ಈ ದೀಪಾರಾಧನೆಯನ್ನು ಮದುವೆ ಆಗಿರುವರು ಮಾತ್ರ ಮಾಡಬೇಕು ಮತ್ತು ಮದುವೆ ಆಗದೆ ಇರುವವರು ಮಾಡುವುದಕ್ಕೆ ಬರುವುದಿಲ್ಲ.ಈ ದೀಪಾರಾಧನೆಯನ್ನು ಶ್ರಾವಣ ಮಾಸದಲ್ಲಿ ಮಾತ್ರ ಶುರುಮಾಡಬೇಕು. ಈ ದೀಪಾರಾಧನೆ ಪ್ರಾರಂಭ ಮಾಡುವ ಮೊದಲು ಗಣೇಶನಿಗೆ ನಮಸ್ಕಾರ ಮಾಡಿಕೊಂಡು ಗಣೇಶನ ಪೂಜೆ ಮಾಡಿಕೊಂಡು ನಂತರ ಮನೆ ದೇವರು, ಕುಲದೇವರಿಗೆ ನಮಸ್ಕಾರ ಮಾಡಿಕೊಂಡು ನಂತರ ದೀಪಾರಾಧನೆಯನ್ನು ಶುರು ಮಾಡಬೇಕಾಗುತ್ತದೆ. ಈ ದೀಪಾರಾಧನೆಯನ್ನು ಯಾವ ಕಾರಣಕ್ಕೆ ಮಾಡುತ್ತಿರುವುದನ್ನು ಸಂಕಲ್ಪ ಮಾಡಿಕೊಂಡು ಶುರು ಮಾಡಬೇಕು.
ದೀಪಾರಾಧನೆ ಮಾಡುವಾಗ ಏನಾದರೂ ಪ್ರಸಾದವನ್ನು ಮಾಡಿ ದೀಪಾರಾಧನೆಯನ್ನು ಮಾಡಬೇಕು. ಅಂದರೆ ಖರ್ಜೂರ ಅಥವಾ ಬೆಲ್ಲ, ಕಲ್ಲು ಸಕ್ಕರೆ, ಕೋಸಂಬರಿ ಈ ರೀತಿ ಏನಾದರೂ ಒಂದು ಪ್ರಸಾದವನ್ನು ಇಟ್ಟು ಈ ದೀಪಾರಾಧನೆ ಮಾಡಬೇಕಾಗುತ್ತದೆ. ಈ ದೀಪಾರಾಧನೆ ಮಾಡುವುದರಿಂದ ಸುಮಂಗಲಿ ಯೋಗ ಹೆಚ್ಚಾಗುತ್ತದೆ. ಗಂಡನ ಶ್ರೇಯಸ್ಸುಗೋಸ್ಕರ ನೀವು ದೀಪಾರಾಧನೆಯನ್ನು ಮಾಡಬೇಕು.ದುಡ್ಡಿನ ಸಮಸ್ಯೆ ಇರುವವರು ಈ ದೀಪಾರಾಧನೆ ಮಾಡುವುದರಿಂದ ದುಡ್ಡಿನ ಸಮಸ್ಯೆ ನಿವಾರಣೆಯಾಗುತ್ತದೆ.
ಮೊದಲು ಸಣ್ಣ ಪ್ಲೇಟ್ ಗೆ ಸ್ವಲ್ಪ ಅರಿಶಿಣ, ಶ್ರೀಗಂಧ ಮತ್ತು ನೀರು ಹಾಕಿ ಪೇಸ್ಟ್ ರೀತಿಯಲ್ಲಿ ತಯಾರಿ ಮಾಡಬೇಕು.ಎರಡು ಎಲೆ ತೆಗೆದುಕೊಂಡು ತೋಟ್ಟನ್ನು ತೆಗೆಯಬೇಕು. ನಂತರ ಎಲೆಯ ಮೇಲೆ ಶ್ರೀ ಚಕ್ರವನ್ನು ಬರೆಯಬೇಕು.ನಂತರ ಅದರ ಮೇಲೆ 8 ಬೊಟ್ಟು ಬರುವ ರೀತಿ ಅರಿಶಿಣ ಕುಂಕುಮದಲ್ಲಿ ಹಚ್ಚಿ ಇಟ್ಟುಕೊಳ್ಳಬೇಕು. ಈ ದೀಪಾರಾಧನೆ ಮಾಡುವಾಗ ಮಣ್ಣಿನ ದೀಪವನ್ನು ಅಥವಾ ಹಿತ್ತಾಳೆ ದೀಪವನ್ನು ಕೂಡ ಮಾಡಬಹುದು.
