ಊಟ ಮಾಡಿದ ತಕ್ಷಣ ಯಾವತ್ತಿಗೂ ಈ ತಪ್ಪು ಮಾಡಲೇಬೇಡಿ!

ಸಾಮಾನ್ಯವಾಗಿ ನಾವು ಆಹಾರವನ್ನು ಸೇವಿಸಿದ ತಕ್ಷಣ ಕೆಲವು ತಪ್ಪುಗಳನ್ನು ನಮಗೆ ತಿಳಿಯದೆ ಮಾಡಿಬಿಡುತ್ತೇವೆ.
ಇನ್ನೂ ಅಂತಹ ತಿಳಿಯದೆ ಮತ್ತು ತಿಳಿದು ಮಾಡಿ ಬಿಡುವ ತಪ್ಪಿಗೆ ನಮ್ಮ ಆರೋಗ್ಯ ಕೆಡುತ್ತದೆ ಹಾಗೂ ಕೊಬ್ಬು ಶೇಖರಣೆ ಹೆಚ್ಚಾಗುತ್ತದೆ ಹಾಗಾಗಿ ಈ ಕೆಲವು ತಪ್ಪುಗಳನ್ನು ಊಟವಾದ ತಕ್ಷಣ ಯಾವುದೇ ಕಾರಣಕ್ಕೂ ಮಾಡಲೇಬೇಡಿ.ಇನ್ನು ಊಟವಾದ ತಕ್ಷಣ ವಾಕಿಂಗ್ , ಅಥವಾ ಎಕ್ಸರ್ಸೈಸ್ ಅಥವಾ ಜಿಮ್ ಮಾಡಲು ಹೋಗಲೇಬೇಡಿ
ಇದರಿಂದ ಅಜೀರ್ಣದ ಸಮಸ್ಯೆ ಉಂಟಾಗುತ್ತದೆ.

ಇನ್ನೂ ವಾಕಿಂಗ್ ,ಎಕ್ಸರ್ಸೈಸ್ ,ಜಾಗಿಂಗ್ ,ಜಿಮ್ ಮತ್ತು ಇನ್ನಿತರ ವ್ಯಾಯಾಮಗಳನ್ನು ಸರಿಯಾದ ಸಮಯಕ್ಕೆ ಮಾಡುವುದರಿಂದ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದಾಗಿದೆ ಆದರೆ ತಪ್ಪಾದ ಸಮಯದಲ್ಲಿ ಮಾಡಿದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ.ಅನೇಕ ಜನರ ಮುಖ್ಯವಾದ ಸಮಸ್ಯೆ ಎಂದರೆ ಎಷ್ಟೇ ವ್ಯಾಯಾಮ , ವಾಕಿಂಗ್ , ಎಕ್ಸರ್ಸೈಸ್ ಮಾಡಿದರೂ ಕೊಬ್ಬು ಕರಗುವುದಿಲ್ಲ ಇದಕ್ಕೆ ಮುಖ್ಯ ಕಾರಣ ಊಟವಾದ ತಕ್ಷಣ ಮೇಲೆ ತಿಳಿಸಿರುವ ಕೆಲಸಗಳನ್ನು ಮಾಡುವುದು ಇದರಿಂದ ಅಜೀರ್ಣ ಉಂಟಾಗುತ್ತದೆ.

ಇದಕ್ಕೆ ಪರಿಹಾರವೆಂದರೆ ಈಗ ಸಾಮಾನ್ಯವಾಗಿ ನಮ್ಮ ದೃಷ್ಟಿ ಯಾವ ಕಡೆಗಿರುತ್ತದೆಯೋ ಅಲ್ಲಿ ನಮ್ಮ ಎನರ್ಜಿ ಕೇಂದ್ರಿಕರಿಸುತ್ತದೆ ಅಂದರೆ ಆ ಕೆಲಸದಲ್ಲಿ ನಮ್ಮ ದೇಹದ ಎನರ್ಜಿ ವ್ಯಯ ಆಗುತ್ತದೆ.

ಇನ್ನೂ ಅಜೀರ್ಣತೆ ಸಮಸ್ಯೆ ಉಂಟಾಗಲು ಏನು ಕಾರಣ ಎಂದು ನೋಡುವುದಾದರೆ ಊಟ ಮಾಡಿದ ತಕ್ಷಣ ವಾಕಿಂಗ್ ,ಜಾಗಿಂಗ್ ,ಜಿಮ್ ಮಾಡಿದಾಗ ನಿಮ್ಮ ದೃಷ್ಟಿ ಅಂದರೆ ನಿಮ್ಮ ದೇಹದ ಇಡೀ ಎನರ್ಜಿ ವಾಕಿಂಗ್,ಜಿಮ್ ಮಾಡುವುದರ ಮೇಲೆ ಕೇಂದ್ರಿಕರಿಸುತ್ತದೆ ಹಾಗೂ ಹೊಟ್ಟೆಯಲ್ಲಿರುವ ಆಹಾರ ಜೀರ್ಣವಾಗಲು ಎನರ್ಜಿ ಇಲ್ಲದಂತಾಗಿ ಅಜೀರ್ಣತೆ ಸಮಸ್ಯೆ ಉಂಟಾಗುತ್ತದೆ.

ಹಾಗಾಗಿ ನಮ್ಮ ಎನರ್ಜಿ ನಾವು ಸೇವಿಸಿದ ಆಹಾರದ ಮೇಲೆ ಇರಬೇಕು ಅಂದರೆ ಜೀರ್ಣ ವ್ಯವಸ್ಥೆಯ ಮೇಲೆ ಇರಬೇಕು ಆಗ ಮಾತ್ರ ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ.ಹಾಗೂ ಇದರಿಂದ ಗ್ಯಾಸ್ಟ್ರಿಕ್ , ಅಸಿಡಿಟಿ ಮಲಬದ್ಧತೆಯಂತಹ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ ಹಾಗೂ ಮುಖ್ಯವಾಗಿ ತೂಕ ಕಡಿಮೆಯಾಗುತ್ತದೆ.

ಧನ್ಯವಾದಗಳು.

Related Post

Leave a Comment