ಬಾಳೆಹಣ್ಣು ಮತ್ತು ಹಾಲು ಮಿಶ್ರಣ ಮಾಡಿಕೊಂಡು ಕುಡಿಯುವುದು ದೇಹಕ್ಕೆ ತುಂಬಾ ಒಳ್ಳೆಯದು ಎಂದು ಬಾಳೆಹಣ್ಣಿನ ಮಿಲ್ಕ್ ಶೇಕ್ ಮಾಡಿಕೊಂಡು ಕುಡಿಯುತ್ತಿದ್ದರು. ಸಂಶೋಧನೆ ಪ್ರಕಾರ ಬಾಳೆಹಣ್ಣು ಮತ್ತು ಹಾಲು ಎರಡನ್ನು ಸೇರಿಸಿ ತಿನ್ನಬಾರದು ಎಂದು ಹೇಳುತ್ತಿದ್ದಾರೆ.
ಎರಡರಲ್ಲೂ ಹೆಚ್ಚಾಗಿ ಪೋಷಕಾಂಶ ಇರುತ್ತದೆ ಆದರೆ ಎರಡನ್ನು ಬೆರೆಸಿ ತಿನ್ನಬಾರದು ಎಂದು ಹೇಳಿದ್ದಾರೆ. ಹಾಲಿನಲ್ಲಿ ಪ್ರೋಟಿನ್ ಮತ್ತು ಖನಿಜಾಂಶಗಳು, ಹಿಮೋಗ್ಲೋಬಿನ್, ಕ್ಯಾಲ್ಸಿಯಂ, ವಿಟಮಿನ್ ಬಿ12 ಇರುತ್ತವೆ. ಪ್ರತಿ 100 ಗ್ರಾಂ ಹಾಲಿನಲ್ಲಿ 42 ಕ್ಯಾಲರಿ ಇರುತ್ತದೆ.
ಇನ್ನು ದೇಹದಲ್ಲಿ ಹೆಚ್ಚು ಸಸ್ಯಹಾರಿ ಇರುವ ಕಾರಣದಿಂದಾಗಿ ಪ್ರತಿದಿನ ಪ್ರೊಟೀನ್ ದೇಹಕ್ಕೆ ಸಿಗುವುದಿಲ್ಲ. ಬಾಳೆ ಹಣ್ಣಿನಲ್ಲಿ ವಿಟಮಿನ್ ಬಿ6, ಮ್ಯಾಂಗನೀಸ್, ವಿಟಮಿನ್ ಸಿ ಆಹಾರದ ನಾರಿನಂಶ, ಪೊಟ್ಯಾಶಿಯಂ ಹೆಚ್ಚಾಗಿರುತ್ತದೆ. ಪ್ರತಿ 100 ಗ್ರಾಂ ಬಾಳೆಹಣ್ಣಿನಲ್ಲಿ ಸುಮಾರು 80ರಷ್ಟು ಕ್ಯಾಲರಿ ಇರುತ್ತದೆ. ವ್ಯಾಯಾಮಕ್ಕೆ ಮೊದಲು ಮತ್ತು ವ್ಯಾಯಾಮದ ಬಳಿಕ ಒಳ್ಳೆಯ ಆಹಾರ. ಹಾಲು ಮತ್ತು ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಯಾಕೆಂದರೆ ಇದರಲ್ಲಿರುವ ಪೋಷಕಾಂಶ ಬೇರೆ ಹಣ್ಣಿನಲ್ಲಿ ಸಿಗುವುದಿಲ್ಲ.
ದೇಹದಲ್ಲಿ ಒಳಸೇರಿದಾಗ ಒಂದೇ ರೀತಿ ಕೆಲಸ ಮಾಡುವುದಿಲ್ಲ.ಸಂಶೋಧನೆ ಪ್ರಕಾರ ಇವೆರಡನ್ನು ತಿನ್ನುವುದರಿಂದ ಜೀರ್ಣಕ್ರಿಯೆ ವ್ಯವಸ್ಥೆ ತುಂಬಾ ತೊಂದರೆಯಾಗುತ್ತದೆ. ಸೈನಸ್ ತೊಂದರೆಯಿಂದ ಶೀತ, ಕೆಮ್ಮು ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇವೆರಡನ್ನೂ ಬೆರೆಸಿ ಸೇವಿಸಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ವಾಂತಿಭೇದಿ ಹೆಚ್ಚಾಗುವ ಸಾಧ್ಯತೆ ಇದೆ.ಆಹಾರ ಮತ್ತು ದ್ರವವನ್ನು ಮಿಶ್ರಣಮಾಡಿಕೊಂಡು ತಿನ್ನುವುದರಿಂದ ದೇಹದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಆಯುರ್ವೇದದಲ್ಲೂ ಹೇಳಿದ್ದಾರೆ.ಹಾಲು ಸೇವಿಸಿದ 20 ನಿಮಿಷದ ಬಳಿಕ ಬಾಳೆಹಣ್ಣು ಸೇವಿಸುವುದು ಒಳ್ಳೆಯದು. ಬಾಳೆಹಣ್ಣನ್ನು ಮೊಸರಿಗೆ ಬೆರೆಸಿ ಸೇವಿಸಬಹುದು.