ವೃಷಭ ರಾಶಿ 2024 ವರ್ಷ ಭವಿಷ್ಯ!

ದ್ವಾದಶಿ ರಾಶಿಗಳಲ್ಲಿ ಎರಡನೇ ರಾಶಿಯಾದ ವೃಷಭ ರಾಶಿಗೆ 2024 ಹೊಸ ವರ್ಷದಲ್ಲಿ ಆದಾಯ ವ್ಯಯ ಆರ್ಥಿಕ ಸ್ಥಿತಿ ಗತಿ ಅರೋಗ್ಯ ಹೇಗಿರುತ್ತದೆ ಎಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೇ.

ಆದಾಯ

ಈ ವರ್ಷ ವೃಷಭ ರಾಶಿಯವರಿಗೆ ಆದಾಯ 2 ಖರ್ಚು 8. ಆದಾಯಕ್ಕಿಂತ ಖರ್ಚು ಹೆಚ್ಚು ಗೋಚರಿಸುತ್ತಿರುವುದರಿಂದ ವೃಷಭ ರಾಶಿಯವರು ನೋಡಿಕೊಂಡು ಅನವಶ್ಯಕ ಖರ್ಚಿಗೆ ಬೀಗ ಹಾಕಿಕೊಳ್ಳುವುದು ತುಂಬಾ ಒಳ್ಳೆಯದು. ಆದಷ್ಟು ಅಗತ್ಯ ಇರುವಾಗ ದುಡ್ಡು ತೆಗೆಯುವುದು ತುಂಬಾ ಒಳ್ಳೆಯದು. ಈ ವರ್ಷ ನೀವು ಹೊಸ ಊಡಿಕೆಗಳನ್ನು ಮಾಡುತ್ತೀರಿ. ಇದರಲ್ಲಿ ನೀವು ಲಾಭವನ್ನು ಸಹ ನೀವು ಕಾಣುತ್ತಿರಿ. ಈ ವರ್ಷದಲ್ಲಿ ನೀವು ಹೆಚ್ಚಿನ ಗೌರವ ಕೂಡ ಸಮಾಜದಲ್ಲಿ ಸಿಗುತ್ತದೆ. ಈ ವರ್ಷ ನೀವು ಧರ್ಮ ಕಾರ್ಯಗಳನ್ನು ಮಾಡಲು ಮುಂದಾಗುತ್ತೀರಿ. ಅರೋಗ್ಯ ಈ ವರ್ಷ ತುಂಬಾನೇ ಚೆನ್ನಾಗಿ ಇರುತ್ತದೆ. ವಿದೇಶ ಹೋಗುವ ಅವಕಾಶ ನಿಮಗೆ ಉಡುಕಿಕೊಂಡು ಬರುತ್ತದೆ.

ವಿದ್ಯಾಭ್ಯಾಸ

ಈ ರಾಶಿಯ ವಿದ್ಯಾರ್ಥಿಗಳಿಗೆ ತುಂಬಾನೇ ಅನುಕೂಲವಾದ ಸಮಯ ಎಂದು ಹೇಳಬಹುದು. ಏಕಾಗ್ರತೆಯಿಂದ ಓದಿ ಒಳ್ಳೆಯ ಫಲಿತಾಂಶ ಸಹ ಬರುತ್ತದೆ.

ಉದ್ಯೋಗ

ಉದ್ಯೋಗದ ಬಗ್ಗೆ ಯೋಚನೆ ಮಾಡುವವರಿಗೆ ಪ್ರಮೋಷನ್ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಶನಿ ಪರಮಾತ್ಮನ ಅನುಗ್ರಹದಿಂದ ವೃತ್ತಿ ಜೀವನದಲ್ಲಿ ಒಳ್ಳೆಯ ಫಲಿತಾಂಶವನ್ನು ನೋಡುತ್ತೀರಿ. ಮೇಲಧಿಕಾರಿಗಳ ಬೆಂಬಲ ನಿಮಗೆ ಚೆನ್ನಾಗಿ ಸಿಗುತ್ತದೆ.ಜನವರಿ ತಿಂಗಳಿನಲ್ಲಿ ಗುರು ತನ್ನ ಪತವನ್ನು ಬದಲಾಯಿಸುತ್ತಾರೆ. ಇನ್ನು ನೀವು ಒಳ್ಳೆಯ ಫಲಿತಾಂಶವನ್ನು ಸಹ ಕಾಣುತ್ತಿರಿ. ಶನಿಯ ಹಿಂಮ್ಮುಖ ಚಲನೆಯಿಂದ ನೀವು ಒಳ್ಳೆಯ ಫಲಿತಾಂಶವನ್ನು ಸಹ ಕಾಣುತ್ತಿರಿ.

