ಈಗ ಅನೇಕ ಜನರಿಗೆ ಕಾಡುತ್ತಿರುವ ಪ್ರಮುಖವಾದ ಸಮಸ್ಯೆಯೆಂದರೆ ಕೈಕಾಲು ನೋವು, ಮೈನೋವು , ಭುಜದ ನೋವು ,ಮಂಡಿನೋವು, ಸೊಂಟ ನೋವು, ಹಿಮ್ಮಡಿ ನೋವು ಇನ್ನೂ ಇತ್ಯಾದಿ ನೋವುಗಳು ಕಾಡುತ್ತಿರುತ್ತದೆ.ಇಂಥ ನೋವುಗಳನ್ನು ಕಡಿಮೆ ಮಾಡಿಕೊಳ್ಳಲು 1 ಸೂಪರ್ ಮನೆ ಮದ್ದನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.
ಈ ಮನೆ ಮದ್ದಿಗೆ ಪ್ರಮುಖವಾಗಿ 2ಸಾಮಾಗ್ರಿಗಳು ಸಾಕು.
ಎಳ್ಳೆಣ್ಣೆ ಮತ್ತು ಗಾಜಿನ ಬಾಟಲ್
ಎಳ್ಳೆಣ್ಣೆಯು ನಮ್ಮ ದೇಹದ ಯಾವುದೇ ಭಾಗದ ನೋವಿಗೂ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ
ಆದರೆ ಅದನ್ನು ಸರಿಯಾದ ವಿಧಾನದಲ್ಲಿ ಬಳಸಬೇಕು.ಮೊದಲಿಗೆ ಎಳ್ಳೆಣ್ಣೆ ಬಾಟಲಿಯನ್ನು ಅಂಗಡಿಯಿಂದ ತಂದಿಟ್ಟುಕೊಂಡು ,ಅದರೊಳಗೆ ಆ ಗಾಜಿನ ಬಾಟಲಿಯು ಅರ್ಧ ತುಂಬುವಷ್ಟು ಎಳ್ಳೆಣ್ಣೆ ಹಾಕಿ ಅದಕ್ಕೆ ಸ್ವಲ್ಪ ಭೀಮಸೇನಿ ಕರ್ಪೂರ ಅಥವಾ ಪಚ್ಚ ಕರ್ಪೂರ ಪುಡಿ ಮಾಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.50 ಗ್ರಾಮ್ ಎಳ್ಳೆಣ್ಣೆಗೆ 5 ರಿಂದ 10 ಗ್ರಾಂನಷ್ಟು ಕರ್ಪೂರವನ್ನು ಹಾಕಬೇಕು.
ನಂತರ ಬಿಸಿಲಿನಲ್ಲಿ ಅರ್ಧ ಗಂಟೆಯವರೆಗೆ ಇಡಿ.ಇದನ್ನು ಬಳಸುವ ಪ್ರತಿ ಬಾರಿಯೂ ಬಿಸಿಲಿಗೆ ಈ ಎಣ್ಣೆಯನ್ನು ಇಟ್ಟು ಬಳಸಬೇಕು.ಇದನ್ನು ಬಿಸಿಲಿನಲ್ಲಿ ಹಚ್ಚಿಕೊಳ್ಳುವುದರಿಂದ ನೋವನ್ನು ಬಹಳ ಪರಿಣಾಮಕಾರಿಯಾಗಿ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ.
ಈಗ ನಿಮ್ಮ ಭುಜದ ನೋವಿಗೆ ,ಕೈ ಕಾಲು ನೋವಿಗೆ ,ಮೊಣಕೈ ನೋವಿಗೆ ,ಮಂಡಿ ನೋವಿಗೆ ,ಹಿಮ್ಮಡಿ ನೋವಿಗೆ ,ಪ್ರತಿಯೊಂದು ಅಂಗಾಂಗದ ನೋವಿಗೂ ಇದನ್ನು ಬಳಸಬಹುದು.ಈ ಎಣ್ಣೆಯನ್ನು ನೋವಿರುವ ಜಾಗಕ್ಕೆ ಹಚ್ಚಿ ಬಿಸಿಲಿನಲ್ಲಿ ಮಸಾಜ್ ಮಾಡಿಕೊಳ್ಳುವುದರಿಂದ ಉತ್ತಮ ಫಲಿತಾಂಶ ಕಾಣಬಹುದು.ಇದರ ಜೊತೆಗೆ ಆಹಾರ ಕ್ರಮದ ಬಗ್ಗೆ ಸ್ವಲ್ಪ ಗಮನ ಹರಿಸಿ.
ಧನ್ಯವಾದಗಳು.