ಟೊಮೆಟೊದಲ್ಲಿ ಇದನ್ನು ಬೆರೆಸಿ ಉಪಯೋಗಿಸಿದರೆ ಬ್ಯೂಟಿ ಪಾರ್ಲರ್ ಗೆ ಹೋಗುವ ಅಗತ್ಯವೇ ಇಲ್ಲ!
ಸಾಮಾನ್ಯವಾಗಿ ಮಹಿಳೆಯರು ಯಾವುದೇ ರೀತಿಯ ಶುಭ ಸಮಾರಂಭಗಳಿಗೆ ,ಪಾರ್ಟಿ ,ಫಂಕ್ಷನ್ ಇತ್ಯಾದಿಗಳಿಗೆ ಹೋಗುವ ಮುನ್ನ ತಮ್ಮ ಮುಖ ಆಕರ್ಷಕವಾಗಿ ಕಾಣಬೇಕು ,ಪಳಪಳನೆ ಹೊಳೆಯಬೇಕು ಎಂಬ ಆಸೆಯನ್ನು ಪಡುತ್ತಾರೆ ಹಾಗಾಗಿ ಅನೇಕ ಕ್ರೀಮ್ ಗಳನ್ನು ಬಳಸುತ್ತಾರೆ.ಇನ್ನೂ ಅಂಥವರಿಗಾಗಿಯೇ ಇಂದಿನ ನಮ್ಮ ಲೇಖನದಲ್ಲಿ ತಕ್ಷಣವೇ ಸುಲಭವಾಗಿ ಮನೆಯಲ್ಲಿಯೇ ಸಿಗುವಂತಹ ವಸ್ತುಗಳನ್ನು ಬಳಸಿ ಈ ಫೇಸ್ ಪ್ಯಾಕ್ ಅನ್ನು ಮಾಡಿಕೊಳ್ಳುವ ವಿಧಾನವನ್ನು ತಿಳಿಯೋಣ ಬನ್ನಿ.
1 )ಟೊಮೆಟೊ ಸ್ಕ್ರಬ್-ಬೇಕಾಗುವ ಪದಾರ್ಥಗಳು :ಟೊಮೆಟೊ ,ಸಕ್ಕರೆ ಮತ್ತು ನಿಂಬೆಹಣ್ಣು.ಮಾಡುವ ವಿಧಾನ :ಮೊದಲಿಗೆ ಟೊಮೆಟೊವನ್ನು ಅರ್ಥ ಭಾಗವನ್ನಾಗಿ ಕಟ್ ಮಾಡಿಕೊಳ್ಳಿ.ಈಗ 1 ಬೌಲ್ ಗೆ 2 ಸ್ಪೂನ್ ಸಕ್ಕರೆ ,ಅರ್ಧ ಸ್ಪೂನ್ ನಿಂಬೆ ಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ಈ ಸಕ್ಕರೆ ಮತ್ತು ನಿಂಬೆ ಹಣ್ಣಿನ ಮಿಶ್ರಣವನ್ನು ಟೊಮೆಟೊ ಮೇಲೆ ಹಚ್ಚಿ.ಈಗ ಆ ಟೊಮೆಟೊವನ್ನು ತೆಗೆದುಕೊಂಡು ನಿಮ್ಮ ಮುಖಕ್ಕೆ 5 ನಿಮಿಷ ಸ್ಕ್ರಬ್ ಮಾಡಿಕೊಳ್ಳಿನಂತರ ಬಿಸಿ ನೀರಿನಿಂದ ತೊಳೆದುಕೊಳ್ಳಿ.
2 )ಫೇಸ್ ಮಾಸ್ಕ್:ಬೇಕಾಗುವ ಪದಾರ್ಥಗಳು :ಅಕ್ಕಿ ಹಿಟ್ಟು ,ಟೊಮೆಟೊ ರಸ ,1 ಸ್ಪೂನ್ ಹಸಿ ಹಾಲು ಮತ್ತು ನಿಂಬೆ ರಸ.:ಮಾಡುವ ವಿಧಾನ :ಮೊದಲಿಗೆ 1 ಚಿಕ್ಕ ಬೌಲ್ ಗೆ 2 ಸ್ಪೂನ್ ಅಕ್ಕಿ ಹಿಟ್ಟು ,2 ಸ್ಪೂನ್ ಟೊಮೆಟೊ ರಸ ,1 ಸ್ಪೂನ್ ಹಸಿ ಹಾಲು ಹಾಗೂ ಕಾಲು ಸ್ಪೂನ್ ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ಈಗ ಈ ಮಿಶ್ರಣವನ್ನು ಮುಖದ ಮೇಲೆ ಫೇಸ್ ಪ್ಯಾಕ್ ರೀತಿ ಹಾಕಿಕೊಳ್ಳಿ.20 ನಿಮಿಷಗಳ ಬಳಿಕ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ.ಹೀಗೆ ಮಾಡಿಕೊಳ್ಳುವುದರಿಂದ ಚರ್ಮದ ಮೇಲಿನ ಡೆಡ್ ಸೆಲ್ಸ್ ತೊಲಗಿ ಹೋಗುತ್ತದೆ ಏಕೆಂದರೆ ಟೊಮೆಟೊದಲ್ಲಿರುವ ಗುಣವು ಬ್ಲೀಚಿಂಗ್ ಏಜೆಂಟ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣವನ್ನು ಹೊಂದಿದೆ.ಹಾಗಾಗಿ ಚರ್ಮದ ಕಾಂತಿಯನ್ನು ವೃದ್ಧಿಸುತ್ತದೆ ಹಾಗೂ ನಿಮ್ಮ ಮುಖ ಪಳಪಳನೆ ಹೊಳೆಯುವಂತೆ ಮಾಡುತ್ತದೆ.
ಧನ್ಯವಾದಗಳು.