ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ, ಕೆಲಸಕ್ಕಾಗಿ ವಿದೇಶಕ್ಕೆ ವಲಸೆ ಹೋಗುವ ಕಲ್ಪನೆಯು ರೋಮಾಂಚನಕಾರಿ ಮತ್ತು ಭಯಾನಕವಾಗಿದೆ. ವೃತ್ತಿಜೀವನದ ಆಕಾಂಕ್ಷೆ, ವೈಯಕ್ತಿಕ ಸಂದರ್ಭ ಮತ್ತು ಕೆಲವರಿಗೆ ಅನ್ವೇಷಿಸುವ ಉತ್ಸಾಹ ಸೇರಿದಂತೆ ಜೀವನವನ್ನು ಬದಲಾಯಿಸುವ ಈ ನಿರ್ಧಾರದ ಮೇಲೆ ಅನೇಕ ಅಂಶಗಳು ಪ್ರಭಾವ ಬೀರುತ್ತವೆ. ಆದರೆ ಈ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ನಿಮ್ಮ ರಾಶಿಯ ಪಾತ್ರವಿದೆ ಎಂದರೆ ಆಶ್ಚರ್ಯವಾಗಬಹುದು. ಕೆಲವು ಜ್ಯೋತಿಷ್ಯ ಗುಣಲಕ್ಷಣಗಳು ನೀವು ಅಂತರರಾಷ್ಟ್ರೀಯ ಪ್ರಯಾಣಗಳಿಗೆ ಹೋಗುವ ಸಾಧ್ಯತೆಯಿದೆಯಾ ಎಂದು ಹೇಳುತ್ತವೆ. ನಿಮ್ಮ ರಾಶಿಯು ವಿದೇಶಕ್ಕೆ ಪ್ರಯಾಣಿಸಬಹುದಾದ ಏಳು ರಾಶಿಗಳಲ್ಲಿ ಒಂದಾಗಿದೆಯಾ ಎಂದು ತಿಳಿಯಲು ಮುಂದೆ ಓದಿ
ಮೇಷ ರಾಶಿ–ನೀವು ಮೇಷ ರಾಶಿಯವರಾಗಿದ್ದರೆ, ವಿದೇಶದಲ್ಲಿ ಕೋರ್ಸ್ ಅಥವಾ ಉದ್ಯೋಗಕ್ಕಾಗಿ ನಿಮ್ಮ ಸಿದ್ಧತೆಗಳನ್ನು ಪ್ರಾರಂಭಿಸಬಹುದು. ಏಕೆಂದರೆ ಮೇಷ ರಾಶಿಯವರು ಹೊಸ ಸ್ಥಳ ಮತ್ತು ಸಂಸ್ಕೃತಿಗಳನ್ನು ಅನ್ವೇಷಿಸಲು ಇಷ್ಟಪಡುವ ಅತ್ಯಂತ ಸಾಹಸಮಯ ವ್ಯಕ್ತಿಗಳು. ಆದ್ದರಿಂದ, ಇವರು ಮತ್ತೊಂದು ದೇಶಕ್ಕೆ ಹೋಗಲು ಮತ್ತು ಅದರಿಂದ ಹೆಚ್ಚಿನಲಾಭ ಪಡೆಯಲು ಅರ್ಹರು. ಮೇಷ ರಾಶಿಯವರು ಸ್ಪರ್ಧಾತ್ಮಕವಾಗಿರುತ್ತಾರೆ, ಮತ್ತು ಇವರು ಸವಾಲುಗಳನ್ನು ನಿಭಾಯಿಸುವಲ್ಲಿ ಉತ್ತಮರು. ಆದ್ದರಿಂದ, ಇವರು ವಿದೇಶಕ್ಕೆ ಹೋಗಲು ಯಾವುದೇ ಪರೀಕ್ಷೆಗಳನ್ನು ಬರೆದು ಉತ್ತಮ ಅಂಕಗಳೊಂದಿಗೆ ಅದನ್ನು ಸುಲಭವಾಗಿ ಉತ್ತೀರ್ಣರಾಗಬಹುದು. ಮೇಷ ರಾಶಿಯವರ ಸ್ಪರ್ಧಾತ್ಮಕ ಸ್ವಭಾವವು ಅವರನ್ನು ವೀಸಾಗಳಿಗೆ ಉತ್ತಮ ಅಭ್ಯರ್ಥಿಗಳನ್ನಾಗಿ ಮಾಡುತ್ತದೆ. ಇವರ ಮುಕ್ತ ಮತ್ತು ಸಾಹಸಮಯ ವ್ಯಕ್ತಿತ್ವ ವಿದೇಶದಲ್ಲಿ ಕೆಲಸ ಸಿಗುವ ಸಾಧ್ಯತೆ ಇರುವ ರಾಶಿಗಳ ಪಟ್ಟಿಯಲ್ಲಿ ಇವರನ್ನು ಮೊದಲ ಸ್ಥಾನದಲ್ಲಿರಿಸುತ್ತದೆ.
