ಪ್ರತಿ ವರ್ಷವು ಕೂಡ ಮಹಾಲಯ ಅಮಾವಾಸ್ಯೆ ಭದ್ರಪದ ಮಾಸ ಮುಗಿದ ಮಾರನೇ ದಿನವನ್ನು ಮಹಾಲಯ ಅಮಾವಾಸ್ಯೆ ಎಂದು ಆಚರಣೆ ಮಾಡುತ್ತೇವೆ. ಮಹಾಲಯ ಅಮಾವಾಸ್ಯೆ ನವರಾತ್ರಿ ಹಬ್ಬಕ್ಕಿಂತ ಹಿಂದಿನ ದಿನ ಶುರುವಾಗುತ್ತದೆ. ಮಹಾಲಯ ಅಮಾವಾಸ್ಯೆ ಮುಗಿದ ಕೂಡಲೇ ನವರಾತ್ರಿ ಶುರುವಾಗುತ್ತದೆ.
ಇನ್ನು ಈ ಬಾರಿ ಮಹಾಲಯ ಅಮಾವಾಸ್ಯೆ ಅಕ್ಟೋಬರ್ 14ನೇ ತಾರೀಕು ಶನಿವಾರದ ದಿನ ಬಂದಿದೆ. ಇನ್ನು ಮಹಾಲಯ ಅಮಾವಾಸ್ಯೆ ತಿಥಿ ಆರಂಭ ಆಗುವುದು ಅಕ್ಟೋಬರ್ 13ನೇ ತಾರೀಕು ರಾತ್ರಿ 9:50 ನಿಮಿಷಕ್ಕೆ ಮತ್ತು ಅಕ್ಟೋಬರ್ 14ನೇ ತಾರೀಕು ರಾತ್ರಿ 11:24 ನಿಮಿಷಕ್ಕೆ ಮುಗಿಯುತ್ತದೆ. ಪೂರ್ಣ ಪ್ರಮಾಣದ ಅಮಾವಾಸ್ಯೆ ತಿಥಿ ಅಕ್ಟೋಬರ್ 14ನೇ ತಾರೀಕು ಬರುವುದರಿಂದ ಮಹಾಲಯ ಅಮಾವಾಸ್ಯೆಯನ್ನು ಶನಿವಾರದ ದಿನ ಆಚರಣೆ ಮಾಡಬೇಕು.
ಇನ್ನು ಅಕ್ಟೋಬರ್ 14ನೇ ತಾರೀಕು ಸೂರ್ಯ ಗ್ರಹಣ ರಾತ್ರಿ 11:29 ನಿಮಿಷಕ್ಕೆ ಆರಂಭವಾಗಿ 11:37 ನಿಮಿಷಕ್ಕೆ ಅಂತ್ಯವಾಗುತ್ತದೆ. ಕೇವಲ 8 ನಿಮಿಷಗಳ ಕಾಲ ಈ ಸೂರ್ಯ ಗ್ರಹಣ ಆಗುತ್ತಿರುವುದು. ಇನ್ನು ಸೂರ್ಯ ಗ್ರಹಣ ಆಗುತ್ತಿರುವುದು ರಾತ್ರಿ ಸಮಯದಲ್ಲಿ ಸೂರ್ಯ ಗ್ರಹಣ ಆಗುವುದು ನಮ್ಮ ಭಾರತ ದೇಶದಲ್ಲಿ ಗೋಚರ ಆಗುವುದಿಲ್ಲ. ಹಾಗಾಗಿ ಈ ಸೂರ್ಯ ಗ್ರಹಣವನ್ನು ಆಚರಣೆ ಮಾಡುವ ಅಗತ್ಯವಿಲ್ಲ. ಹಾಗಾಗಿ ನೀವು ಮಹಾಲಯ ಅಮಾವಾಸ್ಯಯನ್ನು ಮಾಡಬಹುದು. ಇನ್ನು ಈ ಗ್ರಹಣ ಭಾರತದಲ್ಲಿ ಗೋಚರವಾಗದೆ ಇರುವ ಕಾರಣ ಗ್ರಹಣ ಸೂತಕವನ್ನು ಆಚರಣೆ ಮಾಡುವುದು ಬೇಡ.