ಅನಂತ ಪದ್ಮನಾಭ ವ್ರತ ಅಥವಾ ಅನಂತ ಹುಣ್ಣಿಮೆ ಹಾಗು ಭದ್ರಪದ ಮಾಸದ ಹುಣ್ಣಿಮೆ ಯಾವಾಗ ಬಂದಿದೆ? ಇದರ ವಿಶೇಷತೆ ಏನು? ಯಾವ ಸಮಯದಲ್ಲಿ ಪೂಜೆ ಮಾಡಬೇಕು ಎನ್ನುವುದನ್ನು ಇವತ್ತಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ಕ್ಷಿರ ಸಾಗರದಲ್ಲಿ ಮಹಾಶೇಷನ ಮೇಲೆ ಮಲಗಿರುವ ಶ್ರೀಮನ್ ನಾರಾಯಣನನ್ನು ಪೂಜೆ ಮಾಡುವ ದಿನವನ್ನು ಅನಂತ ಹುಣ್ಣಿಮೆ ಎಂದು ಕರೆಯುತ್ತೇವೆ.ಈ ಅನಂತ ಪದ್ಮನಾಭ ವ್ರತವನ್ನು ಭದ್ರಪದ ಮಾಸದಲ್ಲಿ ಬರುವಂತಹ ಹುಣ್ಣಿಮೆ ದಿನ ಆಚರಣೆ ಮಾಡುತ್ತೇವೆ.
ಇನ್ನು ಈ ವರ್ಷ 2023 ಅನಂತ ಹುಣ್ಣಿಮೆ ಸೆಪ್ಟೆಂಬರ್ 29ನೇ ತಾರೀಕು ಶುಕ್ರ ವಾರದ ದಿನ ಬಂದಿದೆ. ಅದರೆ ಈ ಹುಣ್ಣಿಮೆ ತಿಥಿ ಆರಂಭ ಆಗುವುದು ಶುಕ್ರವಾರ.ಸೆಪ್ಟೆಂಬರ್ 28ನೇ ತಾರೀಕು ಗುರುವಾರದ ದಿನ ಸಂಜೆ 6:49 ನಿಮಿಷಕ್ಕೆ ಈ ಹುಣ್ಣಿಮೆ ತಿಥಿ ಆರಂಭವಾಗಿ ಸೆಪ್ಟೆಂಬರ್ 29ನೇ ತಾರೀಕು ಶುಕ್ರವಾರದ ದಿನ ಸಂಜೆ 3:26 ನಿಮಿಷಕ್ಕೆ ಈ ಹುಣ್ಣಿಮೆ ತಿಥಿ ಅಂತ್ಯ ಆಗುತ್ತದೆ. ಹಾಗಾಗಿ ಹೆಚ್ಚುವರಿ ಸಮಯ ಸೆಪ್ಟೆಂಬರ್ 29ನೇ ತಾರೀಕು ಶನಿವಾರದ ದಿನ ಅನಂತ ಹುಣ್ಣಿಮೆ ವ್ರತವನ್ನು ಮಾಡಬೇಕು.
ಇನ್ನು ಅನಂತ ಹುಣ್ಣಿಮೆ ದಿನ ವಿಷ್ಣುವು ಅನಂತ ಪದ್ಮನಾಭ ದೇವರಾಗಿ ಭೂಮಿಯಲ್ಲಿ ಅವತರ ಎತ್ತಿದರು.ಹಾಗಾಗಿ ಅವತ್ತಿನ ದಿನ ಜನರು ಅನಂತ ಪದ್ಮನಾಭ ವ್ರತವನ್ನು ಆಚಾರಣೆ ಮಾಡಿದರೆ ಒಳ್ಳೆಯದು.ಇವತ್ತಿನ ವಿಶೇಷವಾದ ಪೂಜೆ ಮಾಡುವುದರಿಂದ ಹೆಚ್ಚಿನ ಫಲವನ್ನು ಪಡೆಯಬಹುದು.