ಅನ್ನ ಮನುಷ್ಯನ ದಿನನಿತ್ಯದ ಸಾಮಾನ್ಯ ಆಹಾರ. ಒಂದು ಬೊಗಸೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಒಲೆಯ ಮೇಲೆ ನೀರು ಇಟ್ಟು. ಅದಕ್ಕೆ ಅಕ್ಕಿ ಸ್ವಲ್ಪ ಉಪ್ಪು ಹಾಕಿ 20 ನಿಮಿಷ ಬೇಯಿಸಿದರೆ ಮಲ್ಲಿಗೆ ಹೂವಿನ ಹದವನ್ನು ಹೊಂದಿರುವ ಅನ್ನ ತಯಾರು ಆಗುತ್ತದೆ. ಆದರೆ ಗಂಜಿಯನ್ನು ಹಲವಾರು ಜನರು ಚೆಲ್ಲುತ್ತಾರೆ.ಇದು ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ ಎಂದು ಹಲವಾರು ಜನರು ತಿಳಿದುಕೊಂಡಿದ್ದಾರೆ.ಅನ್ನದ ಗಂಜಿಯಲ್ಲಿ ಸಾಕಷ್ಟು ಪೌಷ್ಟಿಕಾಂಶಗಳು ಕಂಡು ಬರುತ್ತವೆ. ಜೊತೆಗೆ ಸ್ಟಾರ್ಚ್ ಅಂಶ ಕೂಡ ಇದೆ.
ಇದು ದೇಹದ ಆರೋಗ್ಯಕ್ಕೆ ಬಹಳ ರೂಪದಲ್ಲಿ ಉಪಯೋಗಕ್ಕೆ ಬರುತ್ತದೆ.ಅನ್ನದ ಗಂಜಿಯಿಂದ ಏನೆಲ್ಲಾ ಲಾಭಗಳು ಸಿಗುತ್ತವೆ ಎಂದು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಕೆಲವರು ಬಿಳಿ ಬಣ್ಣದ ಬಟ್ಟೆಗಳನ್ನು ಮತ್ತು ಬೇರೆ ಬಣ್ಣದ ಬಟ್ಟೆಗಳನ್ನು ಬಿಸಿಯಾದ ಅನ್ನದ ಗಂಜಿಯಲ್ಲಿ ಸ್ವಲ್ಪ ಹೊತ್ತು ನೆನಸಿ ಇಡುತ್ತಾರೆ. ಇದಕ್ಕೆ ಕಾರಣ ಅನ್ನದ ಗಂಜಿಯ ಬಣ್ಣ ಆಗಿರುವುದರಿಂದ ಬಟ್ಟೆಯ ಹೊಳಪು ಸ್ವಲ್ಪ ಹೊತ್ತಿನ ನಂತರ ಹೆಚ್ಚಾಗುತ್ತದೆ.ನಿಮ್ಮ ಯಾವುದೇ ಹತ್ತಿ ಬಟ್ಟೆಯಾ ಹೊಳಪನ್ನು ಹೆಚ್ಚು ಮಾಡಲು ಇನ್ನು ಮುಂದೆ ನೀವು ಸಹ ಹೀಗೆ ಮಾಡಿ.
ಇನ್ನು ಮುಖದ ಮೇಲೆ ಈಗಾಗಲೇ ಸಾಕಷ್ಟು ಕಪ್ಪು ಕಲೆಗಳನ್ನು ಹೊಂದಿರುವವರು ಮತ್ತು ವಿಪರೀತ ಗುಳ್ಳೆಗಳನ್ನು, ಮೊಡವೆಗಳನ್ನು ಹೊಂದಿರುವವರು ಅನ್ನದ ಗಂಜಿಯನ್ನು ನೈಸರ್ಗಿಕ ಔಷಧಿಯಾಗಿ ಬಳಕೆ ಮಾಡಬಹುದು.ಒಂದು ಹತ್ತಿ ತೆಗೆದುಕೊಂಡು ಉಗುರು ಬೆಚ್ಚಗೆ ಇರುವ ಅನ್ನದ ಗಂಜಿಯಲ್ಲಿ ಅದನ್ನು ಎದ್ದಿ ಮೊಡವೆಗಳು ಮತ್ತು ಕಲೆಗಳು ಹೆಚ್ಚಾಗಿ ಕಂಡು ಬರುವ ಜಾಗಕ್ಕೆ ಗಂಜಿಯನ್ನು ಲೇಪನ ಮಾಡಿ.ತುಂಬಾ ಕಡಿಮೆ ಸಮಯದಲ್ಲಿ ನಿಮಗೆ ಯಾವುದೆ ಖರ್ಚು ಇಲ್ಲದೆ ನಿಮ್ಮ ಮೊಡವೆಗಳು ಮತ್ತು ಅದರ ಕಲೆಗಳು ಮಾಯ ಆಗುತ್ತದೆ.ಅಷ್ಟೇ ಅಲ್ಲದೆ ಅನ್ನದ ಗಂಜಿಯನ್ನು ಒಂದು ಬಾಟಲ್ ನಲ್ಲಿ ಇಟ್ಟು ಅದಕ್ಕೆ ಸ್ವಲ್ಪ ಗ್ಲಿಸರಿನ್, ರೋಸ್ ವಾಟರ್ ಬೆರೆಸಿ ಮತ್ತು ಅರೇಂಜ್ ಏಸ್ನ್ಸಿಯಲ್ ಕೆಲವು ಹನಿಗಳನ್ನು ಅದಕ್ಕೆ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ.ಇದರಿಂದ ನಿಮ್ಮ ಮುಖ ಸುಂದರವಾಗಿ ಕಾಣಿಸುತ್ತದೆ.