ನೀವು ಈ ಒಂದು ಸಮಯದಲ್ಲಿ ಸ್ನಾನವನ್ನು ಮಾಡಿದರೆ ನಿಮಗೆ ಕಷ್ಟಗಳು ಹೆಚ್ಚಾಗುತ್ತವೆ. ಹಿಂದೂ ಸಂಪ್ರದಾಯದಲ್ಲಿ 4 ರೀತಿಯಾದಂತಹ ಸ್ನಾನದ ಸಮಯವನ್ನು ಬಹಳ ವಿಶೇಷವಾಗಿ ಉಲ್ಲೇಖಿಸಿದ್ದಾರೆ.
- 1, ದೇವತೆಗಳ ಸ್ನಾನ
- 2, ಋಷಿ ಸ್ನಾನ
- 3,ಮಾನವ ಸ್ನಾನ
- 4,ರಾಕ್ಷಸ ಸ್ನಾನ
ಈ ರೀತಿಯಾಗಿ ನಾಲ್ಕು ವಿಧವಾಗಿ ಸ್ನಾನದ ಸಮಯವನ್ನು ಬಹಳ ನಿಕರವಾಗಿ ಪ್ರಾಮಾಣಿಕವಾಗಿ ತಿಳಿಸಿಕೊಟ್ಟಿದ್ದಾರೆ. ಅದರೆ ಈ ಒಂದು ಸಮಯದಲ್ಲಿ ಸ್ನಾನ ಮಾಡಿದರೆ ಕಷ್ಟಗಳು ಹೆಚ್ಚಾಗುತ್ತದೆ. ಜೀವನದಲ್ಲಿ ನೀವು ಎಷ್ಟೇ ಸಂಪಾದನೆ ಮಾಡಿದರು ಕೂಡ ಕೈನಲ್ಲಿ ಹಣಕಾಸು ನಿಲ್ಲುವುದಿಲ್ಲ.ಯಾವಾಗಲೂ ಮನಸ್ಸಿನಲ್ಲಿ ನಾನಾ ರೀತಿಯ ಕಿರಿಕಿರಿಗಳು ಕೆಟ್ಟ ಆಲೋಚನೆಗಳು ರಾಕ್ಷಸ ತತ್ವ ಹೆಚ್ಚಾಗುತ್ತಿರುತ್ತದೆ. ಮನೆಯಲ್ಲಿ ಯಾವುದೇ ಕಾರಣಕ್ಕೂ ಏಳಿಗೆಯನ್ನುವುದು ಆಗುತ್ತಿರುವುದಿಲ್ಲ. ಅಖಂಡವಾದ ಯಶಸ್ಸನ್ನು ಗಳಿಸಬೇಕು ಎಂದರೆ ಇಂತಹ ಸಮಯದಲ್ಲಿ ಸ್ನಾನವನ್ನು ಮಾಡಬೇಕು.
1,ಇನ್ನು ಬೆಳಗ್ಗಿನ ಜಾವಾ 3:00 ಗಂಟೆಯಿಂದ 4:00 ಒಳಗಾಗಿ ಸ್ನಾನ ಮಾಡುವುದಾದರೆ ಅದನ್ನು ಋಷಿ ಸ್ನಾನ ಎಂದು ಕರೆಯುತ್ತಾರೆ. ಈ ಸಮಯದಲ್ಲಿ ಸಾಮಾನ್ಯ ಮಾನವರು ಸ್ನಾನ ಮಾಡಿದರೆ ಋಷಿಗಳು ಮಾಡಿರುವ ಅಖಂಡ ಪುಣ್ಯ ಫಲಗಳು ಸಿಗುತ್ತದೆ. ಜೀವನದಲ್ಲಿ ಎಲ್ಲಾ ಕೆಲಸ ಕಾರ್ಯದಲ್ಲಿ ಅಖಂಡ ಯಶಸ್ಸು ನಿಮಗೆ ಸಿಗುತ್ತದೆ.
