ಸಾಮಾನ್ಯವಾಗಿ ಮನೆಯ ಅಂಗಳದಲ್ಲಿ ಮತ್ತು ಪ್ರತಿನಿತ್ಯ ದೇವರ ಪೂಜೆಗೆ ಎಂದು ಒಂದಲ್ಲ ಒಂದು ರೀತಿಯಾ ಹೂಗಳನ್ನು ಬಳಸುತ್ತಾರೆ. ಮನೆಯಂಗಳದಲ್ಲಿ ಸಿಗುವ ಹೂಗಳು ಕೇವಲ ದೇವರ ಪೂಜೆಗೆ ಮಾತ್ರವಲ್ಲದೆ ಬಹು ಉಪಯೋಗಿ ಕೂಡ ಆಗಿದೆ. ಅದರಲ್ಲೂ ನೋಡಿದರು ತಿರಸ್ಕಾರ ಭಾವನೆಯಿಂದ ಕಾಣುವ ಸದಾಪುಷ್ಪ ಮನೆಯ ಅಂಗಳದಲ್ಲಿರುವ ಆರೋಗ್ಯದ ಕಣಜ. ನಿತ್ಯಪುಷ್ಪ ಇದು ವಿಶೇಷವಾದ ಔಷಧಿ ಗುಣವನ್ನು ಹೊಂದಿದೆ. ಕೇವಲ ಹೂವು ಮಾತ್ರವಲ್ಲ ಅದರ ಬೇರು ಎಲೆ ಕೂಡ ಸಂಪೂರ್ಣ ಔಷಧಿಯುಕ್ತವಾಗಿದೆ.
ಇದನ್ನು ಬಳಕೆ ಮಾಡುವುದರಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಬಹುದು. ಸದಾಪುಷ್ಪದಿಂದ ಸಿಗುವ ಆರೋಗ್ಯದ ಲಾಭಗಳನ್ನು ತಿಳಿದುಕೊಳ್ಳೋಣ.1,ನಿತ್ಯಪುಷ್ಪ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಈ ಹೂವಿನ ಎಲೆಯ ರಸದ ಜೊತೆಗೆ ಅದರ ಬೇರುಗಳನ್ನು ಒಣಗಿಸಿ ತಯಾರಿಸಿರುವ ಪುಡಿಯಿಂದ ಕ್ಯಾನ್ಸರ್ ರೋಗವು ಕಡಿಮೆಯಾಗುತ್ತದೆ. ಇದರಲ್ಲಿ ಇರುವ ಆಂಟಿಆಕ್ಸಿಡೆಂಟ್ ಗಳು ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಯನ್ನು ತಡೆಯುವ ಶಕ್ತಿಯನ್ನು ಹೊಂದಿದೆ.
2, ಮಧುಮೇಹಕ್ಕೆ ಉತ್ತಮ.ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ರಾತ್ರಿ ಊಟ ಮಾಡುವ ಮುನ್ನ ಪ್ರತಿದಿನ ಸದಾಪುಷ್ಪ ಗಿಡದ ಬೇರಿನಿಂದ ಮಾಡಿದ ಪುಡಿಯನ್ನು ಸೇವಿಸಿದರೆ ಮಧುಮೇಹ ನಿವಾರಣೆ ಆಗುತ್ತದೆ.3, ಮುಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.ಕೆಲವು ಮಹಿಳೆಯರಿಗೆ ಪಿರಿಯೆಡ್ಸ್ ಸರಿಯಾದ ಸಮಯದಲ್ಲಿ ಆಗುವುದಿಲ್ಲ. ಇರ್ರೆಗುಲರ್ ಪೇರಿಯಡ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ.ಇದಕ್ಕೆ 5-6 ಸದಾ ಪುಷ್ಪ ಎಲೆಗಳನ್ನು ಚೆನ್ನಾಗಿ ಕುದಿಯುವ ನೀರಿನಲ್ಲಿ ಹಾಕಿ ಪ್ರತಿದಿನ ಕುಡಿಯುವುದರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ.
4, ಅಧಿಕ ರಕ್ತದೊತ್ತಡದ ಸಮಸ್ಯೆ ನಿವಾರಣೆಯಾಗುತ್ತದೆ.ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವವರು ಬೆಳಗ್ಗೆ ಖಾಲಿ ಹೊಟ್ಟೆಗೆ ಹಾಗೂ ರಾತ್ರಿ ಮಲಗುವ ಮುನ್ನ ಸದಾಪುಷ್ಪ ಗಿಡದ 4 ಎಲೆಗಳನ್ನು ಸೇವನೆ ಮಾಡುವುದರಿಂದ ರಕ್ತದೊತ್ತಡದ ಸಮಸ್ಯೆ ಕಡಿಮೆ ಆಗುತ್ತದೆ.
4,ಹುಳು ಕೀಟ ಕಡಿತಕ್ಕೆ ಉತ್ತಮವಾದದ್ದು.ಹುಳು ಕೀಟ ಕಚ್ಚಿದಾಗ ಕಡಿತ ಉಂಟಾಗುತ್ತದೆ. ಅದಕ್ಕೆ ಸದಾಪುಷ್ಪ ಎಲೆಯ ರಸ ಹಿಂಡಿದರೆ ಉರಿ ಹಾಗೂ ನೋವು ಕಡಿಮೆ ಆಗುತ್ತದೆ.ಅಷ್ಟೇ ಅಲ್ಲದೆ ಚರ್ಮದ ಕಾಯಿಲೆಯನ್ನು ಇದು ನಿವಾರಣೆ ಮಾಡುತ್ತದೆ.5, ನಿತ್ಯಪುಷ್ಪ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ಇರುವವರು ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವವರು ಸದಾಪುಷ್ಪ ಗಿಡದ ಎಲೆಗಳನ್ನು ಸಂಗ್ರಹಿಸಿ ಒಣಗಿಸಿ ಅವುಗಳನ್ನು ಪುಡಿ ಮಾಡಿಕೊಂಡು ಮುಖಕ್ಕೆ ಹಚ್ಚಿದರೆ ಮುಖದ ಕಾಂತಿ ಹೆಚ್ಚಾಗುತ್ತದೆ. ಮುಖದಲ್ಲಿರುವ ಕಲೆಗಳು ಕೂಡ ನಿವಾರಣೆಯಾಗಿ ಮುಖದಲ್ಲಿರುವ ನೆರಿಗೆಗಳು ಕೂಡ ಕಡಿಮೆಯಾಗುತ್ತದೆ.
6, ಖಿನ್ನತೆ ಮತ್ತು ಆತಂಕ ಕಡಿಮೆ ಮಾಡುತ್ತದೆ.ಖಿನ್ನತೆ ಹಾಗೂ ಮಾನಸಿಕ ಒತ್ತಡದಿಂದ ಬಳಲುತ್ತಿರುವವರು ಪ್ರತಿನಿತ್ಯ ಸದಾಪುಷ್ಪ ಗಿಡದ ಎಲೆ ಹಾಗು ಹೂವಿನ ರಸವನ್ನು ಸೇವನೆ ಮಾಡುವುದರಿಂದ ಖಿನ್ನತೆ ಕಡಿಮೆಯಾಗುತ್ತದೆ ಮತ್ತು ಒತ್ತಡ ಕೂಡಾ ನಿವಾರಣೆಯಾಗುತ್ತದೆ.ಇದರಿಂದ ನಿದ್ರೆ ಕೂಡ ಚೆನ್ನಾಗಿ ಬರುತ್ತದೆ.