ಕನಸು ಕಾಣದವರಿಲ್ಲ. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗು ಎಲ್ಲರೂ ಕನಸಿನ ಲೋಕದಲ್ಲಿ ವಿಹರಿಸುವವರೇ. ಇಂಥ ಕನಸುಗಳು ಭವಿಷ್ಯದ ಸಂಕೇತವೇ ಎಂಬ ಅನುಮಾನ ಕಾಡುತ್ತದೆ. ಹೌದು, ಒಂದು ಕನಸು ಆ ವ್ಯಕ್ತಿಯ ಜೀವನದಲ್ಲಿ ಬರಲಿರುವ ಸುಖ-ದುಃಖಗಳ ಬಗ್ಗೆ ನೀಡುವ ಮುನ್ಸೂಚನೆ ಎಂದರೇ ತಪ್ಪಾಗಲಾರದು. ಅದೇ ರೀತಿ ನೀವು ಕನಸಿನಲ್ಲಿ ಬೆಂಕಿಗೆ ಸಂಬಂಧಿಸಿದ ದೃಶ್ಯ ಕಂಡರೆ, ಅದು ಯಾವುದರ ಸಂಕೇತ ಎನ್ನುವುದರ ಬಗ್ಗೆ ನೋಡೋಣ ಬನ್ನಿ.
ತನ್ನ ಮನೆ ಸುಡುವ ದೃಶ್ಯ
ನಿಮ್ಮ ಕನಸಿನಲ್ಲಿ ನಿಮ್ಮ ಮನೆಯೇ ಸುಟ್ಟು ಭಸ್ಮವಾಗುತ್ತಿರುವ ದೃಶ್ಯ ಕಂಡರೆ, ಗಾಬರಿಯಾಗಬೇಡಿ. ಅದು ಶುಭ ಸಂಕೇತ. ಅವಿವಾಹಿತರು ಇಂಥ ಕನಸನ್ನು ಕಂಡರೆ, ಶೀಘ್ರದಲ್ಲಿಯೇ ಆತ ಬಯಸಿದ ಕನ್ಯೆಯ ಜತೆ ಆತನ ವಿವಾಹವಾಗುತ್ತದೆ. ಒಂದು ವೇಳೆ ವಿವಾಹಸ್ಥರು ಈ ರೀತಿಯ ಕನಸು ಕಂಡರೆ, ಸರ್ವಗುಣ ಸಂಪನ್ನ ಸಂತಾನ ಪ್ರಾಪ್ತಿಯಾಗುವುದು ಎಂದು ನಂಬಲಾಗಿದೆ.
ದೀಪದಂತೆ ಉರಿಯುವ ಬೆಂಕಿ
ಕನಸಿನಲ್ಲಿ ದೀಪದಂತೆ ಉರಿಯು ಬೆಂಕಿ ಕಾಣುವುದು ಶುಭ ಸಂಕೇತವಾಗಿದೆ. ತಾಯಿ ಲಕ್ಷ್ಮೀ ಕೃಪೆಯಿಂದ ಸುಖ ಸಮೃದಿ ಪ್ರಾಪ್ತವಾಗುತ್ತದೆ.
ಸ್ವಪ್ನದಲ್ಲಿ ಹೊಗೆ ಕಂಡರೆ ಏನಾಗುತ್ತದೆ?
ಸ್ವಪ್ನದಲ್ಲಿ ಯಾವುದೇ ತರಹದ ಹೊಗೆ ಕಂಡರೆ, ಅದು ಅಶುಭದ ಸಂಕೇತ. ಇದು ಶತ್ರುಗಳ ಸಂಖ್ಯೆ ಹೆಚ್ಚಾಗುತ್ತಿರುವುದು, ವ್ಯಾಪಾರದಲ್ಲಿ ಆಗುವ ನಷ್ಟ ಮತ್ತು ಅನಾರೋಗ್ಯದ ಮುನ್ಸೂಚನೆಯಾಗಿದೆ.
ಸ್ವತಃ ಪೂಜೆ ಮಾಡುವ ಸ್ವಪ್ನ
ಸ್ವತಃ ನೀವೇ ಪೂಜೆ ಮಾಡುತ್ತಿರುವಂತೆ ಕನಸು ಕಂಡರೆ, ಸದ್ಯದಲ್ಲಿಯೇ ನಿಮ್ಮೆಲ್ಲ ಕಷ್ಟ ಕಾರ್ಪಣ್ಯಗಳು ದೂರವಾಗುತ್ತವೆ. ತಂದೆ ಈಶ್ವರನ ಕೃಪೆಯಿಂದ ಜೀನವದಲ್ಲಿ ಸುಖ-ಶಾಂತಿ ನೆಲೆಸಲಿದೆ.
ಉರಿಯುವ ಬೆಂಕಿ
ಕನಸಿನಲ್ಲಿ ಉರಿಯು ಬೆಂಕಿ ಕಾಣುವುದು ಕೂಡ ಶುಭ ಸಂಕೇತವಾಗಿದ್ದು, ಬರಬೇಕಿರುವ ದುಡ್ಡು ವಾಪಸ್ಸಾಗುವ ಸಾಧ್ಯತೆ ಇರುತ್ತದೆ. ಆದರೆ, ವ್ಯಕ್ತಿಗೆ ಬೆಂಕಿ ಹತ್ತಿರುವ ದೃಶ್ಯ ಅಶುಭದ ಸಂಕೇತ ಎಂದು ನಂಬಲಾಗುತ್ತದೆ. ಇದು ವ್ಯಾಪಾರದಲ್ಲಿ ನಷ್ಟವಾಗುವುದರ ಸಂಕೇತ.
ಬೆಂಕಿ ಹಿಡಿಯುವ ದೃಶ್ಯ
ಸ್ವಪ್ನದಲ್ಲಿ ನೀವು ಅಥವಾ ಯಾವುದೇ ಒಬ್ಬ ವ್ಯಕ್ತಿ ಬೆಂಕಿ ಹಿಡಿಯುವ ದೃಶ್ಯ ಕಂಡರೆ, ಅನಾವಶ್ಯಕ ಖರ್ಚಾಗು ಸಾಧ್ಯತೆ ಇರುತ್ತದೆ.