ಅಡುಗೆ ಮನೆಯಲ್ಲಿ ಈ 2 ಪಾತ್ರೆಗಳನ್ನು ಉಲ್ಟಾ ಇಟ್ಟರೆ ಬಡತನ ತಪ್ಪಿದ್ದಲ್ಲ!

ಮನೆಯ ಉಳಿದ ಸ್ಥಳಗಳಲ್ಲಿ ಅಡುಗೆ ಮನೆಯನ್ನು ಅತ್ಯಂತ ಮುಖ್ಯವಾದ ಭಾಗವೆಂದು ಪರಿಗಣಿಸಲಾಗುತ್ತದೆ. ಶಾಸ್ತ್ರದ ಪ್ರಕಾರ ಅಡುಗೆ ಮನೆಯನ್ನು ನಿಯಮಾನುಸಾರ ನಿರ್ಮಿಸಿದರೆ ಅದರಿಂದ ನಮಗೆ ಯಾವುದೇ ರೀತಿಯಾದ ಸಮಸ್ಯೆಗಳು ಎದುರಾಗುವುದಿಲ್ಲ ಎನ್ನುವ ನಂಬಿಕೆಯಿದೆ. ಕೆಲವರ ಅಡುಗೆ ಮನೆಯನ್ನು ಚೆನ್ನಾಗಿ ಅಲಂಕರಿಸಿರುತ್ತಾರೆ. ಅಲ್ಲಿ ಎಲ್ಲಾ ಅಡುಗೆ ಸಾಮಾಗ್ರಿಗಳನ್ನು, ವಸ್ತುಗಳನ್ನು ವ್ಯವಸ್ಥಿತವಾಗಿ ಜೋಡಿಸಿಡಲಾಗುತ್ತದೆ.

ಅದೇ ಸಮಯದಲ್ಲಿ, ಕೆಲವು ಜನರ ಅಡುಗೆ ಮನೆಯು ಹೆಚ್ಚು ಕೊಳಕಾಗಿರುತ್ತದೆ ಮತ್ತು ಅಸ್ತವ್ಯಸ್ತವಾಗಿರುತ್ತದೆ. ಎಲ್ಲೆಂದರಲ್ಲಿ ಅಡುಗೆ ಸಾಮಾಗ್ರಿಗಳು ಹರಡಿಕೊಂಡಿರುತ್ತದೆ. ವಿಶೇಷವಾಗಿ, ಊಟದ ಬಳಿಕ ಪಾತ್ರೆಗಳನ್ನು ತಳೆಯದೆ ಹಾಗೆ ಇಟ್ಟಿರುತ್ತಾರೆ. ಇನ್ನು ಕೆಲವು ಮನೆಗಳಲ್ಲಿ, ಪಾತ್ರೆಗಳನ್ನು ತಲೆಕೆಳಗಾಗಿ ಅಥವಾ ತಪ್ಪಾದ ದಿಕ್ಕಿನಲ್ಲಿ ಪಾತ್ರೆಗಳನ್ನು ಇಟ್ಟಿರುತ್ತಾರೆ. ಸಾಮಾನ್ಯವಾಗಿ ಜನರು ಕೆಲವು ಪಾತ್ರೆಗಳನ್ನು ಸ್ವಚ್ಛಗೊಳಿಸಿದ ನಂತರ ಅಥವಾ ಬಳಸಿದ ನಂತರ ತಲೆಕೆಳಗಾಗಿ ಇಡುತ್ತಾರೆ. ಈ ರೀತಿ ಮಾಡುವುದರಿಂದ ಅಶುಭ ಫಲವನ್ನು ನೀವು ಪಡೆದುಕೊಳ್ಳುತ್ತೀರಿ. ಪಾತ್ರೆಗಳನ್ನು ತಲೆಕೆಳಗಾಗಿ ಇಡುವುದರಿಂದ ಯಾವೆಲ್ಲಾ ಸಮಸ್ಯೆಗಳು ಎದರಾಗುತ್ತದೆ.?