2, ಬೆಳಗಿನ ಜಾವಾ 4:00 ಗಂಟೆಯಿಂದ 5:00 ಗಂಟೆ ಒಳಗಾಗಿ ನೀವು ಸ್ನಾನವನ್ನು ಮಾಡಿದರೆ ದೇವತಾ ಸ್ನಾನ ಎಂದು ಕರೆಯುತ್ತಾರೆ. ಈ ಸಮಯದಲ್ಲಿ ವಿಶೇಷವಾಗಿ ದೇವಾನುದೇವತೆಗಳಿಗೆ ದೇವಸ್ಥಾನಗಳಲ್ಲಿ ವಿಗ್ರಹಗಳಲ್ಲಿ ಅಭಿಷೇಕವನ್ನು ಮಾಡುವ ಸಮಯವಾಗಿದೆ.ಈ ಸಮಯದಲ್ಲಿ ಮನುಷ್ಯರು ಸ್ನಾನ ಮಾಡಿದರೆ ದೈವಬಲ ಅನ್ನೋದು ಜೀವನದಲ್ಲಿ ಹೆಚ್ಚಾಗುತ್ತದೆ.
3, ಮನುಷ್ಯ ಸ್ನಾನ ಅಂದರೆ ಮಾನವ ಸ್ನಾನ.5:00 ಗಂಟೆಯಿಂದ 6:00 ಗಂಟೆ ಒಳಗೆ ಸ್ನಾನ ಮಾಡಿದರೆ ಮಾನವ ಸ್ನಾನ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ನೀವು ಸ್ನಾನ ಮಾಡಿದರೆ ನಿಮ್ಮ ಕಷ್ಟಕಾರ್ಪಣ್ಯಗಳು ಕಳೆಯುತ್ತ ಬರುತ್ತದೆ. ವಿಶೇಷವಾಗಿ ಸಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸಿನಲ್ಲಿ ಉಂಟಾಗುತ್ತದೆ. ಯಾವುದೇ ರೀತಿಯಾದ ಕಷ್ಟಗಳು ನಿವಾರಣೆಯಾಗುತ್ತದೆ.
5, ಇನ್ನು ಬೆಳಗಿನ ಜಾವ 6:00 ಗಂಟೆಯಿಂದ 7:00 ಗಂಟೆ ಒಳಗೆ ಸ್ನಾನ ಮಾಡಿದರೆ ಇದು ರಾಕ್ಷಸ ಸ್ನಾನ ಎಂದು ಹೇಳಲಾಗುತ್ತದೆ.ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಸ್ನಾನವನ್ನು ಮಾಡಬಾರದು. ಒಂದು ವೇಳೆ ಈ ಸಮಯದಲ್ಲಿ ಸ್ನಾನವನ್ನು ಮಾಡಿದರೆ ರಾಕ್ಷಸ ತತ್ವ ಹೆಚ್ಚಾಗುತ್ತದೆ. ಮನಸ್ಸಿನಲ್ಲಿ ಯಾವಾಗಲೂ ನಕಾರಾತ್ಮಕ ಆಲೋಚನೆಗಳು ಬರುತ್ತಿರುತ್ತದೆ. ಮನಸಿನಲ್ಲಿ ಎಷ್ಟೇ ಕೆಲಸ ಕಾರ್ಯವನ್ನು ಮಾಡಿದರು ಕೂಡ ನೆಮ್ಮದಿ ಎನ್ನುವುದು ಇರುವುದಿಲ್ಲ. ಜೀವನದಲ್ಲಿ ನಿಮ್ಮ ಕಷ್ಟಗಳು ಕಡಿಮೆಯಾಗಬೇಕು ಎಂದರೆ 6:00 ಗಂಟೆ ಒಳಗೆ ಸ್ನಾನವನ್ನು ಮಾಡಬೇಕು.