ಒಂದು ಹಿತ್ತಾಳೆ ಅಥವಾ ತಾಮ್ರದ ಪ್ಲೇಟ್ ತೆಗೆದುಕೊಂಡು ಅದರ ಮೇಲೆ ಶ್ರೀ ಚಕ್ರವನ್ನು ಅಕ್ಕಿ ಹಿಟ್ಟಿನಲ್ಲಿ ಬರೆದು ರೆಡಿ ಮಾಡಿ ಇಟ್ಟುಕೊಳ್ಳಬೇಕು. ನೀವು ಇದನ್ನು ದೇವರ ಮನೆಯಲ್ಲಿ ದೀಪಾರಾಧನೆ ಮಾಡಬೇಕು. ರಂಗೋಲಿ ಹಾಕಿದ ನಂತರ ಪಚ್ಚಕರ್ಪೂರ ಹಾಕಿ ದೀಪಾರಾಧನೆ ಮಾಡಬೇಕು. ಈ ದೀಪಾರಾಧನೆಯನ್ನು ಶ್ರಾವಣ ಮಾಸದಲ್ಲಿ ಶುರು ಮಾಡಬೇಕು.ನಂತರ ನೀವು 5 ವಾರ ಮತ್ತು 9 ವಾರ ಮಾಡುತ್ತೇವೆ ಎಂಬುದನ್ನು ಮಂಗಳವಾರ ಅಥವಾ ಶುಕ್ರವಾರ ಸಂಕಲ್ಪ ಮಾಡಬೇಕು. ಈ ದೀಪಾರಾಧನೆ ಮಾಡುವಾಗ ಕನಕದಾಸರ ಸೂತ್ರವನ್ನು ಹೇಳಬೇಕು.
ರಂಗೋಲಿ ಮೇಲೆ ಅಕ್ಷತೆ ಹಾಕಿ ಎಲೆಯನ್ನು ಇಡಬೇಕು.ಎಲೆಯ ಮಧ್ಯೆ ಅಕ್ಷತೆ ಹಾಕಬೇಕು.ನಂತರ ಎರಡು ಕುಬೇರ ದೀಪ ಅಥವಾ ಮಣ್ಣಿನ ದೀಪವನ್ನು ಇಟ್ತು ಅರಿಶಿಣ ಕುಂಕುಮವನ್ನು ಹಚ್ಚಬೇಕು.ನಂತರ ತುಪ್ಪ ಅಥವಾ ಎಣ್ಣೆಯನ್ನು ಹಾಕಿ ಅದರ ಸುತ್ತಲೂ ಕೆಂಪು, ಹಳದಿ ಹೂವಿನಿಂದ ಅಲಂಕಾರ ಮಾಡಿ.ಜೊತೆಗೆ ದೀಪದ ಒಳಗೆ ಲವಂಗವನ್ನು ಹಾಕಬೇಕು.ಲವಂಗ ಹಾಕಿ ದೀಪರಾಧನೆ ಮಾಡುವುದರಿಂದ ದುಡ್ಡಿನ ಸಮಸ್ಯೆ ಬೇಗನೆ ಕಡಿಮೆಯಾಗುತ್ತದೆ. ಆದ್ದರಿಂದ ಆದಷ್ಟು ಲವಂಗ ಹಾಕಿ ದೀಪಾರಾಧನೆಯನ್ನು ಮಾಡಿ.ನಂತರ ಊದುಬತ್ತಿಯಿಂದ ದೀಪಾರಾಧನೆಯನ್ನು ಮಾಡಬೇಕು. ದೀಪಾರಾಧನೆಯನ್ನು ಸೂರ್ಯಸ್ತ ಅದನಂತರ ದೀಪಾರಾಧನೆ ಮಾಡಿದರೆ ತುಂಬಾ ಒಳ್ಳೆಯದು.ಈ ದೀಪವನ್ನು ದೇವರ ಕಡೆ ಇಡಬೇಕು ಹಾಗೂ ಭಕ್ತಿಯಿಂದ ಪ್ರಾಥನೆ ಮಾಡಿ.