ಮಿಥುನ ರಾಶಿ–ಮಿಥುನ ರಾಶಿಯವರು ಜ್ಞಾನ ಮತ್ತು ಸ್ವಾತಂತ್ರ್ಯದ ಅನ್ವೇಷಣೆಗೆ ಹೆಸರುವಾಸಿಯಾಗಿದ್ದಾರೆ. ಇವರು ಜೀವನವನ್ನು ಪೂರ್ಣವಾಗಿ ಬದುಕುವುದನ್ನು ನಂಬುತ್ತಾರೆ. ಆದ್ದರಿಂದ, ನೀವು ಮಿಥುನ ರಾಶಿಯವರಾಗಿದ್ದರೆ, ನೀವು ನಿಮ್ಮ ಆಯ್ಕೆಯ ದೇಶದಲ್ಲಿ ನೆಲೆಸುವ ಸಾಧ್ಯತೆಯಿದೆ. ಇವರ ಸ್ನೇಹಮಯ ಮತ್ತು ಸಾಮಾಜಿಕ ಸ್ವಭಾವವು ಯಾವುದೇ ದೇಶ ಅಥವಾ ಸಂಸ್ಕೃತಿಯ ಜನರೊಂದಿಗೆ ಸಂಪೂರ್ಣವಾಗಿ ಬೆರೆಯಲು ಸಹಾಯ ಮಾಡುತ್ತದೆ. ಮಿಥುನ ರಾಶಿಯ ಕುತೂಹಲಕಾರಿ ಸ್ವಭಾವವು ಪ್ರಪಂಚದಾದ್ಯಂತದ ಮಾಹಿತಿಯನ್ನು ಪಡೆಯುವಂತೆ ಮಾಡುತ್ತದೆ. ಆದ್ದರಿಂದ, ವೈವಿಧ್ಯತೆಯ ಪರಿಸರವನ್ನು ಇವರು ಇಷ್ಟ ಪಡುತ್ತಾರೆ. ವಿದೇಶದಲ್ಲಿ ಅಧ್ಯಯನ ಮಾಡುವುದು ಅಥವಾ ಕೆಲಸ ಮಾಡುವುದು ಈ ರಾಶಿಯವರ ವ್ಯಕ್ತಿತ್ವಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ. ಆದ್ದರಿಂದ, ಮಿಥುನ ರಾಶಿಯವರ ಸಾಮಾಜಿಕವಾಗಿ ಬೆರೆಯುವ ಸಾಮರ್ಥ್ಯದಿಂದಾಗಿ ವಿದೇಶಿ ವಾತಾವರಣಕ್ಕೆ ಹೊಂದಿಕೊಳ್ಳಲು ಇವರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.
