ಹೆಚ್ಚಿನ ಮನೆಗಳಲ್ಲಿ ಹಿತ್ತಾಳೆಯಿಂದ ಮಾಡಿದ ಪೂಜಾ ಪಾತ್ರೆಗಳಿರುತ್ತದೆ. ಈ ಪೂಜಾ ಸಾಮಗ್ರಿಗಳನ್ನು ಸ್ವಚ್ಛಗೊಳಿಸುವುದೇ ದೊಡ್ಡ ಸವಾಲು ಎನ್ನಬಹುದು. ಆದರೆ ಇದನ್ನು ಸ್ವಚ್ಛ ಮಾಡಲು ಸಹ ಒಂದು ಸಮಯ ಹಾಗೂ ದಿನ ಇದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಶುಕ್ರವಾರ, ಅಮವಾಸ್ಯೆ, ಹುಣ್ಣಿಮೆ ಹೀಗೆ ಮುಂತಾದ ಪ್ರಮುಖ ದಿನಗಳಲ್ಲಿ ಮಹಿಳೆಯರು ಮನೆಯಲ್ಲಿ ಪೂಜಾ ಕೊಠಡಿ ಮತ್ತು ಪೂಜಾ ಸಾಮಗ್ರಿಗಳನ್ನು ಸ್ವಚ್ಛಗೊಳಿಸುವುದು ವಾಡಿಕೆ. ಆದರೆ ಈ ಪೂಜೆಯ ಸಾಮಗ್ರಿಗಳನ್ನು ತೊಳೆಯಲು ಸಹ ಒಂದು ದಿನ ಇದ್ದು, ಆ ದಿನ ಮಾತ್ರ ಸ್ವಚ್ಛ ಮಾಡಬೇಕಂತೆ.
ಆದರೆ ಮಹಿಳೆಯರ ಇನ್ನೊಂದು ಗೋಳು ಇದೆ, ಹೀಗೆ ಸ್ವಚ್ಛಗೊಳಿಸಿದ ಪೂಜಾ ಸಾಮಗ್ರಿಗಳು ಎರಡೇ ದಿನಗಳಲ್ಲಿ ಕಪ್ಪು ಬಣ್ಣಕ್ಕೆ ತಿರುಗುತ್ತವೆ ಎನ್ನುವುದು ಮಹಿಳೆಯರ ವಾದ. ಈ ಸಮಸ್ಯೆಗೆ ಸಹ ಇಲ್ಲಿ ಪರಿಹಾರವಿದೆ. ಪೂಜೆಯ ಪಾತ್ರೆಗಳು ಬೇಗ ಕಪ್ಪು ಬಣ್ಣಕ್ಕೆ ತಿರುಗದಂತೆ ಸ್ವಚ್ಛ ಮಾಡುವುದು ಎಂಬುದು ಇಲ್ಲಿದೆ.
ಮೊದಲನೆಯದಾಗಿ, ಪೂಜೆಗೆ ಸಂಬಂಧಿಸಿದ ಕೆಲಸಗಳನ್ನು ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಶುಕ್ರವಾರ ಮತ್ತು ಮಂಗಳವಾರದಂದು ಮನೆಯನ್ನು, ಪೂಜಾ ಕೊಠಡಿಯನ್ನು ಮತ್ತು ಪೂಜಾ ಸಾಮಗ್ರಿಗಳನ್ನು ಸ್ವಚ್ಛಗೊಳಿಸುವುದು ತಪ್ಪು.
ಶುಕ್ರವಾರ ಮತ್ತು ಮಂಗಳವಾರ ದೇವರ ಮನೆ ಹಾಗೂ ಸಾಮಗ್ರಿ ಸ್ವಚ್ಛ ಮಾಡಿದರೆ ನಿಮ್ಮ ಮನೆಯಲ್ಲಿರುವ ಅದೃಷ್ಟ ಲಕ್ಷ್ಮಿ ಹೊರಹೋಗುತ್ತಾಳೆ ಎನ್ನಲಾಗುತ್ತಿದೆ. ಹಾಗಾಗಿ ಈ ವಾರಗಳಲ್ಲಿ ಕಾರ್ಯಕ್ರಮವಿದ್ದರೆ ಮೊದಲ ದಿನವೇ ಸ್ವಚ್ಛತಾ ಕಾರ್ಯ ಮುಗಿಸುವುದು ಉತ್ತಮ.
ಮೊದಲನೆಯದಾಗಿ, ಪೂಜಾ ಪಾತ್ರೆಗಳನ್ನು ಸ್ವಚ್ಛಗೊಳಿಸಲು ನೀರು ಹಾಕುವ ಮೊದಲು, ಎಣ್ಣೆಯ ಜಿಡ್ಡನ್ನು ಬಟ್ಟೆಯಿಂದ ಒರೆಸಿಕೊಳ್ಳಿ.
ಎಣ್ಣೆಯ ಜಿಡ್ಡು ಹೋದ ನಂತರ ಅಗಲವಾದ ಪಾತ್ರೆಯಲ್ಲಿ ಹುಣಸೇಹಣ್ಣು ಹಾಕಿ, ನಿಮ್ಮ ಪೂಜಾ ಸಾಮಗ್ರಿಯನ್ನು ಮುಳುಗಿಸಿ. ಆ ಪಾತ್ರೆ ಮುಳುಗುವವರೆಗೆ ನೀರು ಹಾಕಿ ಅದರಲ್ಲಿ ಹುಣಸೆ ಹಣ್ಣಿನ ಪ್ರಮಾಣಕ್ಕೆ ನಿಂಬೆರಸ ಸೇರಿಸಿ ಮಿಶ್ರಣ ಮಾಡಿ
ನಂತರ ಒಂದು ಸಣ್ಣ ಬಟ್ಟಲಿನಲ್ಲಿ ಎರಡು ಚಮಚ ಹ್ಯಾಂಡ್ ವಾಶ್ ತೆಗೆದುಕೊಳ್ಳಿ. ಹಾಗೆಯೇ, 2 ಸ್ಪೂನ್ ಟೂತ್ ಪೇಸ್ಟ್ ಮತ್ತು ನಿಂಬೆರಸ ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಂಬೆಯ ಹೋಳುಗಳಿಗೆ ಹಚ್ಚಿಕೊಂಡು ಪೂಜೆಯ ಸಾಮಗ್ರಿ ತೊಳೆಯಿರಿ ಸಾಕು.