ವ್ಯಾಪಾರ

ಈ ರಾಶಿಯವರು ವ್ಯಾಪಾರ ಮಾಡುವವರು ಆಗಿದ್ದರೆ ಈ ವರ್ಷ ಒಳ್ಳೆಯ ಸಮಯ ಎಂದು ಹೇಳಬಹುದು. ನೀವು ನಿಮ್ಮ ವ್ಯಪಾರವನ್ನು ಅಭಿವೃದ್ಧಿ ಮಾಡುತ್ತೀರಿ. ಒಳ್ಳೆ ಒಳ್ಳೆಯ ಐಡಿಯಸ್ ನಿಮಗೆ ಬರುತ್ತದೆ. ಅದನ್ನು ನೀವು ಇಂಪ್ಲಿಮೆಂಟ್ ಮಾಡಿ ನೀವು ಲಾಭವನ್ನು ಕಾಣುತ್ತಿರಿ. ಇನ್ನು ಆಗಸ್ಟ್ ಇಂದ ನವೆಂಬರ್ ವರೆಗೂ ಹುಷಾರಾಗಿ ಇದ್ದರೆ ತುಂಬಾ ಒಳ್ಳೆಯದು. ವ್ಯಪಾರ ಮಾಡುವವರಿಗೆ ಜೂನ್ ಮತ್ತು ಜೂಲೈ ತಿಂಗಳು ತುಂಬಾ ಲಾಭವನ್ನು ತಂದುಕೊಡುತ್ತದೆ. ನಿಮ್ಮ ಆರ್ಥಿಕ ಪ್ರಯೋಜನಗಳನ್ನು ನೀವು ಗಳಿಸುತ್ತಿರಿ.

ಕುಟುಂಬ

ಈ ರಾಶಿಯವರ ಜೀವನದಲ್ಲಿ ಕುಟುಂಬದವರ ಜೊತೆ ಸಂತೋಷದ ಕಾಲವನ್ನು ಸಹ ಕಳೆಯುತ್ತಿರಿ. ವರ್ಷದ ಪ್ರಾರಂಭದಲ್ಲಿ ನಿಮ್ಮ ತಂದೆ ಕಡೆಯಿಂದ ನೀವು ಶುಭ ವಾರ್ತೆಯನ್ನು ನೀವು ಕೇಳುತ್ತೀರಿ. ಆಗಸ್ಟ್ ಹಾಗು ಅಕ್ಟೋಬರ್ ತಿಂಗಳಿನಲ್ಲಿ ಒಡ ಹುಟ್ಟಿದವರ ಮಧ್ಯೆ ಸ್ವಲ್ಪ ಬೇದಗಳು ಅಸ್ತಿ ವಿಚಾರದಲ್ಲಿ ಸಮಸ್ಸೆ ಬರುವ ಸಾಧ್ಯತೆ ಇದೆ. ಆದಷ್ಟು ಯೋಚನೆಯಿಂದ ಮಾತನಾಡಿ. ಏಪ್ರಿಕ್ ನವೆಂಬರ್ ಡಿಸೆಂಬರ್ ನಿಮಗೆ ಒಳ್ಳೆಯ ಸಮಯ ಮತ್ತು ಈ ಸಮಯದಲ್ಲಿ ನೀವು ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತದೆ. ಹೊಸ ಗೆಳೆತನವನ್ನು ಮಾಡುತ್ತಿರಿ ಮತ್ತು ಹೊಸ ಸಂಬಂಧಗಳು ಬೆಳೆಯುತ್ತೆ. ಗುರು ಮತ್ತು ಶನಿ ಆಶೀರ್ವಾದದಿಂದ ನಿಮಗೆ ಮೇಲಧಿಕಾರಿಗಳಿಂದ ಬೆಂಬಲ ಸಿಗುತ್ತದೆ.

ಪರಿಹಾರ

ಪ್ರತಿ ಸೋಮವಾರ ನೀವು ಶಿವಲಯಕ್ಕೆ ಭೇಟಿ ನೀಡಬೇಕು. ಅಲ್ಲಿ ಶಿವನಿಗೆ ಬಿಲ್ವವನ್ನು ಅರ್ಪಿಸಿ ಶಿವ ಸ್ಮರಣೆ ಮಾಡಿದರೆ ಎಲ್ಲಾ ಒಳ್ಳೆಯದೆ ಆಗುತ್ತದೆ

Related Post

Leave a Comment