ಯಾವ ಪಾತ್ರೆಗಳನ್ನು ತಲೆಕೆಳಗಾಗಿ ಇಡಬಾರದು.?

ರಾತ್ರಿ ವೇಳೆ ಊಟ ಮುಗಿದ ನಂತರ ಪಾತ್ರೆಗಳನ್ನು ತೊಳೆಯದೆ ಹಾಗೇ ಇಡಬಾರದು. ಅದೇ ರೀತಿ ಕೆಲವು ಪಾತ್ರೆಗಳನ್ನು ನೀವು ತಲೆಕೆಳಗಾಗಿ ಇಡಬಾರದು. ಅದರಲ್ಲೂ ಕೆಲವು ಪಾತ್ರೆಗಳಿಗೆ ಇಡು ಕಡ್ಡಾಯವಾಗಿ ಅನ್ವಯವಾಗುತ್ತದೆ. ಶಾಸ್ತ್ರದ ಪ್ರಕಾರ, ರೊಟ್ಟಿ ಮಾಡಿದ ನಂತರ ಬಾಣಲೆಯನ್ನು ಎಂದಿಗೂ ತಲೆಕೆಳಗಾಗಿ ಇಡಬಾರದು. ಇದು ನಮ್ಮ ಜೀವನದ ಮೇಲೆ ಅಶುಭ ಪರಿಣಾಮವನ್ನು ಬೀರುತ್ತದೆ. ತಪ್ಪಿಯೂ ನೀವು ಈ ತಪ್ಪನ್ನು ಮಾಡಲು ಹೋಗದಿರಿ. ರೊಟ್ಟಿ ಅಥವಾ ಇನ್ನಾವುದೇ ಆಹಾರವನ್ನು ತಯಾರಿಸಿದ ನಂತರ ಆ ಪಾತ್ರೆಯನ್ನು ತಲೆಕೆಳಗಾಗಿ ಇಡಬಾರದು. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಹಣದ ಕೊರತೆ ಉಂಟಾಗುತ್ತದೆ. ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಪ್ರಾರಂಭಿಸುತ್ತೀರಿ. ಇದು ನಿಮಗೆ ಸಾಲದ ಹೊರೆಯಾಗಬಹುದು.

ಕಡಾಯಿ:ಬಾಣಲೆಯಂತೆ ಕಡಾಯಿಯನ್ನು ಕೂಡ ಎಂದಿಗೂ ನಾವು ತಲೆಕೆಳಗಾಗಿ ಇಡಬಾರದು. ಶಾಸ್ತ್ರದ ಪ್ರಕಾರ, ಅಡುಗೆಮನೆಯಲ್ಲಿ ಬಾಣಲೆಯನ್ನು ತೊಳೆದು ಸ್ವಚ್ಛಗೊಳಿಸಿದ ನಂತರ ತಲೆಕೆಳಗಾಗಿ ಇಡಬಾರದು. ಇದು ಮನೆಗೆ ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ. ನೀವು ಇವುಗಳಿಂದ ಅಡುಗೆಯನ್ನು ತಯಾರಿಸಿದ ನಂತರ ಸ್ವಚ್ಛವಾಗಿಡಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಇಲ್ಲದಿದ್ದರೆ ನೀವು ಜೀವನದಲ್ಲಿ ಬಡತನದಂತಹ ಸಮಸ್ಯೆಗಳನ್ನು ಎದುರಿಸುವಂತಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಈ ಎರಡೂ ಪಾತ್ರೆಗಳನ್ನು ತಲೆಕೆಳಗಾಗಿ ಇಡುವುದರಿಂದ ರಾಹು ದೋಷ ಉಂಟಾಗುತ್ತದೆ. ಈ ಕಾರಣಕ್ಕಾಗಿ ಅವುಗಳನ್ನು ಬಳಸಿದ ನಂತರ ರಾತ್ರಿ ಸಮಯದಲ್ಲಿ ತೊಳೆದು ಸ್ವಚ್ಛವಾಗಿಡಿ. ಈ ಪಾತ್ರೆಯನ್ನು ತೊಳೆಯದೇ ಇಡುವುದರಿಂದ, ತಲೆಕೆಳಗಾಗಿ ಇಡುವುದರಿಂದ ಕುಟುಂಬದ ಸದಸ್ಯರ ಪ್ರಗತಿಗೆ ಮಾರಕವಾಗಬಹುದು. ನಿಮ್ಮ ಮನೆಯಲ್ಲಿ ಅಪಶ್ರುತಿ ಮತ್ತು ಅಶಾಂತಿ ಕೂಡ ಉಂಟಾಗಬಹುದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

