ಹೊಸವರ್ಷಕ್ಕೆ ಕಾಲು ಇಟ್ಟಿದ್ದೇವೆ 2022ರ ಹೊಸವರ್ಷ ಹೊಸ ನಂಬಿಕೆ ಮತ್ತು ಹೊಸ ಭರವಸೆಯನ್ನು ಹೊತ್ತು ತಂದಿದೆ. ಮುಂದೆ ಬರುವ ವರ್ಷ ಹೇಗೆ ಎಂದು ಜನರು ಈಗಾಗಲೇ ಯೋಚಿಸುತ್ತಿದ್ದಾರೆ. ಅನೇಕ ಗ್ರಹಗಳು 2022ರಲ್ಲಿ ತಮ್ಮ ರಾಶಿಚಕ್ರವನ್ನು ಬದಲಾಯಿಸಲಿವೆ.2022ರಲ್ಲಿ ಗುರು ಗ್ರಹ ಕುಂಭ ಮತ್ತು ಮೀನ ರಾಶಿಗೆ ಸಾಗಲಿದ್ದಾನೆ. ಶನಿದೇವ 2022ರಲ್ಲಿ ತನ್ನ ಮನೆಯನ್ನು ಬದಲಾಯಿಸುತ್ತಾನೆ.ಈ ವರ್ಷ ಏಪ್ರಿಲ್ ತಿಂಗಳಿನಲ್ಲಿ ರಾಹು ಕೇತು ರಾಶಿಯನ್ನು ಬದಲಾಯಿಸುತ್ತವೆ. ಇಂತಹ ಸಮಯದಲ್ಲಿ ಕೆಲವು ನಿಯಮಗಳು ನಿಮ್ಮ ಜೀವನದಲ್ಲಿ ಹಲವು ಪ್ರಯೋಜನಗಳನ್ನು ಪಡೆಯಲು ಸಹಾಯವಾಗುತ್ತದೆ.
1, ಸೂರ್ಯೋದಯಕ್ಕೆ ಮುಂಚೆ ಏಳುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಇದರೊಂದಿಗೆ ಉದಯಿಸುತ್ತಿರುವ ಸೂರ್ಯನಿಗೆ ಅರ್ಗ್ಯವನ್ನು ಅರ್ಪಿಸುವುದರಿಂದ ನಿಮಗೆ ಆರೋಗ್ಯದ ಲಾಭಗಳು ಮತ್ತು ಮಾನಸಿಕ ನೆಮ್ಮದಿ ಕೂಡ ದೊರೆಯುತ್ತದೆ.2, ಸ್ನಾನದ ನೀರಿಗೆ ಅರಿಶಿನವನ್ನು ಬೆರೆಸಿ ಮತ್ತು ಪ್ರತಿದಿನ ಬೆಳಗ್ಗೆ ಮುಖ್ಯದ್ವಾರದ ಬಳಿ ಚಿಮುಕಿಸಬೇಕು. ಇದರೊಂದಿಗೆ ಮುಖ್ಯ ಬಾಗಿಲಿನ ಮುಂಬಾಗಿಲಿನಲ್ಲಿ ಸ್ವಚ್ಛತೆ ಕಾಪಾಡುತ್ತದೆ.
3, ಒಂದು ಬಿಳಿ ಕಾಗದ ಮೇಲೆ 108 ಬಾರಿ ರಾಮನ ಹೆಸರನ್ನು ಬರೆಯಿರಿ.ಇದನ್ನು ಹಿಟ್ಟಿನಲ್ಲಿ ಬೆರೆಸಿ ಚಂಡು ಮಾಡಿ ಮತ್ತು ಇದನ್ನು ಮೀನಿಗೆ ತಿನ್ನಲು ನೀಡಿ. ಈ ರೀತಿ ಮಾಡುವುದರಿಂದ ಶನಿ ದುಷ್ಪರಿಣಾಮ ದೂರವಾಗಿ ಗುರು ಲಾಭದಾಯಕ ಪರಿಸ್ಥಿತಿಯನ್ನು ಸೃಷ್ಟಿಸುತ್ತಾನೆ.4, ಪೂಜೆ ಸಮಯದಲ್ಲಿ ಮಲಗುವ ಸಮಯದಲ್ಲಿ ಅಥವಾ ಸಮಯ ಸಿಕ್ಕಾಗ ಸಾಧ್ಯವಾದಷ್ಟು ಗುರು ಮಂತ್ರವನ್ನು ಅಥವಾ ವಿಷ್ಣುವಿನ ಮಂತ್ರವನ್ನು ಪಟನೆ ಮಾಡಬೇಕು.
5, ಪ್ರತಿ ಗುರುವಾರ ಹಸುವಿಗೆ ಬೆಲ್ಲ ಮತ್ತು ಕಾಳು ಅಥವಾ ಸಿಹಿ ರೊಟ್ಟಿ ತಿನ್ನಿಸಲು ಪ್ರಯತ್ನಿಸಿ.ಈ ರೀತಿ ಮಾಡುವುದರಿಂದ ಜಾತಕದಲ್ಲಿ ಗುರುವಿನ ಸ್ಥಾನ ಬಲಗೊಳ್ಳುತ್ತದೆ.6, ಗುರುವಾರದಂದು ಕುಂಕುಮ ಅಥವಾ ಅರಿಶಿನವನ್ನು ಹಣೆಗೆ ತಿಲಕವಾಗಿ ಇಡುವುದನ್ನು ಮರೆಯದಿರಿ.ಅದು ನಿಮಗೆ ಮಾನಸಿಕ ಶಕ್ತಿಯನ್ನು ನೀಡುತ್ತದೆ.ಇದರಿಂದ ಕೌಟುಂಬಿಕ ಜೀವನ ಚೆನ್ನಾಗಿರುತ್ತದೆ.ಗುರುವಾರ ಸಾಲ ನೀಡುವುದನ್ನು ತಪ್ಪಿಸಬೇಕು ಮತ್ತು ಸಂಜೆ ಸಮಯದಲ್ಲಿ ಹಣ ವ್ಯವಹಾರವನ್ನು ತಪ್ಪಿಸಬೇಕು.