ಒಳ್ಳೆಯ ಸಮಯ ಆರಂಭ ಆಗುವ ಮುನ್ನ ತುಳಸಿಗಿಡ ಈ 5 ಸೂಚನೆ ಕೊಡುತ್ತೆ!

ದಿನನಿತ್ಯ ತುಳಸಿ ಸಸ್ಯವನ್ನು ಪೂಜೆ ಮಾಡುತ್ತಾರೋ ಆ ವ್ಯಕ್ತಿಗಳಿಗೆ ಸುಖ ಸಮೃದ್ಧಿಯು ಸಿಗುತ್ತದೆ. ಭಗವಂತನಾದ ಶ್ರೀ ಕೃಷ್ಣನಿಗೆ ತುಳಸಿ ಸಸ್ಯವು ತುಂಬಾನೇ ಪ್ರಿಯವಾಗಿದೆ. ಒಂದು ವೇಳೆ ತುಳಸಿ ದಳ ಇಲ್ಲಾ ಎಂದರೆ ಭಗವಂತನು ಯಾವುದೇ ಪ್ರಕಾರದ ಭೋಗ ಪ್ರಸಾದಗಳನ್ನು ಸ್ವೀಕಾರ ಮಾಡುವುದಿಲ್ಲ.ಇಲ್ಲಿ ಭಗವಂತನಾದ ಶ್ರೀ ಕೃಷ್ಣರು ಹೇಳುವ ಪ್ರಕಾರ ತುಳಸಿ ಗಿಡಕ್ಕೆ ದಿನನಿತ್ಯ ನಮಸ್ಕಾರ ಮಾಡುತ್ತಾರೋ ಅವರ ಮೇಲೆ ಯಾವತ್ತಿಗೂ ಯಾವುದೇ ರೀತಿಯ ಸಂಕಟಗಳು ಕಷ್ಟಗಳು ಬರುವುದಿಲ್ಲ.ಯಾರು ದಿನನಿತ್ಯ ತುಳಸಿ ದಳಗಳನ್ನು ಸೇವನೆ ಮಾಡುತ್ತಾರೋ ಅವರು ಎಲ್ಲಾ ಪ್ರಕಾರದ ರೋಗಗಳಿಂದ ಮುಕ್ತಿ ಹೊಂದುತ್ತಾರೆ. ತುಳಸಿ ಸಸ್ಯದಲ್ಲಿ ಎಲ್ಲ ರೀತಿಯ ರೋಗಗಳನ್ನು ಗುಣ ಮಾಡುವ ಶಕ್ತಿಯಿದೆ.

ಈ ಸಸ್ಯವನ್ನು ನಿಮ್ಮ ಮನೆಯ ಮುಂದೆ ಇಟ್ಟರೆ ನಿಮ್ಮ ಮನೆಗೆ ಬರುವ ಎಲ್ಲಾ ರೀತಿಯ ಕೆಟ್ಟ ದೃಷ್ಟಿ ಸಂಕಟಗಳನ್ನು ತೊಂದರೆಗಳನ್ನು ಇದು ತಡೆಯುತ್ತದೆ.ಮನೆಯ ಒಳಗಡೆ ಸಕಾರಾತ್ಮಕ ಶಕ್ತಿಗಳು ನೆಲೆಸುವಂತೆ ಮಾಡುತ್ತದೆ.ಒಂದು ವೇಳೆ ನಿಮ್ಮ ಮನೆಗೆ ತಾಯಿ ಲಕ್ಷ್ಮಿ ದೇವಿ ಪ್ರವೇಶ ಮಾಡುವುದಾದರೆ ತುಳಸಿ ಸಸ್ಯದ ಮೂಲಕ ಸೂಚನೆಗಳು ಸಿಗುತ್ತದೆ.ಹಾಗಾಗಿ ತುಳಸಿ ಸಸ್ಯಕ್ಕೆ ಜಲವನ್ನು ಅರ್ಪಿಸುವಾಗ ಈ ಸಂಕೇತಗಳ ಬಗ್ಗೆ ಮೊದಲು ತಿಳಿದುಕೊಳ್ಳಬೇಕು.

1, ಕೆಲವು ಸರಿ ತುಳಸಿ ಸಸ್ಯ ಒಣಗಳು ಶುರು ಮಾಡುತ್ತದೆ.ಇದರ ಪ್ರಕಾರ ಮನೆಗೆ ಯಾವುದೊ ಸಂಕಟ ಸಮಸ್ಸೆ ಬರುತ್ತದೆ ಎನ್ನುವುದನ್ನು ಸೂಚನೆಗಳನ್ನು ನೀಡುತ್ತದೆ.ಹಣವು ವ್ಯರ್ಥವಾಗಿ ಖರ್ಚು ಆಗಲಿದೆ ಎಂದು ಕೂಡ ತುಳಸಿ ಸಸ್ಯ ಸೂಚನೆ ಕೊಡುತ್ತದೆ.

