೃಷ್ಟಿ ತೆಗೆದು ಒಳಗೊಂದು ಹೊರಗೆ ಒಂದು ಕಟ್ ಮಾಡಿ ಇಡಬೇಕು. ನಿಂಬೆ ಹಣ್ಣನ್ನು ಕಟ್ ಮಾಡಿದಾಗ ಕುಂಕುಮವನ್ನು ಜಾಸ್ತಿ ಹಚ್ಚಿ ಮಧ್ಯದಲ್ಲಿ ಅರಿಶಿನವನ್ನು ಹಚ್ಚಬೇಕು. ನಂತರ ನಿಂಬೆ ಹಣ್ಣನ್ನು ವಿರುದ್ಧ ದಿಕ್ಕಿನಲ್ಲಿ ಇಡಬೇಕು. ಅಂದರೆ ಎಡಗೈಯಲ್ಲಿ ಇರೋದನ್ನ ಬಲಗಡೆ ಬಾಗಿಲಿಗೆ ಇಡಬೇಕು. ಬಲಗಡೆ ಕೈಯಲ್ಲಿ ಇರೋದನ್ನ ಎಡ ಬಾಗಿಲಿಗೆ ಇಡಬೇಕು.

ನಾಳೆ ದಿನ ಪಿತೃ ಹೆಸರಿನಲ್ಲಿ ಮೊಸರನ್ನ ನೈವೇದ್ಯ ಮಾಡುವುದನ್ನು ಮರೆಯಬೇಡಿ. ನಂತರ ಕಾಯಿ ಒಡೆದು ದೀಪ ದೂಪವನ್ನು ಬೆಳಗಬೇಕು.ಇನ್ನು ಬಡವರಿಗೆ ಇಷ್ಟವಾದ ಬಟ್ಟೆಯನ್ನು ಕೊಡುವುದರಿಂದ ನೀವು ಲಕ್ಷ್ಮಿ ಆಶೀರ್ವಾದವನ್ನು ಪಡೆಯಬಹುದು.

ಇನ್ನು ಹೋಸ್ತಿಲ ಬಳಿ ರಂಗೋಲಿ ಹಾಕಿ ದೀಪವನ್ನು ಹಚ್ಚಬೇಕು. ಇನ್ನೊಂದು ನಿಂಬೆ ಹಣ್ಣನ್ನು ಹೋಸ್ತಿಲ ಬಳಿ ಇಟ್ಟು ಪೂಜೆ ಮಾಡಿ ಮೂರು ಬಾರಿ ನೀವಾಳಿಸಿ ಬಾಗಿಲ ಹತ್ತಿರ ಕಟ್ ಮಾಡಿ ಕುಂಕುಮ ಹಚ್ಚಿ ವಿರುದ್ಧವಾಗಿ ಇಡಬೇಕು. ನಂತರ ಮಂಗಳರತಿ ಮಾಡಬೇಕು. ನಂತರ ಪಿತೃಗಳಿಗೆ ಇಟ್ಟ ನೈವೇದ್ಯವನ್ನು ಕಾಗೆಗಳಿಗೆ ನೀಡಬೇಕು.ಈ ರೀತಿ ಮಾಡಿದರೆ ಅಮಾವಾಸ್ಯೆ ಸಂಪೂರ್ಣ ಆಗುತ್ತದೆ.

Related Post

Leave a Comment