ಹಿಂದೂ ಧರ್ಮದಲ್ಲಿ ಹಲ್ಲಿಯ ಬಗ್ಗೆ ಹಲವಾರು ಮೂಢನಂಬಿಕೆಗಳಿವೆ. ಸರೀಸೃಪವಾದ ಹಲ್ಲಿ ಮನೆಯಲ್ಲಿ ವಾಸಿಸುವುದು ಸಾಮಾನ್ಯ. ಹಿಂದಿನ ಕಾಲದಿಂದಲೂ ಪಾಲಿಸಿಕೊಂಡು ಬಂದ ಕೆಲ ಆಚಾರಗಳ ಪ್ರಕಾರ ಹಲ್ಲಿಯನ್ನು ಕೆಲವೊಮ್ಮೆ ಶುಭ ಸೂಚಕವಾಗಿ ಪರಿಗಣಿಸಿದರೂ ಕೆಲವೊಮ್ಮೆ ಅಶುಭದ ಸಂಕೇತವಾಗಿ ಸೂಚಿಸಲಾಗುತ್ತದೆ. ಹಲ್ಲಿ ತಲೆಯ ಮೇಲೆ ಬಿದ್ದರೆ ಅಪಶಕುನ, ಹಲ್ಲಿ ಅಕಸ್ಮಾತ್ ದೇಹದ ಭಾಗದ ಮೇಲೆ ಬಿದ್ದರೆ ಒಮ್ಮೆ ಸ್ನಾನ ಮಾಡಿದ್ದರೂ ಮತ್ತೆ ಸ್ನಾನ ಮಾಡಿ ದೇವರಿಗೆ ನಮಸ್ಕಾರ ಮಾಡುವಂತೆ ಹಿರಿಯರು ಗದರುತ್ತಾರೆ. ಹೀಗೆ ಹಲ್ಲಿ ತಲೆ ಮೇಲೆ ಬಿದ್ದರೆ ಅಪಶಕುನವೆನ್ನುವವರು ಅದೇ ಹಲ್ಲಿ ಮುಖದ ಮೇಲೆ ಬಿದ್ದರೆ ಯಾರೋ ಅತಿಥಿಗಳು ಮನೆಗೆ ಬರುವವರಿದ್ದಾರೆ ಎಂದು ನಂಬುತ್ತಾರೆ.
ಹಲ್ಲಿ ದೇಹದ ಭಾಗಕ್ಕೆ ಬಿದ್ದರೆ ಯಾವೆಲ್ಲಾ ನಂಬಿಕೆಗಳಿವೆಯೋ ಹಾಗೆಯೇ ಹಲ್ಲಿ ಲೊಚಗುಟ್ಟುವುದರ ಬಗ್ಗೆಯೂ ಹಲವಾರು ನಂಬಿಕೆಗಳಿವೆ.ಹಲ್ಲಿಯು ಎಷ್ಟು ಬಾರಿ ಲೊಚಗುಟ್ಟಿದರೆ ಏನಾಗುತ್ತದೆ ಎಂದು ತಿಳಿಸಿಕೊಡುತ್ತೇವೆ.
-ಹಲ್ಲಿ ಒಂದು ಸರಿ ನುಡಿದರೆ ಮೃತ್ಯು ವಾರ್ತೆಯನ್ನು ಕೇಳುವಿರಿ
-ಹಲ್ಲಿ ಎರಡು ಸರಿ ನುಡಿದರೆ ಸುಖ
-ಹಲ್ಲಿ ಮೂರು ಸರಿ ನುಡಿದರೆ ಪ್ರಯಾಣ
-ಹಲ್ಲಿ ನಾಲ್ಕು ಸರಿ ನುಡಿದರೆ ಲಾಭ
-ಹಲ್ಲಿ ಐದು ಸರಿ ನುಡಿದರೆ ವಾರ್ತೆ
-ಹಲ್ಲಿ ಆರು ಸರಿ ನುಡಿದರೆ ಕಲಹ
-ಹಲ್ಲಿ ಏಳು ಸರಿ ನುಡಿದರೆ ಬಂಧುಗಳು ಬರುವರು
-ಎಂಟು ಸರಿ ನುಡಿದರೆ ಮರಣಕ್ಕೆ ಸಮಾನವಾದ ಕಷ್ಟ
-ಒಂಬತ್ತು ಸರಿ ನುಡಿದರೆ ಶುಭ
-ಇನ್ನು ಹೆಚ್ಚು ಸರಿ ನೋಡಿದರೆ ಫಲವನ್ನು ನೋಡಕೊಡದು.