ಸಿಂಹ ರಾಶಿ-ಸಿಂಹದ ಸಂಕೇತದಂತೆ, ಸಿಂಹ ರಾಶಿಯವರು ಎಲ್ಲಿಗೆ ಹೋದರೂ ತಮ್ಮ ಛಾಪು ಮೂಡಿಸುತ್ತಾರೆ. ಅದು ಇವರ ಸ್ವಂತ ದೇಶವಾಗಿರಲಿ ಅಥವಾ ವಿದೇಶಿ ನೆಲವಾಗಿರಲಿ, ಸಿಂಹ ರಾಶಿಯವರು ಜನಸಮೂಹದಿಂದ ಪ್ರತ್ಯೇಕವಾಗಿ ನಿಲ್ಲುವಲ್ಲಿ ಯಶಸ್ವಿಯಾಗುತ್ತಾರೆ. ಇವರು ತಮ್ಮ ಬಗ್ಗೆ ಹೆಚ್ಚು ಗಮನ ಹರಿಸಲು ಇಷ್ಟಪಡುತ್ತಾರೆ. ಆದ್ದರಿಂದ, ಇವರು ತಮ್ಮ ಕೆಲಸದಲ್ಲಿ ಅತ್ಯುತ್ತಮರಾಗಿರುತ್ತಾರೆ ಮತ್ತು ವಿದೇಶಗಳಲ್ಲಿಯೂ ಸಹ ತಮ್ಮ ಕ್ಷೇತ್ರದಲ್ಲಿ ವಿಶೇಷ ಮನ್ನಣೆಯನ್ನು ಪಡೆಯುತ್ತಾರೆ. ಇವರು ಉತ್ತಮ ನಾಯಕರು ಕೂಡ ಹೌದು. ಆದ್ದರಿಂದ ಇವರು ತಮ್ಮ ಕಂಪನಿಯನ್ನು ಅಂತರರಾಷ್ಟ್ರೀಯ ಯಶಸ್ಸಿಗೆ ಕರೆದೊಯ್ಯಬಹುದು ಮತ್ತು ಜಾಗತಿಕವಾಗಿ ತಮ್ಮ ವ್ಯವಹಾರವನ್ನು ವಿಸ್ತರಿಸಲು ಯೋಜಿಸಬಹುದು! ಇವರ ಆಕರ್ಷಕ ವ್ಯಕ್ತಿತ್ವ ಇವರನ್ನು ಮೌಲ್ಯಯುತ ಉದ್ಯೋಗಿಗಳನ್ನಾಗಿ ಮಾಡುತ್ತವೆ. ಹಾಗೆ ಇವರ ವಿಶಿಷ್ಟ ವ್ಯಕ್ತಿತ್ವ ಇವರಿಗೆ ವಿದೇಶಕ್ಕೆ ಹೋಗುವ ಅವಕಾಶವನ್ನು ಕಲ್ಪಿಸುತ್ತದೆ.
ವೃಶ್ಚಿಕ ರಾಶಿ–ಮಂಗಳನು ವೃಶ್ಚಿಕ ರಾಶಿಯನ್ನು ಆಳುತ್ತಾನೆ, ಇದು ಅವರನ್ನು ಅತ್ಯಂತ ಭಾವೋದ್ರಿಕ್ತ ಮತ್ತು ಕಠಿಣ ಪರಿಶ್ರಮಿಗಳನ್ನಾಗಿ ಮಾಡುತ್ತದೆ. ಆದ್ದರಿಂದ, ಇವರು ಹೊಸ ವಿಷಯಗಳನ್ನು ಕಲಿಯಲು ವಿದೇಶಗಳಿಗೆ ಹೋಗುವ ಅವಕಾಶಗಳನ್ನು ಕಳೆದುಕೊಳ್ಳುವುದಿಲ್ಲ. ತಮ್ಮ ಸಮರ್ಪಣೆ ಮತ್ತು ಕಠಿಣ ಪರಿಶ್ರಮದಿಂದ, ವೃಶ್ಚಿಕ ರಾಶಿಯವರು ಕೆಲಸ ಮತ್ತು ಶಿಕ್ಷಣಕ್ಕಾಗಿ ಸುಲಭವಾಗಿ ವಿದೇಶಗಳಿಗೆ ಹೋಗಬಹುದು. ಇವರು ಕೆಲಸ ಶುರು ಮಾಡುದು ಕಷ್ಟ. ಆದರೆ ಏನನ್ನಾದರೂ ನಿರ್ಧರಿಸಿದರೆ, ಇವರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ ಮತ್ತು ಅದನ್ನು ಸಾಧಿಸಲು ತಮ್ಮ ಶಕ್ತಿಯಿಂದ ಎಲ್ಲವನ್ನೂ ಮಾಡುತ್ತಾರೆ. ಆದ್ದರಿಂದ, ವೃಶ್ಚಿಕ ರಾಶಿಯವರು ನಿಜವಾಗಿಯೂ ವೃತ್ತಿಪರ ಮಾಸ್ಟರ್ ಗಳು. ಹಾಗಾಗಿ, ವೃತ್ತಿಪರ ಜೀವನದ ಬಗ್ಗೆ ಇವರ ದೃಢನಿಶ್ಚಯವು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ರೆಕ್ಕೆಗಳನ್ನು ಹರಡಲು ಸಹಾಯ ಮಾಡುತ್ತದೆ.