ಪಾತ್ರೆಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು.?

ನಾವು ಅಡುಗೆ ಕೋಣೆಯಲ್ಲಿ ಪಾತ್ರೆಗಳನ್ನು ಇಡುವುದಕ್ಕೂ ಅದರದ್ದೇ ಆದ ದಿಕ್ಕುಗಳಿವೆ. ಪಾತ್ರೆಗಳನ್ನು ಯಾವಾಗಲೂ ಪಶ್ಚಿಮ ದಿಕ್ಕಿನಲ್ಲಿ ಇಡುವುದು ಉತ್ತಮ. ವಿಶೇಷವಾಗಿ ಹಿತ್ತಾಳೆ, ತಾಮ್ರ, ಉಕ್ಕು ಮತ್ತು ಕಂಚಿನ ಪಾತ್ರೆಗಳನ್ನು ಪಶ್ಚಿಮ ದಿಕ್ಕಿನಲ್ಲಿ ಇಡಬೇಕು ಮತ್ತು ಬೇರೆ ಯಾವುದೇ ದಿಕ್ಕಿನಲ್ಲಿ ಇಡಬೇಡಿ. ಬಿಸಿ ಪ್ಯಾನ್‌ ಗೆ ಅಥವಾ ಇನ್ನಾವುದೇ ಅಡುಗೆ ತಯಾರಿಸುವ ಪ್ಯಾನ್‌ಗೆ ನೀರನ್ನು ಸುರಿಯಬಾರದು. ಹೀಗೆ ಮಾಡುವುದರಿಂದ ಹೊರಬರುವ ಹಬೆ ಮನೆಯೊಳಗೆ ನಕಾರಾತ್ಮಕ ಶಕ್ತಿಯನ್ನು ತರುತ್ತದೆ. ಜೀವನದಲ್ಲಿ ಹಲವು ರೀತಿಯ ಸಮಸ್ಯೆಗಳು ಬರುವಂತೆ ಮಾಡಬಹುದು. ಪಾತ್ರೆಗಳನ್ನು ತಲೆಕೆಳಗಾಗಿ ಅಥವಾ ತಪ್ಪು ದಿಕ್ಕಿನಲ್ಲಿ ಇಟ್ಟರೆ ತಾಯಿ ಅನ್ನಪೂರ್ಣೇಶ್ವರಿ ದೇವಿಯು ನಿಮ್ಮ ಮೇಲೆ ಕೋಪಗೊಳ್ಳಬಹುದು.

ಅಡುಗೆ ಮನೆಯಲ್ಲಿ ನೀವು ಪಾತ್ರೆಗೆ ಸಂಬಂಧಿಸಿದಂತೆ ಈ ತಪ್ಪುಗಳನ್ನು ಮಾಡಲೇಬೇಡಿ. ನೀವು ಈ ತಪ್ಪನ್ನು ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗಬಹುದು. ಹಣದ ಸಮಸ್ಯೆಗಳು ತಲೆದೂರಬಹುದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

Related Post

Leave a Comment