ವರಮಹಾಲಕ್ಷ್ಮಿ ಹಬ್ಬ, ಗೌರಿ ಹಬ್ಬ, ಗಣೇಶ ಹಬ್ಬಕ್ಕೆ ವ್ರತದ ದಾರ ಹೇಗೆ ಮಾಡುವುದು ಎಂದು ತಿಳಿಸಿಕೊಡುತ್ತೇವೆ ಹಾಗು ವ್ರತದ ದಾರಕ್ಕೂ ಮತ್ತು ಕಂಕಣಕ್ಕೂ ಇರುವ ವ್ಯತ್ಯಾಸದ ಬಗ್ಗೆ ತಿಳಿಸಿಕೊಡುತ್ತೇನೆ.
- ವ್ರತದ ದಾರ ಮಾಡುವುದಕ್ಕೆ ಬೇಕಾಗುವ ಸಾಮಗ್ರಿ
- ಅಂಗನೂಲು
- ಶ್ರೀಗಂಧ
- ಹೂವು
- ಅರಿಶಿನ
- ಕುಂಕುಮ
- ವೀಳ್ಯದೆಲೆ
ಮೊದಲು ಶ್ರೀಗಂಧಕ್ಕೆ ನೀರು ಹಾಕಿ ಮಿಕ್ಸ್ ಮಾಡಬೇಕು. ಇನ್ನು 9 ಎಳೆ 9 ಸುತ್ತು ದಾರ ತೆಗೆದುಕೊಂಡು 9 ಗಂಟು ಹಾಕಬೇಕು. ನೀವೇ ಎಷ್ಟೇ ಉದ್ದ ತೆಗೆದುಕೊಂಡು 9 ಗಂಟು ಹಾಕಬೇಕು. ನೀವು ಹೂವು ಇಟ್ಟರೆ ಅದು ಕೂಡ ಸೇರುತ್ತದೆ. ನಂತರ ದಾರವನ್ನು ಶ್ರೀಗಂಧ ಒಳಗೆ ಹದ್ದಿ ಇಡಬೇಕು. ನಂತರ ಅರಿಶಿನ ಕುಂಕುಮ ಹಚ್ಚಬೇಕು. ಇನ್ನು ವ್ರತದ ದಾರವನ್ನು ಪ್ರತಿಯೊಬ್ಬರೂ ಕಟ್ಟಿಕೊಳ್ಳಬಹುದು. ಇನ್ನು ದಾರವನ್ನು ಮದುವೆ ಆಗಿರುವವರ ಹತ್ತಿರ ಕಟ್ಟಿಸಿಕೊಳ್ಳಬೇಕು.
ಇನ್ನು ದಾರ ತೆಗೆದುಕೊಂಡು ಮಧ್ಯದಲ್ಲಿ ಒಂದು ಸೇವಂತಿಗೆ ಹೂವು ಇಟ್ಟು ಗಂಟು ಹಾಕಬೇಕು. ಇದು ಗಂಟು ಕೂಡ 9 ಗಂಟಿನಲ್ಲಿ ಸೇರುತ್ತದೆ. ನಂತರ 8 ಗಂಟನ್ನು ಹಾಕಬೇಕು. ಇದನ್ನು ದೇವರ ಮುಂದೆ ಇಟ್ಟು ನಂತರ ಕಟ್ಟಿಕೊಂಡು ಮೊದಲು ಗಣೇಶ ಪೂಜೆ ಮಾಡಿದ ಮೇಲೆ ಕಳಸವನ್ನು ಪ್ರತಿಷ್ಟಪಾನೇ ಮಾಡಬೇಕು.
ಕಂಕಣ ತಯಾರು ಮಾಡುವ ವಿಧಾನ:-ಕಂಕಣ ಮಾಡುವುದಕ್ಕೆ 5 ಎಳೆ ತೆಗೆದುಕೊಕೊಂಡು ಶ್ರೀಗಂಧ ಒಳಗೆ ಹಾಕಬೇಕು. ಇದಕ್ಕೆ ಅರಿಶಿನ ಕುಂಕುಮ ಹಚ್ಚಬೇಕು. ನಂತರ ಒಂದು ವೀಳ್ಯದೆಲೆ ಮತ್ತು ಒಂದು ಸೇವಂತಿಗೆ ಇಟ್ಟು ಗಂಟು ಹಾಕಬೇಕು.ಈ ಕಂಕಣವನ್ನು ಮದುವೆ ಮನೆ ಗೃಹ ಪ್ರವೇಶದ ಸಮಯದಲ್ಲಿ ಕಟ್ಟಿಕೊಳ್ಳುತ್ತಾರೆ. ಇನ್ನು ಗೌರಿ ಹಬ್ಬ ಲಕ್ಷ್ಮಿ ಹಬ್ಬ ಕಳಸಕ್ಕೆ ಕಟ್ಟುತ್ತಾರೆ. ಮನಸ್ಸಿನಲ್ಲಿ ಅಂದುಕೊಂಡಿದ್ದು ಆಗಲಿ ಎಂದು ಈ ರೀತಿ ಕಂಕಣವನ್ನು ಕಟ್ಟಿಕೊಳ್ಳಬೇಕು. ಇದೆ ವ್ರತದ ದಾರಕ್ಕೂ ಮತ್ತು ಕಂಕಣಕ್ಕೂ ಇರುವ ವ್ಯತ್ಯಾಸ.