ಮಾರ್ಗಶಿರ ಲಕ್ಷ್ಮಿ ಎಂದು ಪ್ರಾರಂಭ?ಈ ಬಾರಿ ಎಷ್ಟು ಗುರುವಾರಗಳು ಪೂಜೆ ಮಾಡಬೇಕು? ಕಾರ್ತಿಕ ಅಮಾವಾಸ್ಯೆ ಎಂದು

ಸಾಮಾನ್ಯವಾಗಿ ಈ ಬಾರಿ ಕಾರ್ತಿಕ ಅಮಾವಾಸ್ಯೆ 12ನೇ ತಾರೀಕು ಮಂಗಳವಾರ ಬೆಳಗಿನ ಜಾವ 6:25 ನಿಮಿಷಕ್ಕೆ ಪ್ರಾರಂಭವಾದರೆ 13ನೇ ತಾರೀಕು ಡಿಸೆಂಬರ್ ಬುಧವಾರ ಬೆಳಗಿನ ಜಾವ 5:02 ನಿಮಿಷಕ್ಕೆ ಮುಕ್ತಾಯವಾಗುತ್ತದೆ. ಈ ಕಾರ್ತಿಕ ಅಮಾವಾಸ್ಯೆ ಅನ್ನು ಆಚರಣೆಯನ್ನು 12ನೇ ತಾರೀಕು ಡಿಸೆಂಬರ್ ಮಂಗಳವಾರ ಈ ಕಾರ್ತಿಕ ಅಮಾವಾಸ್ಯೆ ಆಚರಣೆ ಮಾಡಬೇಕು. ನಂತರದಲ್ಲಿ ಮಾರ್ಗಶಿರ ಮಾಸ ಪ್ರಾರಂಭವಾಗುತ್ತದೆ ಹಾಗು ಗುರುವಾರ ಲಕ್ಷ್ಮಿ ಪೂಜೆ ಪ್ರಾರಂಭವಾಗುತ್ತದೆ.

ಮಾರ್ಗಶಿರ ಮಾಸದಲ್ಲಿ ವಿಶೇಷವಾಗಿ ನಾವು ಗುರುವಾರದ ದಿವಸದಲ್ಲಿ ಲಕ್ಷ್ಮಿ ಪೂಜೆಯನ್ನು ಮಾಡುತ್ತೇವೆ. ಅದರಲ್ಲೂ ಈ ಮಾಸದಲ್ಲಿ ಲಕ್ಷ್ಮಿ ಭೂಮಿಗೆ ಸ್ವತಃ ಭೂಮಿಗೆ ಬಂದು ನಮಗೆ ಆಶೀರ್ವಾದ ಮಾಡುತ್ತಾರೆ ಎನ್ನುವ ನಂಬಿಕೆ ಮೇಲೆ ಈ ಒಂದು ಮಾರ್ಗಶಿರ ಲಕ್ಷ್ಮಿ ಪೂಜೆ ಮಾಡುತ್ತಾರೆ. ಈ ಪೂಜೆಯನ್ನು ಸೂರ್ಯೋದಯಕ್ಕೂ ಮುಂಚೆನೇ ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ಮಾಡಬೇಕಾಗಿರೋದು ತುಂಬಾ ವಿಶೇಷವಾದದ್ದು. ಈ ಮಾರ್ಗಶಿರ ಮಾಸದ ಲಕ್ಷ್ಮಿ ಪೂಜೆ 13ನೇ ತಾರೀಕು ಡಿಸೆಂಬರ್ ಬುಧವಾರ ಮಾರ್ಗಶಿರ ಮಾಸ ಪ್ರಾರಂಭವಾಗುತ್ತದೆ. ಅದರೆ 1ನೇ ಗುರುವಾರ 14 ಡಿಸೆಂಬರ್ ಬರುತ್ತದೆ.

ಅಂದಿನಿಂದ ಪ್ರಾರಂಭ ಮಾಡಬೇಕು. 5 ಗುರುವಾರಗಳು ಈ ಪೂಜೆ ಮಾಡುತ್ತ ಸಿಗುತ್ತದೆ. ಒಂದು ವೇಳೆ ಪಿರೇಡ್ಸ್ ಇದ್ದರು ಅದು ಮುಗಿದಮೇಲೆ ಮಾಡಬಹುದು. 2ನೇ ಗುರುವಾರ 21ತಾರೀಕು ಡಿಸೆಂಬರ್ ಹಾಗು 3ನೇ ಗುರುವಾರ 28ನೇ ತಾರೀಕು,4ನೇ ಗುರುವಾರ 4ನೇ ತಾರೀಕು ಡಿಸೆಂಬರ್ ಹಾಗು 5ನೇ ಗುರುವಾರ 11ನೇ ತಾರೀಕು ಡಿಸೆಂಬರ್ ಬರುತ್ತದೆ. ಎಲ್ಲಾರು ಈ ಲಕ್ಷ್ಮಿ ಪೂಜೆ ಮಾಡಿ ನಿಮಗೆ ಆಶೀರ್ವಾದ ಲಕ್ಷ್ಮಿಯ ಆಶೀರ್ವಾದ ಸಿಗಲಿ ಎಂದು ಬೇಡಿಕೊಳ್ಳುತ್ತೇನೆ.

Related Post

Leave a Comment