ವರಮಹಾಲಕ್ಷ್ಮಿ ಕಳಸವನ್ನು ಸರಿಯಾದ ಸಮಯದಲ್ಲಿ ಪ್ರತಿಷ್ಟಾಪನೆ ಮಾಡಲಾಗುತ್ತದೆ. ಆಗಸ್ಟ್ 25ನೇ ತಾರೀಕು ಶ್ರಾವಣ ಮಾಸದ ಶುಕ್ಲ ಪಕ್ಷದ ಎರಡನೇ ಶುಕ್ರವಾರದ ದಿನ ಈ ಒಂದು ವರಮಹಾಲಕ್ಷ್ಮಿ ಹಬ್ಬವನ್ನು ಆಚರಣೆ ಮಾಡುತ್ತೇವೆ. ಒಂದು ವೇಳೆ ಈ ವಾರ ಮಾಡುವುದಕ್ಕೆ ಆಗದೆ ಇದ್ದರೆ ನೆಸ್ಟ್ ಬರುವ ಶುಕ್ರವಾರದ ದಿನ ವರಮಹಾಲಕ್ಷ್ಮಿ ಪೂಜೆಯನ್ನು ಮಾಡಬಹುದು. ವರಮಹಾಲಕ್ಷ್ಮಿ ಪೂಜೆ ಸಲ್ಲಿಸಲು ಅತ್ಯಂತ ಸೂಕ್ತವಾದ ಸಮಯ ಎಂದರೆ ಶುಕ್ರವಾರ ಬೆಳಗ್ಗೆ 4:34 ನಿಮಿಷಕ್ಕೆ ಪ್ರಾರಂಭವಾದರೆ 5:22 ನಿಮಿಷದ ಒಳಗೆ ನೀವು ಪೂಜೆಯನ್ನು ಸಂಪೂರ್ಣವಾಗಿ ಮುಕ್ತಯ ಮಾಡುವುದಕ್ಕೆ ಆಗದೆ ಇದ್ದರು ಸಹ ಅಖಂಡ ದೀಪರಾಧನೆ ಮಾಡಿದರೆ ಸಾಕು.
ವರಮಹಾಲಕ್ಷ್ಮಿ ಹಬ್ಬದ ದಿನ ಬೆಳಗ್ಗೆ 2:00 ಗಂಟೆಗೆ ಎದ್ದು ಮನೆಯನ್ನು ಶುದ್ಧಿ ಮಾಡಿಕೊಂಡು ಸ್ನಾನವನ್ನು ಮಾಡಿಕೊಂಡು ಪೂಜೆಯ ಪ್ರಾರಂಭ ಮಾಡಿಕೊಳ್ಳಬೇಕು. ಮೊದಲು ಗಣೇಶ ಪೂಜೆ. ನಂತರ ಅಮ್ಮನವರ ಪೂಜೆಯನ್ನು ಮಾಡಬೇಕು.
ಇನ್ನು ಈ ಸಮಯದಲ್ಲಿ ಮಾಡುವುದಕ್ಕೆ ಆಗದೆ ಇದ್ದರೆ ಸಿಂಹ ಲಗ್ನದಲ್ಲಿ ಮಾಡಬಹುದು. 5:55 ನಿಮಿಷದಿಂದ 7:42 ನಿಮಿಷದಲ್ಲಿ ನೀವು ಪೂಜೆಯನ್ನು ಮಾಡಬೇಕಾಗುತ್ತದೆ.
ಮತ್ತೊಂದು ಶುಭ ಮುಹೂರ್ತ ಎಂದರೆ 9:15 ನಿಮಿಷಕ್ಕೆ ಪ್ರಾರಂಭವಾದರೆ 10:00 ಗಂಟೆ ವರೆಗೂ ಇರುತ್ತದೆ.ಇಷ್ಟರ ಒಳಗೆ ಕಳಸ ಸ್ಥಾಪನೆ ಮಾಡಿಕೊಳ್ಳಬೇಕಾಗುತ್ತದೆ. ಇನ್ನು 10:30 ಯಿಂದ 12:00 ಗಂಟೆವರೆಗೆ ರಾಹು ಕಾಲ ಇರುತ್ತದೆ.ಈ ಸಮಯದಲ್ಲಿ ಪೂಜೆಯನ್ನು ಮಾಡದೇ ಇರುವುದು ಒಳ್ಳೆಯದು.
ನಂತರ ಅಭಿಜಿನ್ ಮುಹೂರ್ತ ಇರುತ್ತದೆ. ಇದು ಬೆಳಗ್ಗೆ 12:03 ನಿಮಿಷದಿಂದ 12:54 ನಿಮಿಷದವರೆಗೂ ಇರುತ್ತದೆ. ಈ ಸಮಯದಲ್ಲಿ ಕೂಡ ಕಳಸ ಸ್ಥಾಪನೆ ಮಾಡಿಕೊಳ್ಳಬಹುದು. ಇನ್ನು ಐದನೇ ಮುಹೂರ್ತ ಎಂದರೆ ಸಂಜೆ ಕುಂಭ ಲಗ್ನದಲ್ಲಿ 6:22 ನಿಮಿಷದಿಂದ 7:50 ನಿಮಿಷದವರೆಗೂ ನಿಮಗೆ ಸಮಯ ಇರುತ್ತದೆ. ಈ ಸಮಯದಲ್ಲಿ ಕೂಡ ಕಳಸ ಸ್ಥಾಪನೆ ಮಾಡಬಹುದು. ನಿಮಗೆ ಅನುಗುಣವಾಗಿ ತಿಳಿಸಿರುವ ಸಮಯದಲ್ಲಿ ಕಳಸ ಸ್ಥಾಪನೆ ಮಾಡಿಕೊಂಡು ಪೂಜೆಯನ್ನು ಮಾಡಿ.