ಧನು ರಾಶಿ–ನೀವು ಧನು ರಾಶಿಯವರಾಗಿದ್ದು, ಕೆಲಸಕ್ಕಾಗಿ ವಿದೇಶಕ್ಕೆ ಹೋಗಬಹುದೇ ಎಂದು ಯೋಚಿಸುತ್ತಿದ್ದೀರಾ? ಉತ್ತರ ನೀವು ಖಂಡಿತವಾಗಿಯೂ ಹೋಗಬಹುದು! ಧನು ರಾಶಿಯವರು ತಮ್ಮ ವೃತ್ತಿಪರ ಜೀವನವನ್ನು ವಿಸ್ತರಿಸಲು ವಿದೇಶಕ್ಕೆ ಹೋಗುವಲ್ಲಿ ಹೆಚ್ಚಿನ ಅದೃಷ್ಟವನ್ನು ಹೊಂದಿದ್ದಾರೆ. ಹೊಸ ವಿಷಯ ಮತ್ತು ಸಂಸ್ಕೃತಿಗಳನ್ನು ಅನುಸರಿಸಲು ಇವರು ಸಿದ್ಧರಿರುತ್ತಾರೆ. ಧನು ರಾಶಿಯ ಮುಕ್ತ ಮನಸ್ಸಿನ ಸ್ವಭಾವವು ಇವರನ್ನು ವಿದೇಶಕ್ಕೆ ಹೋಗಲು ಪರಿಪೂರ್ಣ ಅಭ್ಯರ್ಥಿಗಳನ್ನಾಗಿ ಮಾಡುತ್ತದೆ. ಇವರು ಸ್ವತಂತ್ರ ಮತ್ತು ಸ್ವಾವಲಂಬಿಗಳಾಗಿ ಬದುಕಲು ಇಷ್ಟ ಪಡುತ್ತಾರೆ. ಇವರು ತಮ್ಮ ವೃತ್ತಿ ಜೀವನವನ್ನು ತಾವೇ ನಿರ್ಮಿಸಲು ಬಯಸುತ್ತಾರೆ. ಆದ್ದರಿಂದ, ವಿದೇಶಕ್ಕೆ ಹೋಗುವುದು ಇವರ ಸ್ವಾತಂತ್ರ್ಯದ ಬಯಕೆಯನ್ನು ಈಡೇರಿಸುತ್ತದೆ. ಇದು ಧನು ರಾಶಿಯವರ ವಿದೇಶದಲ್ಲಿ ಕೆಲಸ ಮಾಡುವ ಸಾಧ್ಯತೆಯಿರುವ ರಾಶಿಯವರ ಪಟ್ಟಿಯಲ್ಲಿ ಸೇರಿಸುತ್ತದೆ.
