ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಶಿವರಾತ್ರಿ ಹಬ್ಬ ಕೂಡ ಒಂದು. ಮಾರ್ಚ್ 8 ಶುಕ್ರವಾರ ಶಿವರಾತ್ರಿ ಹಬ್ಬವನ್ನು ಆಚರಣೆ ಮಾಡುತ್ತಾರೆ. ಶಿವರಾತ್ರಿಯಲ್ಲಿ ಉಪವಾಸ ಮತ್ತು ಜಾಗರಣೆ ತುಂಬಾನೇ ಮಹತ್ವ ಇದೆ. ಈ ದಿನ ಶಿವಭಕ್ತರು ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕು. ಶಿವರಾತ್ರಿ ವ್ರತವನ್ನು ಸರಿಯಾಗಿ ಆಚರಣೆ ಮಾಡುತ್ತಾರೆ ಅವರಿಗೆ ಅಶ್ವಮೇಧಾ ಯಾಗ ಮಾಡಿದಷ್ಟು ಹೆಚ್ಚು ಪುಣ್ಯ ಸಿಗುತ್ತದೆ.ಶಿವರಾತ್ರಿ ಹಬ್ಬವನ್ನು ಆಚರಣೆ ಮಾಡುವವರು ಬೆಳಗ್ಗೆ ಬೇಗಾ ಎದ್ದು ನದಿಯಲ್ಲಿ ಸ್ನಾನ ಮಾಡಿ. ಇಲ್ಲವಾದರೆ ಮನೆಯಲ್ಲಿ ಸ್ನಾನದ ನೀರಿಗೆ ಎಳ್ಳು ಹಾಕಿ ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ ಶಿವನ ದೇವಸ್ಥಾನಕ್ಕೆ ಹೋಗಿ ಬನ್ನಿ.
ಶಿವನಿಗೆ ಅಭಿಷೇಕ ಎಂದರೇ ತುಂಬಾನೇ ಪ್ರಿಯ ಆಗಿರುವುದರಿಂದ ಶಿವನಿಗೆ ಹೆಚ್ಚು ಅಭಿಷೇಕವನ್ನು ಮಾಡಬೇಕು.ಶಿವರಾತ್ರಿ ದಿನ ಉಪವಾಸ ಮಾಡಬೇಕು ಎಂದರೇ ಈ ನಿಯಮಗಳನ್ನು ಪಾಲನೆ ಮಾಡಬೇಕು. ಉಪವಾಸ ಮಾಡಬೇಕು ಎಂದರೆ ಮಾರ್ಚ್ 8 ಬೆಳಗ್ಗೆಯಿಂದ ಶುರು ಮಾಡಬೇಕು.ಇಡಿ ದಿನ ಉಪವಾಸ ಇರಬೇಕು.ಉಪವಾಸವನ್ನು ಮಾರನೇ ದಿನ ಮಾರ್ಚ್ 9 ನೇ ತಾರೀಕು ಬೆಳಗ್ಗೆ ಪರಣ ಸಮಯದಲ್ಲಿ ಮುರಿಯಬೇಕು . ಶಿವನಿಗೆ ಪೂಜೆಯನ್ನು ಮಾಡಿ ನೈವೇದ್ಯ ಮಾಡಿ ಉಪವಾಸವನ್ನು ಬಿಡಬೇಕು. ಇದಿಷ್ಟು ನಿಯಮಗಳನ್ನು ಪಾಲನೆ ಮಾಡಬೇಕು.
ನೀವು ಶಿವರಾತ್ರಿ ದಿನ ಉಪವಾಸ ಮಾಡುತ್ತಿದ್ದೀರಾ ಎಂದರೇ ಅವತ್ತಿನ ದಿನ ಜಾಗರಣೆಯನ್ನು ಸಹ ಮಾಡಬೇಕು.ಉಪವಾಸ ಮಾಡುವವರು ಕಟ್ಟು ನಿಟ್ಟಿನಿಂದ ಯಾವುದೇ ರೀತಿಯ ಆಹಾರವನ್ನು ಸೇವನೆ ಮಾಡದೇ ನೀರು ಕುಡಿಯದೆ ವ್ರತವನ್ನು ಮಾಡಬೇಕು. ಒಂದು ವೇಳೆ ಉಪವಾಸ ಮಾಡಲು ಕಷ್ಟವಾದರೆ ಹಾಲು ನೀರು ಸೇವನೆ ಮಾಡಬಹುದು.ಮುಖ್ಯವಾಗಿ ಅನ್ನವನ್ನು ಯಾವುದೇ ಕಾರಣಕ್ಕೂ ಸೇವನೆ ಮಾಡಬಾರದು.ಉಪವಾಸ ಮಾಡುವಾಗ ಯಾವುದೇ ಕಾರಣಕ್ಕೂ ಕೆಟ್ಟ ಆಲೋಚನೆ ಮತ್ತು ಕೆಟ್ಟ ಸಹವಾಸ, ಕೆಟ್ಟ ಪದಗಳನ್ನು ಸಹ ಬಳಸುವುದಕ್ಕೆ ಹೋಗಬಾರದು.ಹೀಗೆ ಇದ್ದಾರೆ ಮಾತ್ರ ಉಪವಾಸ ಮಾಡಿದ್ದಕೆ ಫಲ ಸಿಗುತ್ತದೆ.ಈ ರೀತಿ ಆಚರಣೆ ಮಾಡಿದರೆ ನಿಮ್ಮ ಜೀವನದಲ್ಲಿ ತುಂಬಾನೇ ಬದಲಾವಣೆ ಕಂಡು ಬರುತ್ತದೆ.