2, ಒಂದು ವೇಳೆ ತುಳಸಿ ಸಸ್ಯದ ಎಲೆಗಳು ಬೀಳಲು ಶುರು ಮಾಡಿದರೆ ಮತ್ತು ಹಳದಿ ಬಣ್ಣಕ್ಕೆ ತಿರುಗಿದರೆ ಇವು ಗಾಳಿಯ ಸಹಾಯದಿಂದ ಕೆಳಗಡೆ ಬಿದ್ದಿರುತ್ತದೆ.ಇದರಿಂದ ಭಯ ಪಡುವ ಅವಶ್ಯಕತೆ ಇರುವುದಿಲ್ಲ.ಸಂಜೆ ಸಮಯದಲ್ಲಿ ತುಳಸಿ ಗಿಡದ ಮುಂದೆ ತುಪ್ಪದ ದೀಪವನ್ನು ಉರಿಸಿರಿ. ಇದರಿಂದ ಮನೆಯಲ್ಲಿ ಜಗಳ ವಾದ ವಿವಾದಗಳು ನಡೆಯುವುದಿಲ್ಲ.

3, ತುಳಸಿ ಗಿಡದ ಅಕ್ಕಪಕ್ಕದಲ್ಲಿ ಬೇರೆ ಗಿಡಗಳು ಹುಟ್ಟಲು ಶುರು ಮಾಡಿದರೆ ಇದು ಹಳೆಯ ಸಂಕೇತ ಆಗಿದೆ.ಇಲ್ಲಿ ಹೆಚ್ಚಿನ ಸುಖ ಸಮೃದ್ಧಿ ಸಂತೋಷ ನಿಮ್ಮ ಮನೆಯ ಒಳಗಡೆ ಪ್ರವೇಶ ಮಾಡಲಿವೆ ಅನ್ನೋದನ್ನ ತುಳಸಿ ಗಿಡ ಸೂಚನೆ ನೀಡುತ್ತದೆ.ನಿಮ್ಮ ವ್ಯಾಪಾರ ಬಿಸಿನೆಸ್ ನಲ್ಲಿ ವೃದ್ಧಿಯನ್ನು ಕಾಣುವಿರಿ.ತುಳಸಿ ಸಸ್ಯ ಮುಂದೆ ಬರುವ ಒಳ್ಳೆಯ ಮತ್ತು ಕೆಟ್ಟ ಸೂಚನೆಗಳ ಬಗ್ಗೆ ಮೊದಲೇ ಸೂಚನೆಗಳನ್ನು ತಿಳಿಸುತ್ತದೆ.

4, ತುಳಸಿ ಗಿಡ ಹತ್ತಿರ ಸ್ವಚ್ಛವಾಗಿ ಇದ್ದರು ಜೇಡರ ಹುಳು ಇರುವೆ ಗುಂಪಾಗಿ ಮನೆ ಮಾಡಿಕೊಂಡು ಸಸ್ಯವನ್ನು ಹಾಳು ಮಾಡುತ್ತವೆ.ಇದರ ಅರ್ಥ ಆಚೆ ಇರುವ ಯಾರೋ ಒಬ್ಬ ವ್ಯಕ್ತಿಗಳು ನಿಮ್ಮ ಮನೆಯ ಮೇಲೆ ಸಂಕಟ ತೊಂದರೆಗಳನ್ನು ತರಲಿದ್ದಾರೆ ಎಂದು ಅರ್ಥ.

5, ತುಳಸಿ ಸಸ್ಯದ ಮೇಲೆ ಸುಂದರವಾದ ಪಕ್ಷಿ ಅಥವಾ ಚಿಟ್ಟೆಗಳು ಕುಳಿತಿದ್ದಾರೆ.ಇಂತಹ ಸಮಯದಲ್ಲಿ ಸಸ್ಯ ನಿಮಗೆ ತುಂಬಾ ಚೆನ್ನಾಗಿ ಕಂಡುಬಂದರೆ ಬೇಗನೆ ಧನ ಲಾಭ ನಿಮಗೆ ಆಗಲಿದೆ ಎಂದು ಅರ್ಥ ಅಥವಾ ನಿಮ್ಮ ಮನಸ್ಸಿನ ಇಚ್ಛೆ ಈಡೇರಲಿದೆ ಎಂದು ಅರ್ಥ ಮಾಡಿಕೊಳ್ಳಿ.

Related Post

Leave a Comment