ಕುಂಭ ರಾಶಿ–ಕುಂಭ ರಾಶಿಯವರು ಜ್ಯೋತಿಷ್ಯ ಶಾಸ್ತ್ರದ ಹನ್ನೊಂದನೇ ಮನೆಯಲ್ಲಿ ವಾಸಿಸುತ್ತಾರೆ. ಹನ್ನೊಂದನೇ ಮನೆ ಸಂವಹನದ ಮನೆಯಾಗಿದೆ. ವೈವಿಧ್ಯಮಯ ಜನರೊಂದಿಗೆ ಸಂವಹನ ನಡೆಸುವುದಕ್ಕಿಂತ ಸಂವಹನವನ್ನು ಹೆಚ್ಚಿಸಲು ಉತ್ತಮ ಮಾರ್ಗ ಬೇರೆಯಿಲ್ಲ. ಆದ್ದರಿಂದ, ಕುಂಭ ರಾಶಿಯವರು ವಿದೇಶಕ್ಕೆ ತೆರಳುವ ಮೂಲಕ ದೊಡ್ಡ ಕೆಲಸ ಮಾಡಬಹುದು. ವಿವಿಧ ಸಂಸ್ಕೃತಿಗಳ ಬಗ್ಗೆ ಕಲಿಯುವ ಉತ್ಸಾಹದಿಂದಾಗಿ ಇವರು ವಿದೇಶಕ್ಕೆ ಹೋಗುವ ಹೆಚ್ಚಿನ ಅವಕಾಶವನ್ನು ಹೊಂದಿದ್ದಾರೆ. ಕುಂಭ ರಾಶಿಯವರು ಅತ್ಯಂತ ದಯಾಪರರು. ಈ ಕಾರಣದಿಂದಾಗಿ, ಇವರು ದಾನ- ಧರ್ಮ ಮಾಡಲು ಇಷ್ಟಪಡುತ್ತಾರೆ. ಇವರ ಮಾನವೀಯತೆ ಮತ್ತು ಜನರ ಬಗ್ಗೆ ಆಳವಾದ ಕಾಳಜಿಯು ಇವರಿಗೆ ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡಲು ಬಯಸುವಂತೆ ಮಾಡುತ್ತದೆ. ಆದ್ದರಿಂದ, ಇವರು ಇತರರಿಗೆ ಸಹಾಯ ಮಾಡಲು ಕೊಡುಗೆ ನೀಡಲು ಜಾಗತಿಕ ಮಾನವೀಯ ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸಬಹುದು.
ಮೀನ ರಾಶಿ–ಮೀನ ರಾಶಿಯವರು ಅತ್ಯಂತ ಸೃಜನಶೀಲ ವ್ಯಕ್ತಿಗಳಾಗಿರುತ್ತಾರೆ. ಇವರು ವಿಶ್ವದ ಮತ್ತೊಂದು ಮೂಲೆಗೆ ಹೋಗಲು ಉತ್ತಮ ಅವಕಾಶಗಳನ್ನು ಹೊಂದಿದ್ದಾರೆ. ಏಕೆಂದರೆ ಇವರು ಕಲೆ ಮತ್ತು ಸಂಸ್ಕೃತಿಗೆ ಆಕರ್ಷಿತರಾಗುತ್ತಾರೆ. ಆದ್ದರಿಂದ ಮೀನ ರಾಶಿಯವರು ಫ್ರಾನ್ಸ್ ನ ಆರ್ಟ್ ಗ್ಯಾಲರಿಯಲ್ಲಿ ಕೆಲಸ ಮಾಡಲು ಹೋಗಬಹುದು ಅಥವಾ ಪಿರಮಿಡ್ ಗಳ ವಾಸ್ತುಶಿಲ್ಪವನ್ನು ಅಧ್ಯಯನ ಮಾಡಲು ಹೋಗಬಹುದು! ಮೀನ ರಾಶಿಯವರು ಹೆಚ್ಚು ಕಲ್ಪನೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಆದ್ದರಿಂದ, ವಿದೇಶಕ್ಕೆ ಹೋಗುವುದು ಅವರ ಕಲ್ಪನೆಗೆ ಒಂದು ಉತ್ತಮ ಮಾಧ್ಯಮವನ್ನು ನೀಡುತ್ತದೆ. ಹೆಚ್ಚು ಸೃಜನಶೀಲ ಅವಕಾಶ ಮತ್ತು ಉದ್ಯೋಗಗಳಿಂದಾಗಿ ಮೀನ ರಾಶಿಯವರು ಕೆಲಸಕ್ಕಾಗಿ ವಿದೇಶಕ್ಕೆ ಹೋಗಲು ಸೂಕ್ತ ಅಭ್ಯರ್ಥಿಗಳು. ಆದ್ದರಿಂದ ನೀವು ಮೀನ ರಾಶಿಯವರಾಗಿದ್ದರೆ, ನಿಮ್ಮ ಆಯ್ಕೆಯ ದೇಶಕ್ಕೆ ಈಗಲೇ ವೀಸಾಗೆ ಅರ್ಜಿ ಸಲ್ಲಿಸಿ!