ಬೆಳ್ಳಿಯ ದೀಪವನ್ನು ಶುದ್ಧ ಹಸುವಿನ ತುಪ್ಪ, ಕೊಬ್ಬರಿ ಎಣ್ಣೆ, ಸೂರ್ಯಕಾಂತಿ ಎಣ್ಣೆಯಿಂದ ಹಚ್ಚಿದರೆ ಒಳ್ಳೆಯದು. ಇದರಿಂದ ಉತ್ತಮ ಜೀವನ ಶಾಂತಿ ನೆಮ್ಮದಿ ನೆಲೆಸುತ್ತದೆ.ನೆನೆದ ಕಾರ್ಯ ಆಗುತ್ತದೆ ಮತ್ತು ಅಧಿಕ ಲಾಭ ಸಿಗುತ್ತದೆ. ಇಷ್ಟರ್ಥ ಸಿದ್ದಿ ಆಗುತ್ತದೆ.
ಇನ್ನು ಹಿತ್ತಾಳೆ ದೀಪವನ್ನು ಹಚ್ಚುವುದರಿಂದ ದೇವರಿಗೆ ತೇಜಸ್ಸು ಜಾಸ್ತಿ ಆಗುತ್ತೆ. ಮನೆಗೆ ದೈವ ಬಲ ಬರುತ್ತದೆ, ಪಾಸಿಟಿವ್ ಎನರ್ಜಿ ಸಾದ ಇರುತ್ತದೆ, ರೋಗ ಬಾದೆ ಇರುವುದಿಲ್ಲ, ಅಪಮೃತ್ಯು ಇರುವುದಿಲ್ಲ ಜೊತೆಗೆ ಮಂತ್ರ ಸಿದ್ದಿ ಆಗುತ್ತದೆ. ದೀಪ ಹಚ್ಚುವಾಗ ಕುಳಿತುಕೊಂಡು ದೀಪ ಹಚ್ಚಬೇಕು. ನಿಂತುಕೊಂಡು ಅಥವಾ ಬಗ್ಗಿ ದೀಪವನ್ನು ಹಚ್ಚಬಾರದು.
ತ್ರಿಕೋನಕಾರದ ಗೂಡಿನಲ್ಲಿ ದೀಪವನ್ನು ಹಚ್ಚಬಾರದು. ದೀಪವನ್ನು ಹಚ್ಚುವುದು ನಮ್ಮಲ್ಲಿರುವ ಕತ್ತಲೆಯನ್ನು ದೂರ ಮಾಡಲಿಕ್ಕಾಗಿ ಮತ್ತು ಋಣತ್ಮಕ ಕತ್ತಲೆ ಕಳೆದು ಧನಂತ್ಮಕ ಬೆಳಕು ಬರಲಿ ಎಂದು..
ದೀಪ ಹಚ್ಚಿ ದೇವರ ಜೊತೆ ಮೌನವಾಗಿ ಮಾತಾಡಿ. ನಿಮ್ಮ ಕಷ್ಟ ಸುಖಗಳನ್ನು ಹೇಳಿಕೊಳ್ಳಿ. ಭಗವಂತ ಹೀಗಾಗಲೇ ನೀಡಿರುವ ಸುಖ ಸಂತೋಷ ಸೌಕರ್ಯಗಳಿಗೆ ಕೃತಜ್ಞತೆ ಹೇಳಿ. ನಂತರ ನಿಮ್ಮ ಕೊರೆಕೆಗಳನ್ನು ಹೇಳಿ ಎಲ್ಲಾವು ಒಳ್ಳೆಯದಾಗುತ್ತದೆ